ಪಾಕೂರ್(ಜಾರ್ಖಂಡ್) : ಜಾರ್ಖಂಡ್ನ ಪಕೂರ್ನಲ್ಲಿ ಚುನಾವಣಾ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮುಂದಿನ ನಾಲ್ಕು ತಿಂಗಳಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವುದಾಗಿ ಹೇಳಿಕೆ ನೀಡಿದ್ದಾರೆ.
-
Union Home Minister & BJP President Amit Shah in Pakur, Jharkhand: Supreme Court has given its verdict. Now, within 4 months a sky-high temple of Lord Ram will be built in Ayodhya. pic.twitter.com/l9VhF2s7Cs
— ANI (@ANI) December 16, 2019 " class="align-text-top noRightClick twitterSection" data="
">Union Home Minister & BJP President Amit Shah in Pakur, Jharkhand: Supreme Court has given its verdict. Now, within 4 months a sky-high temple of Lord Ram will be built in Ayodhya. pic.twitter.com/l9VhF2s7Cs
— ANI (@ANI) December 16, 2019Union Home Minister & BJP President Amit Shah in Pakur, Jharkhand: Supreme Court has given its verdict. Now, within 4 months a sky-high temple of Lord Ram will be built in Ayodhya. pic.twitter.com/l9VhF2s7Cs
— ANI (@ANI) December 16, 2019
ಅಯೋಧ್ಯೆ ರಾಮಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಈಗಾಗಲೇ ಸುಪ್ರೀಂಕೋರ್ಟ್ ತೀರ್ಪು ಹೊರಹಾಕಿದ್ದು, ಮುಂದಿನ ನಾಲ್ಕು ತಿಂಗಳಲ್ಲಿ ಅದ್ಧೂರಿ ರಾಮಮಂದಿರ ದೇಗುಲ ನಿರ್ಮಾಣಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.
ಇದೇ ವೇಳೆ ಮಾತನಾಡಿರುವ ಶಾ, ರಾಹುಲ್ ಬಾಬಾ ಮತ್ತು ಹೇಮಂತ್ ಸೊರೆನ್ ಜೀ ಅವರು ಜಾರ್ಖಂಡ್ನಲ್ಲಿ ನಿಂತು ಕಾಶ್ಮೀರದ ಬಗ್ಗೆ ಏಕೆ ಮಾತನಾಡುತ್ತಾರೆ. ನಾನು ನಿಮ್ಮನ್ನು ಕೇಳಲು ಬಯಸುತ್ತೇನೆ. ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗುವುದನ್ನು ನೀವು ನೋಡಲು ಬಯಸುವುದಿಲ್ಲವೇ!? 370 ಆರ್ಟಿಕಲ್ ರದ್ಧುಗೊಳಿಸಿದ ಬಳಿಕ ಕಾಶ್ಮೀರ ಶಾಶ್ವತವಾಗಿ ಭಾರತದ ಅವಿಭಾಜ್ಯ ಅಂಗವಾಗಿದೆ ಎಂದರು.