ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಸುದ್ದಿಗೋಷ್ಠಿ ನಡೆಸಿ, ಆರ್ಥಿಕತೆ ವಿಚಾರವಾಗಿ ಮಹತ್ವದ ಮಾಹಿತಿ ಹಂಚಿಕೊಂಡರು. ಈ ವೇಳೆ, ಕೇಂದ್ರ ಸರ್ಕಾರಿ ನೌಕರರಿಗೆ 10 ಸಾವಿರ ಹಬ್ಬದ ಮುಂಗಡ ಹಣ ಯೋಜನೆ ಘೋಷಣೆ ಮಾಡಿದ್ದಾರೆ.
ಕೇಂದ್ರ ಸರ್ಕಾರಿ ನೌಕರರಿಗೆ ಎಲ್ಟಿಸಿ ವೋಚರ್ ನೀಡಲು ನಿರ್ಧರಿಸಿರುವುದಾಗಿ ಘೋಷಣೆ ಮಾಡಿದ್ದು, ಈ ಮೂಲಕ ಜಿಎಸ್‌ಟಿ ಇರುವ ಉತ್ಪನ್ನ ಖರೀದಿ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ. ಇದೊಂದು ಡಿಜಿಟಲ್ ವರ್ಗಾವಣೆ ವ್ಯವಸ್ಥೆ ಆಗಿದ್ದು, ಜಿಎಸ್‌ಟಿ ನೋಂದಾಯಿತ ಅಂಗಡಿಗಳಲ್ಲಿ ವಸ್ತು ಖರೀದಿ ಮಾಡಬಹುದಾಗಿದೆ ಎಂದು ವಿತ್ತ ಸಚಿವೆ ಮಾಹಿತಿ ನೀಡಿದ್ದಾರೆ.
ಅರ್ಥಿಕತೆಯಲ್ಲಿ ಬೇಡಿಕೆ ಹೆಚ್ಚಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಹಿಂದೆ ಉದ್ಯೋಗಿಗಳು ತಾವು ಬಯಸುವ ಪ್ರದೇಶಗಳಿಗೆ ಭೇಟಿ ನೀಡಲು ಎಲ್ಟಿಸಿ ಹಣ ಬಳಸಿಕೊಳ್ಳುತ್ತಿದ್ದರು. ಆದರೆ ಇದೀಗ ದೇಶದಲ್ಲಿ ಕೊರೊನಾ ಸೋಂಕು ಇರುವ ಕಾರಣ ಅದನ್ನ ಬಳಕೆ ಮಾಡಿಕೊಂಡು ಶೇ.12 ಹಾಗೂ ಹೆಚ್ಚಿನ ಜಿಎಸ್‌ಟಿ ಇರುವ ಆಹಾರೇತರ ಉತ್ಪನ್ನ ಖರೀದಿ ಮಾಡಬಹುದಾಗಿದೆ.
ರಾಜ್ಯಗಳಿಗೆ 12,000 ಕೋಟಿ ರೂ. ದೀರ್ಘಕಾಲೀನ ಬಡ್ಡಿರಹಿತ ವಿಶೇಷ ಸಾಲ: ಸೀತಾರಾಮನ್ ಘೋಷಣೆ
ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಕೇಂದ್ರ ಸರ್ಕಾರ ತಮ್ಮ ನೌಕರರಿಗೆ ತಮ್ಮ ಆಯ್ಕೆ ಸ್ಥಳಗಳಿಗೆ ಹೋಗಲು ಎಲ್ಟಿಸಿ ನೀಡುತ್ತಿತ್ತು. ಆದರೆ, ಇದೀಗ ಉದ್ಯೋಗಿಗಳಿಗೆ 10 ಸಾವಿರ ರೂಪಾಯಿ ಬಡ್ಡಿ ರಹಿತ ಹಬ್ಬದ ಮುಂಗಡ ಯೋಜನೆ ಘೋಷಣೆ ಮಾಡಿದೆ. ಮಾ.31, 2021 ವರೆಗೂ ಈ ವೋಚರ್ ಬಳಕೆ ಮಾಡಿಕೊಳ್ಳಬಹುದಾಗಿದ್ದು, ಮುಂದಿನ 10 ಕಂತುಗಳಲ್ಲಿ ಇದನ್ನ ಮರುಪಾವತಿ ಮಾಡಲು ಅವಕಾಶ ನೀಡಲಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ಖುದ್ದಾಗಿ 5,675 ಕೋಟಿ ಹಾಗೂ 1,9000 ಕೋಟಿ ರೂ. ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳಿಗೆ ನೀಡುತ್ತಿದೆ.