ETV Bharat / bharat

ದೇಶದ ಆಸ್ತಿ ಬಂಡವಾಳಶಾಹಿಗಳಿಗೆ ನೀಡಲು ಮೋದಿ ಸರ್ಕಾರದ ಹುನ್ನಾರ: ಬಜೆಟ್​ ಬಗ್ಗೆ ರಾಗಾ ವಾಗ್ದಾಳಿ - ರಾಹುಲ್ ಗಾಂಧಿ ಬಜೆಟ್

ನಿರ್ಮಲಾ ಸೀತಾರಾಮನ್ ಮಂಡನೆ ಮಾಡಿರುವ ಕೇಂದ್ರ ಬಜೆಟ್​ಗೆ ರಾಹುಲ್ ಗಾಂಧಿ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಟ್ವೀಟ್ ಮಾಡಿದ್ದಾರೆ.

Rahul
Rahul
author img

By

Published : Feb 1, 2021, 6:41 PM IST

ನವದೆಹಲಿ: ಕೇಂದ್ರ ಸರ್ಕಾರ ಮಂಡನೆ ಮಾಡಿರುವ 2021-22ನೇ ಸಾಲಿನ ಬಜೆಟ್​ಗೆ ವಿಪಕ್ಷಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದ್ದು, ಇದೇ ವಿಚಾರವಾಗಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

  • Forget putting cash in the hands of people, Modi Govt plans to handover India's assets to his crony capitalist friends.#Budget2021

    — Rahul Gandhi (@RahulGandhi) February 1, 2021 " class="align-text-top noRightClick twitterSection" data=" ">

ಇದನ್ನೂ ಓದಿ: ಯಾವ್ಯಾವ ಕ್ಷೇತ್ರಕ್ಕೆ ಹೊರೆ, ಯಾವ್ಯಾವ ಕ್ಷೇತ್ರಕ್ಕೆ ರಿಲೀಫ್?.. ಬಜೆಟ್​​ನ ಸಮಗ್ರ ಮಾಹಿತಿ..

ಟ್ವೀಟ್ ಮಾಡಿ ತಮ್ಮ ಆಕ್ರೋಶ ಹೊರಹಾಕಿರುವ ರಾಹುಲ್ ಗಾಂಧಿ, ದೇಶದ ಆಸ್ತಿಯನ್ನು ತನ್ನ ಬಂಡವಾಳಶಾಹಿ ಸ್ನೇಹಿತರಿಗೆ ನೀಡುವ ಹುನ್ನಾರ ಕೇಂದ್ರ ಸರ್ಕಾರದಿಂದ ನಡೆದಿದೆ ಎಂದಿದ್ದಾರೆ. ಜನರ ಕೈಗಳಿಗೆ ಹಣ ನೀಡುವುದನ್ನು ಮರೆತು ಬಿಡಿ ಎಂದಿರುವ ರಾಗಾ, ನರೇಂದ್ರ ಮೋದಿ ನೇತೃತ್ವದ ಸರ್ಕಾರ ಭಾರತದ ಸಂಪತ್ತನ್ನ ತನ್ನ ಬಂಡವಾಳಶಾಹಿ ಸ್ನೇಹಿತರಿಗೆ ಹಸ್ತಾಂತರ ಮಾಡುವ ಹುನ್ನಾರ ನಡೆಸಿದೆ ಎಂದಿದ್ದಾರೆ.

ಓದಿ: ಕೃಷಿ, ಆರೋಗ್ಯ, ರಕ್ಷಣಾ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಮೀಸಲಿಡಿ: ರಾಹುಲ್ ಆಗ್ರಹ

ಕೋವಿಡ್​-19ನಂತಹ ಸಂದರ್ಭದಲ್ಲಿ ದೇಶದ ಜನರ ಕೈಯಲ್ಲಿ ಹಣ ನೀಡುವ ಬದಲು ಬಂಡವಾಳಶಾಹಿಗಳಿಗೆ ನೀಡುತ್ತಿದೆ ಎಂದಿದ್ದಾರೆ. ಬಜೆಟ್ ಮಂಡನೆಯಾಗುವುದಕ್ಕೂ ಮುಂಚಿತವಾಗಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೋದ್ಯಮಗಳಿಗೆ ಹೆಚ್ಚಿನ ಆದ್ಯತೆ ನೀಡಿ. ಯುವಜನತೆಗೆ ಉದ್ಯೋಗ ಸೃಷ್ಟಿಸಿ, ಕೃಷಿ, ಆರೋಗ್ಯ, ರಕ್ಷಣಾ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಮೀಸಲಿಡಿ ಎಂದು ಒತ್ತಾಯಿಸಿ ರಾಗಾ ಟ್ವೀಟ್ ಮಾಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.