ನವದೆಹಲಿ: ಎರಡನೇ ಅವಧಿಯಲ್ಲಿ ಮತ್ತಷ್ಟು ಖಡಕ್ಕಾಗಿರುವ ಪ್ರಧಾನಿ ನರೇಂದ್ರ ಮೋದಿ ಭಷ್ಟ್ರರಿಗೆ ಸಿಂಹಸ್ವಪ್ನರಾಗಿದ್ದಾರೆ. ಭ್ರಷ್ಟಾಚಾರ ಹಾಗೂ ವೃತ್ತಿಪರ ದುರ್ನಡತೆಯ ಕಾರಣಕ್ಕೆ ವಾರದ ಬಳಿಕ ಮತ್ತೊಂದು ಹಂತದಲ್ಲಿ ಅಧಿಕಾರಿಗಳಿಗೆ ಮನೆ ದಾರಿ ತೋರಿಸಿದ್ದಾರೆ.
ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದ ಹದಿನೈದು ಐಟಿ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ ನೀಡಲಾಗಿದೆ. ಆಯುಕ್ತರು, ಪ್ರಧಾನ ಆಯುಕ್ತರು, ಹೆಚ್ಚುವರಿ ಆಯುಕ್ತರು ಸೇರಿದಂತೆ 15 ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಪರಿಣಾಮ ಕೆಲಸ ಕಳೆದುಕೊಂಡಿದ್ದಾರೆ.
ಕೇಂದ್ರ ಆದಾಯ ತೆರಿಗೆ ಇಲಾಖೆಗೆ ಮೋದಿ ಶಾಕ್.. ಭ್ರಷ್ಟಾಚಾರ ಆರೋಪ ಹೊತ್ತ 12 ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ
ವಾರದ ಹಿಂದೆ ಭ್ರಷ್ಟಾಚಾರ ಹಾಗೂ ವೃತ್ತಿಪರ ದುರ್ನಡತೆಯ ಆರೋಪ ಎದುರಿಸುತ್ತಿದ್ದ 12 ಮಂದಿ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ ನೀಡಲಾಗಿತ್ತು.