ಕಣ್ಣೂರ್: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬರೋಬ್ಬರಿ 883 ಗ್ರಾಂ ತೂಕದ 46 ಲಕ್ಷ ಮೌಲ್ಯದ ಚಿನ್ನವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಶಾರ್ಜಾದಿಂದ ಬಂದಿಳಿದ ಕೊಯಿಕ್ಕೋಡ್ ಮೂಲದ ಮಹಿಳೆ ತನ್ನ ಉಡುಪಿನಲ್ಲಿ 883 ಗ್ರಾಂ ತೂಕದ ಚಿನ್ನ ಅಡಗಿಸಿಟ್ಟುಕೊಂಡಿದ್ದರು. ನಿಲ್ದಾಣದಲ್ಲಿದ್ದ ಕಸ್ಟಮ್ಸ್ ಅಧಿಕಾರಿಗಳು ಪರಿಶೀಲನೆ ನಡೆಸಿದ ವೇಳೆ ಚಿನ್ನ ಪತ್ತೆಯಾಗಿದೆ.