ETV Bharat / bharat

ದುಬೈನಿಂದ ಅಕ್ರಮವಾಗಿ ತರಲಾಗಿದ್ದ 49 ಲಕ್ಷ ರೂ. ಮೌಲ್ಯದ ಚಿನ್ನ ವಶ

ದುಬೈನಿಂದ ಕಣ್ಣೂರು ವಿಮಾನ ನಿಲ್ದಾಣ ಮೂಲಕ ಕಳ್ಳ ಸಾಗಾಟ ಮಾಡುತ್ತಿದ್ದ ಚಿನ್ನವನ್ನು ಕಸ್ಟಮ್ಸ್​ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.

Gold seized
ಅಕ್ರಮ ಚಿನ್ನ ಸಾಗಾಟ
author img

By

Published : Jan 15, 2021, 12:12 PM IST

ಕೊಚ್ಚಿ (ಕೇರಳ) : ದುಬೈನಿಂದ ಕಣ್ಣೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಯಾಣಿಕನೊಬ್ಬನಿಂದ, ಕಳ್ಳತನದಿಂದ ದೇಶದೊಳಗೆ ತರಲಾಗಿದ್ದ ಸುಮಾರು 49 ಲಕ್ಷ ರೂಪಾಯಿ ಮೌಲ್ಯದ 974 ಗ್ರಾಂ ಚಿನ್ನವನ್ನು ವಿಮಾನಯಾನ ವಿಚಕ್ಷಣಾ ದಳ​ ಅಧಿಕಾರಿಗಳು ಶುಕ್ರವಾರ ವಶಪಡಿಸಿಕೊಂಡಿದ್ದಾರೆ.

ಯುಎಇಯ ಶಾರ್ಜಾದಿಂದ ಕಣ್ಣೂರು ವಿಮಾನ ನಿಲ್ದಾಣಕ್ಕೆ ಬಂದ ಪ್ರಯಾಣಿಕ ಗುದದ್ವಾರದಲ್ಲಿ ಚಿನ್ನದ ಮಾದರಿಯ ನಾಲ್ಕು ಕ್ಯಾಪ್ಸೂಲ್‌ಗಳನ್ನು ಇಟ್ಟುಕೊಂಡಿದ್ದ. ಇದನ್ನು ವಿಚಕ್ಷಣಾ ದಳದ ಅಧಿಕಾರಿಗಳು ಪತ್ತೆ ಹಚ್ಚಿ ರೂ. 49,08,960 ಮೌಲ್ಯದ 974 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ ಕೊಚ್ಚಿಯ ಕಸ್ಟಮ್ಸ್​ ಕಮೀಷನರ್ ಕಚೇರಿ ಮಾಹಿತಿ ನೀಡಿದೆ.

ಓದಿ...ಎಲ್ಲೆಲ್ಲೂ ಇಟ್ಟುಕೊಂಡು ಬಂಗಾರ ಸಾಗಿಸುತ್ತಿದ್ದವರು ಅಂದರ್​... ಇವರ ಬಳಿ ಸಿಕ್ಕ ಚಿನ್ನ ಜಸ್ಟ್​ ಇಷ್ಟೇ ಕೆಜಿ!

ವ್ಯಕ್ತಿಯನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ತನಿಖೆ ಮುಂದುವರೆಸಿದ್ದು, ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬರಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.