ಪೂರ್ವ ಗೋದಾವರಿ( ಆಂಧ್ರಪ್ರದೇಶ) : ಇಲ್ಲಿನ ಪಾಪಿಕೊಂಡ ಬಳಿ ನಡೆದ ದೋಣಿ ದುರಂತ ಸಹಾಯ ಕಾರ್ಯಾಚರಣೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಗೋದಾವರಿ ದೋಣಿ ದುರಂತದಲ್ಲಿ ಸಾವನ್ನಪ್ಪಿದ ಪ್ರವಾಸಿಗರ ಮೃತದೇಹಗಳು ಒಂದೊಂದಾಗಿ ತೇಲಿಬರುತ್ತಿವೆ. ಇಂದು 10 ಮೃತದೇಹಗಳು ದೊರೆತ್ತಿದ್ದು, ಇಲ್ಲಿಯವರೆಗೆ 38 ಮೃತಗಳು ದೊರೆತಂತಾಗಿದೆ.
ದೋಣಿ ಮುಳುಗಡೆಯಾದ ಸಮೀಪದ ದೇವಿಪಟ್ನಂ ಬಳಿ ಇಂದು ಬೆಳಗ್ಗೆ ಆರು ಮೃತದೇಹಗಳು ಪತ್ತೆಯಾಗಿದ್ದು, ಇನ್ನು ನಾಲ್ಕು ಶವಗಳು ಪಾಶರ್ಲಪೂಡಿ ಬಳಿ ಪತ್ತೆಯಾಗಿವೆ. ಈ ಮೃತದೇಹಗಳನ್ನು ರಾಜಮಹೇಂದ್ರವರ ತಾಲೂಕು ಆಸ್ಪತ್ರೆಗೆ ಸಾಗಿಸಲಾಗಿದೆ. ಇಲ್ಲಿಯವರೆಗೆ 38 ಮೃತದೇಗಳು ಪತ್ತೆಯಾಗಿದ್ದು, ದೋಣಿ ದುರಂತದಲ್ಲಿ ನಾಪತ್ತೆಯಾಗಿದ್ದವರ ಸಂಬಂಧ ಸಹಾಯ ಕಾರ್ಯಾಚರಣೆ ಮುಂದುವರಿದಿದೆ.
ಇಂದು 10 ಮೃತದೇಹಗಳು ಪತ್ತೆಯಾಗಿದ್ದು, ಇನ್ನುಳಿದ ಮೃತದೇಹಗಳ ಪತ್ತೆ ಕಾರ್ಯ ನಡೆಯುತ್ತಿದೆ.