ETV Bharat / bharat

ಚತುಷ್ಪಥ ರಸ್ತೆ ಕಾಮಗಾರಿಯಲ್ಲಿ ಹೆದ್ದಾರಿ ಪ್ರಾಧಿಕಾರ ಹಲವು ತಪ್ಪೆಸಗಿದೆ : ಜಿ ಎಂ ಸಿದ್ದೇಶ್ವರ್​​

ಈ ಕುರಿತಂತೆ ನಾನು ಹಲವು ಬಾರಿ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವರಿಗೆ ಮನವಿ ಮಾಡಿದ್ದೇನೆ. ಆದರೆ, ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದಿದ್ದಾರೆ..

GM Siddeshwar talks in Loksabha on road issue
6 ಪಥದ ರಸ್ತೆ ಕಾಮಗಾರಿಯಲ್ಲಿ ಹೆದ್ದಾರಿ ಪ್ರಾಧಿಕಾರ ಹಲವು ತಪ್ಪು ಎಸಗಿದೆ: ಜಿ.ಎಂ ಸಿದ್ದೇಶ್ವರ್​​
author img

By

Published : Sep 19, 2020, 6:31 PM IST

ನವದೆಹಲಿ : ಚಿತ್ರದುರ್ಗ, ದಾವಣಗೆರೆ ಮತ್ತು ಹಾವೇರಿಗೆ ಚತುಷ್ಪಥ ರಸ್ತೆ ಕಾಮಗಾರಿ ನಿರ್ಮಾಣ 5ನೇ ಹಂತ ತಲುಪಿದೆ. ಈ ಕಾಮಗಾರಿ ನಿಧಾನವಾಗಿ ಸಾಗಿದೆ ಎಂದು ಸಂಸತ್​​ ಅಧಿವೇಶನದಲ್ಲಿ ಸಂಸದ ಜಿ ಎಂ ಸಿದ್ದೇಶ್ವರ್ ಆರೋಪಿಸಿದ್ದಾರೆ.

ಈ ಮಾರ್ಗದ ರಸ್ತೆ ಕಾಮಗಾರಿಯ ವೇಳೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಹತ್ತು ಹಲವು ತಪ್ಪುಗಳನ್ನು ಎಸಗಿದೆ. ಕಾಮಗಾರಿ ಅಡಿ ಲಕ್ಕಮುತ್ತನಹಳ್ಳಿ ಮಾರ್ಗದ ಮೇಲ್ಸೇತುವೆ (ಆರ್​ಓಬಿ) ಹಾಗೂ ಹೆಬ್ಬಾಳ ಆಳವರ್ತಿ, ಮಾಲಶೆಟ್ಟಿಹಳ್ಳಿ, ಹೆಚ್​ ಕಲ್ಪನಳ್ಳಿ ಹಾಗೂ ದಾವಣಗೆರೆ ಸಿಟಿ ಎಂಟ್ರಿಯಲ್ಲಿ ಅಂಡರ್ ಬ್ರಿಡ್ಜ್​​​ ಕಾಮಗಾರಿಯನ್ನು ಗಣನೆಗೆ ತೆಗೆದುಕೊಂಡಿಲ್ಲ. ಈ ಕುರಿತಂತೆ ನಾನು ಹಲವು ಬಾರಿ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವರಿಗೆ ಮನವಿ ಮಾಡಿದ್ದೇನೆ. ಆದರೆ, ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದಿದ್ದಾರೆ.

ಲೋಕಸಭೆಯಲ್ಲಿ ಸಂಸದ ಜಿ ಎಂ ಸಿದ್ದೇಶ್ವರ್ ಮಾತು

ಅಲ್ಲದೆ ಈ ಮೂಲಕ ನಾನು ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇನೆ. ದಯವಿಟ್ಟು ಹೆದ್ದಾರಿ ಕಾಮಗಾರಿ ಕೈಗೆತ್ತಿಕೊಂಡು ಆದಷ್ಟು ಶೀಘ್ರ ಮುಕ್ತಾಯಗೊಳಿಸಬೇಕಿದೆ. ಕಾಮಗಾರಿ ಆರಂಭಿಸುವಂತೆ ಆ ಭಾಗದ ಜನತೆ ನಿರಂತರ ಪ್ರತಿಭಟನೆ ಮಾಡುತ್ತಿದ್ದಾರೆ. ಈ ಹಿನ್ನೆಲೆ ಹೆದ್ದಾರಿ ಪ್ರಾಧಿಕಾರಕ್ಕೆ ಕಾಮಗಾರಿ ಕೈಗೆತ್ತಿಕೊಳ್ಳಲು ಮನವಿ ಮಾಡುತ್ತೇನೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.