ETV Bharat / bharat

ಭಾರತ-ಚೀನಾ 'ಅರ್ಥ' ಅತ್ತಿಂದಿತ್ತ! ಅನೌಪಚಾರಿಕ ಶೃಂಗಸಭೆಯಲ್ಲಿ ಸಿಗುತ್ತಾ ಪರಿಹಾರ?

ಆಗಸ್ಟ್ 11ರಿಂದ 13ರವರೆಗೆ ಚೀನಾ ಪ್ರವಾಸ ಕೈಗೊಂಡಿದ್ದ ಭಾರತದ ವಿದೇಶಾಂಗ ಸಚಿವ ಡಾ.ಎಸ್​. ಜೈಶಂಕರ್​, ಗಡಿ ವಿಚಾರದಲ್ಲಿ ಉಭಯ ದೇಶಗಳ ಭಿನ್ನಾಭಿಪ್ರಾಯಗಳ ಬಗ್ಗೆ ಚರ್ಚೆ ನಡೆಸಿದ್ದರು.

ಅನೌಪಚಾರಿಕ ಶೃಂಗಸಭೆ
author img

By

Published : Oct 5, 2019, 6:05 AM IST

ನವದೆಹಲಿ/ಬೀಜಿಂಗ್: ಭಾರತ-ಚೀನಾ ನಡುವಿನ ಎರಡನೇ ಅನೌಪಚಾರಿಕ ಶೃಂಗಸಭೆ ಅಕ್ಟೋಬರ್ 11ರಿಂದ 13ರವರೆಗೆ ಚೆನ್ನೈನ ಮಹಾಬಲಿಪುರಂನಲ್ಲಿ ನಡೆಯಲಿದೆ ಎಂಬ ಮಾಹಿತಿ ಇದೆ. ಆದರೆ ಈ ಬಗ್ಗೆ ಉಭಯ ದೇಶಗಳು ದೃಢಪಡಿಸಿಲ್ಲ. ಕಾಶ್ಮೀರ ವಿಚಾರದಲ್ಲಿ ಚೀನಾ ವರ್ತನೆ ಬಗ್ಗೆ ಭಾರತಕ್ಕೆ ಅಸಮಾಧಾನವಿದೆ.

ಆಗಸ್ಟ್ 11ರಿಂದ 13ರವರೆಗೆ ಚೀನಾ ಪ್ರವಾಸ ಕೈಗೊಂಡಿದ್ದ ಭಾರತದ ವಿದೇಶಾಂಗ ಸಚಿವ ಡಾ.ಎಸ್​. ಜೈಶಂಕರ್​, ಗಡಿ ವಿಚಾರದಲ್ಲಿ ಉಭಯ ದೇಶಗಳ ಭಿನ್ನಾಭಿಪ್ರಾಯದ ಬಗ್ಗೆ ಚರ್ಚೆ ನಡೆಸಿದ್ದರು. ಭಾರತ ತನ್ನ ಭೂಪ್ರದೇಶದ ಬಗ್ಗೆ ವಾದ ಮಂಡಿಸುತ್ತಿದ್ದೆಯೇ ಹೊರತು ಹೆಚ್ಚಿನದನ್ನು ಅಪೇಕ್ಷಿಸುತ್ತಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು.

2018ರಲ್ಲಿ ಚೀನಾದ ವುಹಾನ್​ನಲ್ಲಿ ಭಾರತ- ಚೀನಾ ಮೊದಲನೇ ಅನೌಪಚರಿಕ ಶೃಂಗಸಭೆ ನಡೆದಿತ್ತು. ಈ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ- ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಆರು ಸುತ್ತಿನ ಮಾತುಕತೆ ನಡೆಸಿದ್ದರು. ಉಭಯ ದೇಶಗಳ ನಡುವಿನ ಗಡಿ ಮತ್ತಿತರ ಸಮಸ್ಯೆ, ಜಾಗತಿಕ ಸ್ಥಾನಮಾನದ ಬಗ್ಗೆ ಮಾತುಕತೆ ನಡೆಸಲಾಗಿತ್ತು. ಈ ಶೃಂಗಸಭೆ ವಿಶ್ವಮಟ್ಟದಲ್ಲಿ ಭಾರಿ ಗಮನ ಸೆಳೆದಿತ್ತು. ಭಾರತ ಹಾಗೂ ಚೀನಾ ಜಾಗತಿಕ ಅಭಿವೃದ್ಧಿ ನಿಟ್ಟಿನಲ್ಲಿ ಪ್ರಮುಖ ರಾಷ್ಟ್ರಗಳಾಗಿವೆ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಹೇಳಿದ್ದರು.

ಸಹಕಾರ ಒಕ್ಕೂಟವನ್ನು ಮತ್ತಷ್ಟು ಬಲಪಡಿಸುವುದಾಗಿ ಶೃಂಗಸಭೆ ಮುಕ್ತಾಯದ ಬಳಿಕ ಜಂಟಿ ಪ್ರಕಟಣೆಯಲ್ಲಿ ಉಭಯ ದೇಶಗಳು ಹೇಳಿಕೊಂಡಿದ್ದವು. ಭಿನ್ನಾಭಿಪ್ರಾಯವನ್ನು ಶಾಂತಿ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳುವ ತೀರ್ಮಾನಕ್ಕೆ ಬರಲಾಗಿತ್ತು.

ಇದೇ ವರ್ಷದ ಫೆಬ್ರವರಿ 14ರಂದು ಪುಲ್ವಾಮಾದಲ್ಲಿ ನಡೆದ ಭೀಕರ ಉಗ್ರಕೃತ್ಯಕ್ಕೆ ವಿಶ್ವಾದ್ಯಂತ ಭಾರಿ ಖಂಡನೆ ವ್ಯಕ್ತವಾಗಿತ್ತು. ಆದರೆ ಮಸೂದ್ ಅಜರ್​​ನನ್ನು 'ಜಾಗತಿಕ ಉಗ್ರ' ಎಂದು ಘೋಷಣೆ ಮಾಡುವ ಬಗೆಗಿನ ಚರ್ಚೆಯಲ್ಲಿ ಚೀನಾ ಮಾತ್ರ ಉಗ್ರ ವಿರೋಧಿ ನಿಲುವು ತಳೆಯಲು ಹಿಂದೇಟು ಹಾಕಿತ್ತು. ಇದು ಸಹಜವಾಗಿಯೇ ಭಾರತದ ಕಣ್ಣು ಕೆಂಪಗಾಗಿಸಿತ್ತು.

ಪ್ರತಿಯೊಂದು ಶೃಂಗಸಭೆಯೂ ಉಭಯ ದೇಶಗಳ ಭಿನ್ನಾಭಿಪ್ರಾಯ ಸರಿಪಡಿಸಲು ಹಾಗೂ ನಿಲುವು ಮಂಡನೆಗೆ ಉತ್ತಮ ವೇದಿಕೆಯಾಗಿದೆ. ಭಾರತ ಆರ್ಥಿಕ ಹಿಂಜರಿತದಿಂದ ಬಳಲುತ್ತಿದ್ದರೆ, ಅತ್ತ ಚೀನಾ ಸಹ ಇದೇ ಪರಿಸ್ಥಿತಿಯಲ್ಲಿ ಒದ್ದಾಡುತ್ತಿದೆ. ಅಮೆರಿಕದೊಂದಿಗಿನ ವಾಣಿಜ್ಯ ಸಮರದಿಂದ ಚೀನಾದ ಆರ್ಥಿಕತೆ ಕುಸಿತದ ಹಾದಿ ಹಿಡಿದಿದೆ. ಹೀಗಾಗಿ ಇದೇ ತಿಂಗಳಲ್ಲಿ ನಡೆಯಲಿದೆ ಎನ್ನಲಾದ ಅನೌಪಚಾರಿಕ ಶೃಂಗಸಭೆ ಆರ್ಥಿಕತೆ ನಿಟ್ಟಿನಲ್ಲೂ ಕೊಂಚ ಮಹತ್ವ ಪಡೆದಿದೆ.

ಭಾರತ ತನ್ನ ಸೇನೆಯನ್ನು ಬಲಪಡಿಸುತ್ತಲೇ ಮಿತ್ರರಾಷ್ಟ್ರಗಳ ಬೆಂಬಲದೊಂದಿಗೆ ಚೀನಾವನ್ನು ಹಿಮ್ಮೆಟ್ಟಿಸುವ ಕಾರ್ಯತಂತ್ರ ರೂಪಿಸುತ್ತಿದೆ. ಭಾರತವನ್ನು ಯುದ್ಧಕ್ಕೆ ಆಹ್ವಾನಿಸುವ ಚೀನಾದ ರಣತಂತ್ರವನ್ನು ಭಾರತ ಸಮರ್ಥವಾಗಿಯೇ ಎದುರಿಸುತ್ತಾ ಬಂದಿದೆ.

ವಿಷ್ಣು ಪ್ರಕಾಶ್, ಭಾರತದ ಮಾಜಿ ವಿದೇಶಾಂಗ ವಕ್ತಾರ

Intro:Body:

ನವದೆಹಲಿ: ಭಾರತ-ಚೀನಾ ನಡುವಿನ ಎರಡನೇ ಅನೌಪಚಾರಿಕ ಶೃಂಗಸಭೆ ಅಕ್ಟೋಬರ್ 11ರಿಂದ 13ರವರೆಗೆ ಚೆನ್ನೈನ ಮಹಾಬಲಿಪುರಂನಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ. ಆದರೆ ಈ ಬಗ್ಗೆ ಉಭಯ ದೇಶಗಳು ದೃಢಪಡಿಸಿಲ್ಲ. ಕಾಶ್ಮೀರ ವಿಚಾರದಲ್ಲಿ ಚೀನಾ ವರ್ತನೆ ಬಗ್ಗೆ ಭಾರತಕ್ಕೆ ಒಂದಷ್ಟು ಭಿನ್ನ ನಿಲುವು ಇದೆ.

ಆಗಸ್ಟ್ 11ರಿಂದ 13ರವರೆಗೆ ಚೀನಾ ಪ್ರವಾಸ ಕೈಗೊಂಡಿದ್ದ ಭಾರತದ ವಿದೇಶಾಂಗ ಸಚಿವ ಡಾ.ಎಸ್​. ಜೈಶಂಕರ್​, ಗಡಿ ವಿಚಾರದಲ್ಲಿ ಉಭಯ ದೇಶಗಳ ಭಿನ್ನಾಭಿಪ್ರಾಯದ ಬಗ್ಗೆ ಚರ್ಚೆ ಮಾಡಲಾಗಿದೆ. ಭಾರತ ತನ್ನ ಜಾಗದ ಬಗ್ಗೆ ವಾದ ಮಂಡಿಸುತ್ತಿದ್ದೆಯೇ ಹೊರತು ಹೆಚ್ಚಿನದನ್ನು ಅಪೇಕ್ಷಿಸುತ್ತಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.

2018ರಲ್ಲಿ ಚೀನಾದ ವುಹಾನ್​ನಲ್ಲಿ ಭಾರತ- ಚೀನಾ ಮೊದಲನೇ ಅನೌಪಚರಿಕ ಶೃಂಗಸಭೆ ನಡೆದಿತ್ತು. ಈ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ- ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಆರು ಸುತ್ತಿನ ಮಾತುಕತೆ ನಡೆಸಿದ್ದರು. ಉಭಯ ದೇಶಗಳ ನಡುವಿನ ಸಮಸ್ಯೆ, ಜಾಗತಿಕ ಸ್ಥಾನಮಾನದ ಬಗ್ಗೆ ಮಾತುಕತೆ ನಡೆಸಲಾಗಿತ್ತು. ಈ ಶೃಂಗಸಭೆಯ ವಿಶ್ವಮಟ್ಟದಲ್ಲಿ ಭಾರಿ ಗಮನ ಸೆಳೆದಿತ್ತು. ಭಾರತ ಹಾಗೂ ಚೀನಾ ಜಾಗತಿಕ ಅಭಿವೃದ್ಧಿ ನಿಟ್ಟಿನಲ್ಲಿ ಪ್ರಮುಖ ರಾಷ್ಟ್ರಗಳಾಗಿವೆ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಹೇಳಿದ್ದರು.

ಸಹಕಾರ ಒಕ್ಕೂಟವನ್ನು ಮತ್ತಷ್ಟು ಬಲಪಡಿಸುವುದಾಗಿ ಶೃಂಗಸಭೆ ಮುಕ್ತಾಯದ ಬಳಿಕ ಜಂಟಿ ಪ್ರಕಟಣೆಯಲ್ಲಿ ಉಭಯ ದೇಶಗಳು ಹೇಳಿಕೊಂಡಿದ್ದವು. ಭಿನ್ನಾಭಿಪ್ರಾಯವನ್ನು ಶಾಂತಿ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳುವ ತೀರ್ಮಾನಕ್ಕೆ ಬರಲಾಗಿತ್ತು.

ಇದೇ ವರ್ಷದ ಫೆಬ್ರವರಿ 14ರಂದು ಪುಲ್ವಾಮಾದಲ್ಲಿ ನಡೆದ ಭೀಕರ ಉಗ್ರಕೃತ್ಯಕ್ಕೆ ವಿಶ್ವಾದ್ಯಂತ ಭಾರಿ ಖಂಡನೆ ವ್ಯಕ್ತವಾಗಿತ್ತು. ಆದರೆ ಮಸೂದ್ ಅಜರ್​​ನನ್ನು ಜಾಗತಿಕ ಉಗ್ರ ಎಂದು ಘೋಷಣೆ ಮಾಡುವ ಬಗೆಗಿನ ಚರ್ಚೆಯಲ್ಲಿ ಚೀನಾ ಮಾತ್ರ ಉಗ್ರ ವಿರೋಧಿ ನಿಲುವು ತಳೆಯಲು ಹಿಂದೇಟು ಹಾಕಿತ್ತು. ಇದು ಸಹಜವಾಗಿಯೇ ಭಾರತದ ಕಣ್ಣು ಕೆಂಪಗಾಗಿಸಿತ್ತು.

ಪ್ರತಿಯೊಂದು ಶೃಂಗಸಭೆಯೂ ಉಭಯ ದೇಶಗಳ ಭಿನ್ನಾಭಿಪ್ರಾಯ ಸರಿಪಡಿಸಲು ಹಾಗೂ ನಿಲುವು ಮಂಡನೆಗೆ ಉತ್ತಮ ವೇದಿಕೆಯಾಗಿದೆ. ಭಾರತ ಆರ್ಥಿಕ ಹಿಂಜರಿತದಿಂದ ಬಳಲುತ್ತಿದ್ದರೆ ಅತ್ತ ಚೀನಾ ಸಹ ಇದೇ ಪರಿಸ್ಥಿತಿಯಲ್ಲಿ ಒದ್ದಾಡುತ್ತಿದೆ. ಅಮೆರಿಕದೊಂದಿಗಿನ ವಾಣಿಜ್ಯ ಸಮರದಿಂದ ಚೀನಾದ ಆರ್ಥಿಕತೆ ಕುಸಿತದ ಹಾದಿ ಹಿಡಿದಿದೆ. ಹೀಗಾಗಿ ಇದೇ ತಿಂಗಳಲ್ಲಿ ನಡೆಯಲಿದೆ ಎನ್ನಲಾದ ಅನೌಪಚಾರಿಕ ಶೃಂಗಸಭೆ ಆರ್ಥಿಕತೆ ನಿಟ್ಟಿನಲ್ಲೂ ಕೊಂಚ ಮಹತ್ವ ಪಡೆದಿದೆ.

ಭಾರತ ತನ್ನ ಸೇನೆಯನ್ನು ಬಲಪಡಿಸುತ್ತಲೇ ಮಿತ್ರರಾಷ್ಟ್ರಗಳ ಬೆಂಬಲದೊಂದಿಗೆ ಚೀನಾವನ್ನು ಹಿಮ್ಮೆಟ್ಟಿಸುವ ಕಾರ್ಯತಂತ್ರ ರೂಪಿಸುತ್ತಿದೆ. ಭಾರತವನ್ನು ಯುದ್ಧಕ್ಕೆ ಆಹ್ವಾನಿಸುವ ಚೀನಾದ ರಣತಂತ್ರವನ್ನು ಭಾರತ ಸಮರ್ಥವಾಗಿಯೇ ಎದುರಿಸುತ್ತಾ ಬಂದಿದೆ.

ವಿಷ್ಣು ಪ್ರಕಾಶ್, ಮಾಜಿ ವಿದೇಶಾಂಗ ವಕ್ತಾರ

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.