ETV Bharat / bharat

MBBS ಡಿಗ್ರಿ ಪಡೆಯುವುದು ಇನ್ನು ಸರಳ... ಕಾಲೇಜು ಶುಲ್ಕದಲ್ಲಿ ಶೇ 70ರಷ್ಟು ಇಳಿಕೆ: ಹೇಗೆ ಗೊತ್ತೆ? - ಭಾರತೀಯ ವೈದ್ಯಕೀಯ ಮಂಡಳಿ

ಆಡಳಿತ ಮಂಡಳಿ (ಬಿಒಜಿ) ರೂಪಿಸಿರುವ ಕಡಿತದಲ್ಲಿ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿನ ಶೇ 50ರಷ್ಟು ಎಂಬಿಬಿಎಸ್ ಸೀಟುಗಳಿಗೆ ಶುಲ್ಕ ಮೊತ್ತವು ₹ 6 ಲಕ್ಷದಿಂದ ₹ 10 ಲಕ್ಷದವರೆಗೆ ಇರಲಿದೆ. ಪ್ರಸ್ತುತ, ದೆಹಲಿ ಮತ್ತು ಮಹಾರಾಷ್ಟ್ರ ಸೇರಿ ಇತರ ರಾಜ್ಯಗಳಲ್ಲಿನ ಪ್ರತಿ ಎಂಬಿಬಿಎಸ್​​ ವಿದ್ಯಾರ್ಥಿಗೆ ವಾರ್ಷಿಕ ₹ 25 ಲಕ್ಷ ವೆಚ್ಚವಾಗುತ್ತಿದೆ. ವಿವಿಧ ಕಾಲೇಜುಗಳಲ್ಲಿ ಮೂರು ವರ್ಷಗಳ ಪಿಜಿ ಕೋರ್ಸ್​ನ ವೆಚ್ಚ ₹ 1 ಕೋಟಿಯಿಂದ ₹ 3 ಕೋಟಿಯ ನಡುವೆ ವೆಚ್ಚವಾಗುತ್ತಿದೆ.

Medical
ವೈದ್ಯಕೀಯ
author img

By

Published : Dec 9, 2019, 11:58 AM IST

ನವದೆಹಲಿ: ವೈದ್ಯಕೀಯ ವಿದ್ಯಾರ್ಥಿಗಳಿಗೆ ದೊಡ್ಡ ಹೊರೆಯಾಗಿರುವ ಶುಲ್ಕಪಾವತಿಯು ಮುಂದಿನ ದಿನಗಳಲ್ಲಿ ಕಡಿಮೆಯಾಗಲಿದ್ದು, ಜನಸಾಮಾನ್ಯರೂ ಕೂಡ ಎಂಬಿಬಿಎಸ್​​ನಂತಹ ದುಬಾರಿ ವೆಚ್ಚದ ಪದವಿ ಪಡೆಯುವಂತಾಗಲಿದೆ.

ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಶುಲ್ಕ ರಚನೆಗಾಗಿ ರಚಿಸಲಾದ ಮಾರ್ಗಸೂಚಿಗಳ ಸಮಿತಿಯು ಅರ್ಧದಷ್ಟು ಪದವಿ ಮತ್ತು ಸ್ನಾತಕೋತ್ತರ ಸೀಟುಗಳಿಗೆ ಕ್ರಮವಾಗಿ ಶೇ 70 ಮತ್ತು ಶೇ 90 ರಷ್ಟು ಶುಲ್ಕ ಕಡಿತಗೊಳಿಸುವಂತೆ ಪ್ರಸ್ತಾಪಿಸಿದೆ.

ರಾಷ್ಟ್ರೀಯ ವೈದ್ಯಕೀಯ ಆಯೋಗದ ಜೊತೆಗೆ ಕೇಂದ್ರ ಆರೋಗ್ಯ ಸಚಿವಾಲಯವು ಆಡಳಿತ ಮಂಡಳಿಯನ್ನು (ಬಿಒಜಿ) ಕೋರಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಖಾಸಗಿ ವೈದ್ಯಕೀಯ ಕಾಲೇಜುಗಳ ಮತ್ತು ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿ ಶುಲ್ಕ ರಚನೆಯ ಕರಡು ಮಾರ್ಗಸೂಚಿಗಳನ್ನು ಸಿದ್ಧಪಡಿಸುವ ಅಧಿಕಾರ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ (ಎಂಸಿಐ) ಹೊಂದಿದೆ.

ಮೂಲಗಳ ಪ್ರಕಾರ, ಬಿಒಜಿ ರೂಪಿಸಿರುವ ಈ ಕಡಿತದಲ್ಲಿ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿನ ಶೇ 50ರಷ್ಟು ಎಂಬಿಬಿಎಸ್ ಸೀಟುಗಳಿಗೆ ಶುಲ್ಕ ಮೊತ್ತವು ₹ 6 ಲಕ್ಷದಿಂದ ₹ 10 ಲಕ್ಷದವರೆಗೆ ಇರಲಿದೆ. ಪ್ರಸ್ತುತ, ದೆಹಲಿ ಮತ್ತು ಮಹಾರಾಷ್ಟ್ರ ಸೇರಿ ಇತರ ರಾಜ್ಯಗಳಲ್ಲಿನ ಪ್ರತಿ ಎಂಬಿಬಿಎಸ್​​ ವಿದ್ಯಾರ್ಥಿಗೆ ವಾರ್ಷಿಕ ₹ 25 ಲಕ್ಷ ವೆಚ್ಚವಾಗುತ್ತಿದೆ. ವಿವಿಧ ಕಾಲೇಜುಗಳಲ್ಲಿ ಮೂರು ವರ್ಷಗಳ ಪಿಜಿ ಕೋರ್ಸ್​ನ ವೆಚ್ಚ ₹ 1 ಕೋಟಿಯಿಂದ ₹ 3 ಕೋಟಿಯ ನಡುವೆ ವೆಚ್ಚವಾಗುತ್ತಿದೆ.

ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಸುಧಾರಣೆಗಳನ್ನು ತರಲು ಎನ್‌ಎಂಸಿ ಕಾಯ್ದೆಗೆ ಆಗಸ್ಟ್ 8ರಂದು ರಾಷ್ಟ್ರಪತಿಗಳ ಒಪ್ಪಿಗೆ ದೊರಕಿತ್ತು. ವೈದ್ಯಕೀಯ ಶಿಕ್ಷಣ, ವೃತ್ತಿಪರ ಕೋರ್ಸ್​ ಮತ್ತು ಸಂಸ್ಥೆಗಳ ಎಲ್ಲ ಅಂಶಗಳ ಅಭಿವೃದ್ಧಿ ಮತ್ತು ನಿಯಂತ್ರಣಕ್ಕಾಗಿ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದ ಸ್ಥಾನದಲ್ಲಿ ಎನ್‌ಎಂಸಿ ಸ್ಥಾಪಿಸಲು ಈ ಕಾಯಿದೆಯು ಅವಕಾಶ ನೀಡಲಿದೆ.

ಬಿಒಜಿ ರಾಜ್ಯಗಳೊಂದಿಗೆ ಈಗಾಗಲೇ ಸಮಾಲೋಚನೆ ನಡೆಸಿದ್ದು, ಶುಲ್ಕ ರಚನೆಗಾಗಿ ಕರಡು ಮಾರ್ಗಸೂಚಿಗಳನ್ನು ರೂಪಿಸಲು ಅವರ ಸಲಹೆಗಳನ್ನು ಆಹ್ವಾನಿಸಿದೆ. ಶುಲ್ಕ ನಿಯಂತ್ರಣಕ್ಕಾಗಿ ಕರಡು ಮಾರ್ಗಸೂಚಿಗಳನ್ನು ಸಿದ್ಧಪಡಿಸುವಂತೆ ಆಡಳಿತ ಮಂಡಳಿಯನ್ನು ಕೋರಲಾಗಿದ್ದು, ಇದನ್ನು ಎನ್‌ಎಂಸಿಯು ಮೂಲ ದಾಖಲೆಯಾಗಿ ಬಳಸಬಹುದು ಎಂದು ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಷ್ಟ್ರೀಯ ವೈದ್ಯಕೀಯ ಆಯೋಗ ಕಾಯ್ದೆ 2019ರ ಸೆಕ್ಷನ್ 10ರ ಉಪವಿಭಾಗ (1) ಷರತ್ತು 1ರ ಅನ್ವಯ, ಖಾಸಗಿ ವೈದ್ಯಕೀಯ ಸಂಸ್ಥೆಗಳಲ್ಲಿ ಶೇ 50ರಷ್ಟು ಸೀಟುಗಳಿಗೆ ಸಂಬಂಧಿಸಿದಂತೆ ಶುಲ್ಕ ಮತ್ತು ಇತರ ಎಲ್ಲ ಶುಲ್ಕಗಳನ್ನು ನಿರ್ಧರಿಸಲು ಮಾರ್ಗಸೂಚಿಗಳನ್ನು ರೂಪಿಸಲು ಆಯೋಗಕ್ಕೆ ಅಧಿಕಾರ ನೀಡುತ್ತದೆ. ಎನ್ಎಂಸಿ ಕಾಯ್ದೆ 2019ರ ಅಡಿ ಸರ್ಕಾರದ ಅನುದಾನದಲ್ಲಿ ನಡೆಯುವ ವಿಶ್ವವಿದ್ಯಾಲಯಗಳು ಮತ್ತು ಡೀಮ್ಡ್​ ವಿವಿಗಳು ಇದರಡಿ ಪರಿಗಣಿಸಲಾಗುವುದು.

ಪ್ರವೇಶದ ಸಮಯದಲ್ಲಿ ವಿದ್ಯಾರ್ಥಿಗಳಿಂದ ಮೊದಲ ವರ್ಷದ ಶುಲ್ಕ ಮಾತ್ರ ವಿಧಿಸುವಂತೆ ದೇಶಾದ್ಯಂತ ಇರುವ ಖಾಸಗಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳಿಗೆ ಸಚಿವಾಲಯ ಕೋರಿದೆ. ಭಾರತೀಯ ವೈದ್ಯಕೀಯ ಮಂಡಳಿ ಕಾಯ್ದೆ 1956ರ ಪ್ರಕಾರ, ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಶುಲ್ಕ ನಿಯಂತ್ರಿಸುವ ಯಾವುದೇ ಅವಕಾಶವಿಲ್ಲ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.