ಜೈಪುರ (ರಾಜಸ್ಥಾನ): ಹಥ್ರಾಸ್ ಸಂತ್ರಸ್ತೆಯ ಅಂತ್ಯಕ್ರಿಯೆಯನ್ನು ತಡರಾತ್ರಿ ನಡೆಸಿದ್ದಕ್ಕಾಗಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಯುವತಿಯ ಅಂತ್ಯಕ್ರಿಯೆಯನ್ನು ಮುಂಜಾನೆ 2 ಗಂಟೆಗೆ ಹಥ್ರಾಸ್ನಲ್ಲಿ ನಡೆಸಲಾಯಿತು. ಇದು ಹೃದಯ ವಿದ್ರಾವಕವಾಗಿದೆ ಮತ್ತು ಇಡೀ ದೇಶದ ನೆನಪಿನಲ್ಲಿ ಶಾಶ್ವತವಾಗಿ ಉಳಿಯಲಿದೆ ಎಂದು ಅವರು ಹೇಳಿದರು.
ಶವ ಸಂಸ್ಕಾರವನ್ನು ಪೊಲೀಸರ ಮೇಲ್ವಿಚಾರಣೆಯಲ್ಲಿ ಮಾಡಲಾಗಿದೆ ಮತ್ತು ಸಂತ್ರಸ್ತೆಯ ತಾಯಿ ತನ್ನ ಮಗಳನ್ನು ಕೊನೆಯ ಬಾರಿ ನೋಡಬೇಕೆಂದು ಅಳುತ್ತಲೇ ಇದ್ದರು ಎಂದು ಗೆಹ್ಲೋಟ್ ಹೇಳಿದರು.
ಆದರೆ ಯುಪಿ ಎಡಿಜಿ (ಕಾನೂನು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ಯುವತಿಯ ಮೇಲೆ ಅತ್ಯಾಚಾರವಾಗಿರುವ ಯಾವುದೇ ಲಕ್ಷಣಗಳಿಲ್ಲ. ಕುತ್ತಿಗೆಗೆ ಪೆಟ್ಟಾಗಿ ಸಾವನ್ನಪ್ಪಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.