ಮುಂಬೈ: ಎರಡನೇ ಅವಧಿಗೆ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದರೂ ಜಿಡಿಪಿ ಬೆಳವಣಿಗೆಯು ಆಮೆಗತಿಯಲ್ಲಿ ಸಾಗಲಿದೆ ಎಂದು ಇತ್ತೀಚೆಗಿನ ವರದಿ ತಿಳಿಸಿದೆ.
2018-19ನೇ ವಿತ್ತೀಯ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ದೇಶದ ಆರ್ಥಿಕ ಪ್ರಗತಿ ಶೇ 5.9ರಿಂದ ಶೇ 6.ರಲ್ಲಿ ಮುಂದುವರಿಯಲಿದೆ. ಹೀಗಾಗಿ, ಒಟ್ಟಾರೆ ಆರ್ಥಿಕ ವರ್ಷದ ಜಿಡಿಪಿ ಪ್ರಗತಿಯು ಶೇ 7ಕ್ಕಿಂತ ಕಡಿಮೆ ಆಗಲಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ವರದಿ ತಿಳಿಸಿದೆ.
ಆರ್ಥಿಕ ವೃದ್ಧಿ ದರ ಇಳಿಕೆಯಿಂದ ಭಾರತೀಯ ರಿಸರ್ವ್ ಬ್ಯಾಂಕ್ ಮುಂದಿನ ಹಣಕಾಸು ನೀತಿ ಪರಾಮರ್ಶೆಯಲ್ಲಿ ಬಡ್ಡಿದರ ಕಡಿತ ಮಾಡುವ ಒತ್ತಡಕ್ಕೆ ಸಿಲುಕಲಿದೆ. ಮುಂದೆ ನಡೆಯಲಿರುವ ಸಭೆಯಲ್ಲಿ ಶೇ 0.50ರಷ್ಟು ಬಡ್ಡಿದರ ಕಡಿತ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಮಧ್ಯಂತರ ಅವಧಿಯಲ್ಲಿ ಸೂಕ್ತವಾದ ಆರ್ಥಿಕ ನೀತಿಗಳನ್ನು ಜಾರಿಗೆ ತಂದರೆ ಮಂದಗತಿಯ ಪ್ರಗತಿಯಲ್ಲಿ ಸಾಗುತ್ತಿರುವ ಆರ್ಥಿಕತೆಗೆ ಮತ್ತೆ ಚೈತನ್ಯ ನೀಡಬಹುದೆಂದು ಹೇಳಿದೆ.