ETV Bharat / bharat

'ಗಂಭೀರ್ ಕಾಣೆಯಾಗಿದ್ದಾರೆ' ಸಭೆಗೆ ಹಾಜರಾಗದಿದ್ದಕ್ಕೆ ಗೌತಿ ಕೊಟ್ಟ ಉತ್ತರ ಇದು..

author img

By

Published : Nov 18, 2019, 6:06 PM IST

Updated : Nov 18, 2019, 7:18 PM IST

ದೆಹಲಿಯಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯ ಕುರಿತು ನಗರಾಭಿವೃದ್ಧಿ ಸಮಿತಿ ಕರೆದಿದ್ದ ಸಂಸದೀಯ ಸ್ಥಾಯಿ ಸಮಿತಿ ಸಭೆ ಗೈರು ಹಾಜರಾಗಿದ್ದಕ್ಕೆ ಸಂಸದ ಗೌತಮ್ ಗಂಭೀರ್ ಕಾರಣ ಬಿಚ್ಚಿಟ್ಟಿದ್ದಾರೆ.

ಗೌತಮ್ ಗಂಭೀರ್

ನವದೆಹಲಿ: ಪೂರ್ವ ದೆಹಲಿಯ ಬಿಜೆಪಿ ಸಂಸದ ಹಾಗೂ ಮಾಜಿ ಕ್ರಿಕೆಟರ್​ ಗೌತಮ್​ ಗಂಭೀರ್​ ನಾಪತ್ತೆಯಾಗಿದ್ದಾರೆ ಎಂದು ದೆಹಲಿಯಲ್ಲಿ ಪೋಸ್ಟರ್​ ಅಂಟಿಸಿ ಆಕ್ರೋಶ ವ್ಯಕ್ತಪಡಿಸಲಾಗಿತ್ತು.

ಇದೇ ನವೆಂಬರ್ 15ರಂದು ದೆಹಲಿಯಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯ ಕುರಿತು ನಗರಾಭಿವೃದ್ಧಿ ಸಮಿತಿಯು ಸಂಸದೀಯ ಸ್ಥಾಯಿ ಸಮಿತಿ ಸಭೆಯನ್ನು ಕರೆದಿತ್ತು. ಈ ಸಭೆಗೆ ಸಂಸದ ಗೌತಮ್ ಗಂಭೀರ್ ಗೈರಾಗಿದ್ದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿ ಗೌತಮ್ ಗಂಭೀರ್ ಕಾಣೆಯಾಗಿದ್ದಾರೆ ಎಂದು ಪೋಸ್ಟರ್​ ಅಂಟಿಸಲಾಗಿತ್ತು.

  • Gautam Gambhir, former cricketer & BJP MP on missing the Parliamentary Standing Committee of Urban Development meeting, over air pollution in Delhi, on 15 November: I know the meeting was very important but I was contractually bound. (1/2) pic.twitter.com/ddyrrDhYkW

    — ANI (@ANI) November 18, 2019 " class="align-text-top noRightClick twitterSection" data=" ">

ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಂಸದ ಗೌಭೀರ್, ನಾನು ರಾಜಕೀಯಕ್ಕೆ ಬಂದಿದ್ದು ಏಪ್ರಿಲ್ ತಿಂಗಳಿನಲ್ಲಿ. ಆದರೆ, ಜನವರಿ ತಿಂಗಳಲ್ಲೇ ವೀಕ್ಷಕ ವಿವರಣೆ ಮಾಡುವುದಾಗಿ ಒಪ್ಪಂದಕ್ಕೆ ಸಹಿ ಹಾಕಿದ್ದೆ. ಹೀಗಾಗಿ ಸಭೆಗೆ ಹಾಜರಾಗಿಲ್ಲ ಎಂದು ತಿಳಿಸಿದ್ದಾರೆ. ಈ ಬಗ್ಗೆ ನನಗೆ ನವೆಂಬರ್ 11ರಂದು ನನಗೆ ಮೇಲ್ ಬಂದಿತ್ತು. ಅಂದೇ ನಾನು ಸಭೆಗೆ ಹಾಜರಾಗಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದೆ. ಈ ಮೀಟಿಂಗ್​ನ ಮಹತ್ವ ನನಗೂ ತಿಳಿದಿದೆ. ಆದರೆ, ಮೊದಲೇ ಒಪ್ಪಂದಕ್ಕೆ ಸಹಿ ಮಾಡಿದ ಕಾರಣಕ್ಕೆ ಕಟ್ಟುಬಿದ್ದು ಸಭೆಗೆ ಹಾಜರಾಗಲು ಸಾಧ್ಯವಾಗಿಲ್ಲ ಎಂದಿದ್ದಾರೆ.

ಬಿಜೆಪಿ ಸಂಸದ, ಮಾಜಿ ಕ್ರಿಕೆಟರ್​ ಗೌತಮ್​ ಗಂಭೀರ್​ ನಾಪತ್ತೆ!?

ಗಂಭಿರ್ ಸಭೆಗೆ ಗೈರಾಗಿದ್ದಕ್ಕೆ ನಗರದ ಐಟಿಒ ಏರಿಯಾದಲ್ಲಿ ಗೌತಮ್​ ಗಂಭಿರ್ ಅವರ ನಾಪತ್ತೆ ಪೋಸ್ಟರ್​ಗಳನ್ನು ಮರಗಳ ಮೇಲೆ ಅಂಟಿಸಲಾಗಿತ್ತು. ನೀವು ಈ ವ್ಯಕ್ತಿಯನ್ನು ನೋಡಿದ್ದೀರಾ! ಕೊನೆಯ ಬಾರಿ ಇಂದೋರ್​ನಲ್ಲಿ ಜಿಲೇಬಿ​ ತಿನ್ನುತ್ತಿದ್ದಾಗ ಇವರನ್ನು ನೋಡಿದ್ದು. ಈಗ ನಾಪತ್ತೆಯಾಗಿದ್ದಾರೆ. ಇವರಿಗಾಗಿ ಸಂಪೂರ್ಣ ದೆಹಲಿಯೇ ಹುಡುಕುತ್ತಿದೆ ಎಂದು ಪೋಸ್ಟರ್​ಗಳಲ್ಲಿ ಬರೆಯಲಾಗಿತ್ತು.

  • #WATCH: Gautam Gambhir, BJP MP says."Agar mera jalebi khane se Delhi ka pollution badha hai, toh main hamesha ke liye jalebi chhod sakta hoon...10 minute mein mujhe troll karna shuru kar diya, agar itni mehnat Delhi ki pollution ko kam karne mein ki hoti toh hum saas le pate." pic.twitter.com/K2oW5qokht

ಇನ್ನು ಈ ಪೋಸ್ಟರ್​ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೌತಿ ನಾನು ಜಿಲೇಬಿ ತಿನ್ನುವುದು ಬಿಟ್ಟರೆ ನವದೆಹಲಿಯಲ್ಲಿ ಮಾಲಿನ್ಯ ಕಡಿಮೆ ಆಗುತ್ತದೆ ಎಂದರೆ ಈಗಿನಿಂದಲೇ ಜಿಲೇಬಿ ತಿನ್ನುವುದನ್ನ ಬಿಡುತ್ತೇನೆ. ಎಎಪಿಯವರು ನನ್ನ ಕಾಲು ಎಳೆಯಲು ಪ್ರಯತ್ನ ಮಾಡಿದಷ್ಟು ಶಕ್ತಿಯನ್ನ ಮಾಲಿನ್ಯ ನಿಯಂತ್ರಣಕ್ಕೆ ಬಳಸಿದ್ದರೆ ಸ್ವಲ್ಪ ಪ್ರಮಾಣದಲ್ಲಾದರೂ ನವದೆಹಲಿಯಲ್ಲಿ ಮಾಲಿನ್ಯ ತಗ್ಗುತಿತ್ತು ಎಂದು ತಿರುಗೇಟು ನೀಡಿದ್ದಾರೆ.

Intro:Body:Conclusion:
Last Updated : Nov 18, 2019, 7:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.