ETV Bharat / bharat

ವಾಯುಮಾಲಿನ್ಯದ ಚರ್ಚೆಯ ಸಭೆಯಲ್ಲಿ 25 ಸಂಸದರು ಗೈರು..! ಗೌತಿ ವಿರುದ್ಧ ತಿರುಗಿಬಿದ್ದ ನೆಟ್ಟಿಗರು.. - ವಾಯುಮಾಲಿನ್ಯದ ಸಭೆಗೆ ಸಂಸದರು ಗೈರು

ದೆಹಲಿ ವಾಯುಮಾಲಿನ್ಯ ನಿಯಂತ್ರಣದ ಬಗ್ಗೆ ಚರ್ಚಿಸಲು ಕರೆಯಲಾಗಿದ್ದ ಸಂಸದರ ಉನ್ನತ ಮಟ್ಟದ ಸಭೆಗೆ ಇಪ್ಪತ್ತಕ್ಕೂ ಅಧಿಕ ಸಂಸದರು ಗೈರಾಗಿದ್ದಾರೆ.

ವಾಯುಮಾಲಿನ್ಯ
author img

By

Published : Nov 15, 2019, 5:13 PM IST

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಿತಿಮೀರುತ್ತಿರುವ ವಾಯುಮಾಲಿನ್ಯದ ಬಗ್ಗೆ ಕರೆಯಲಾಗಿದ್ದ ಸಂಸದರ ಸಭೆಗೆ ಇಪ್ಪತ್ತಕ್ಕೂ ಅಧಿಕ ಸಂಸದರು ಗೈರಾಗಿದ್ದಾರೆ.

ದೆಹಲಿ ವಾಯುಮಾಲಿನ್ಯ ನಿಯಂತ್ರಣದ ಬಗ್ಗೆ ಚರ್ಚಿಸಲು ಸಂಸದರ ಉನ್ನತ ಮಟ್ಟದ ಸಭೆಯನ್ನು ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್​​​ ಕರೆದಿದ್ದರು. ಪಟ್ಟಿಯಲ್ಲಿದ್ದ 29 ಸಂಸದರ ಪೈಕಿ ಕೇವಲ ನಾಲ್ವರು ಸಂಸದರು ಮಾತ್ರವೇ ಸಭೆಯಲ್ಲಿ ಹಾಜರಿದ್ದರು.

Pollution Meet
ದೆಹಲಿಯಲ್ಲಿ ಮಿತಿಮೀರಿದ ವಾಯುಮಾಲಿನ್ಯ..

ಎಂಪಿಗಳು ಗೈರಾಗಿರುವ ಬಗ್ಗೆ ಸಭೆಯಲ್ಲಿ ಆಕ್ರೋಶ ವ್ಯಕ್ತವಾಗಿದೆ. ದೇಶದ ರಾಜಧಾನಿಯ ವಿಚಾರದಲ್ಲಿ ಚುನಾಯಿತ ಪ್ರತಿನಿಧಿಗಳ ಬೇಜವಾಬ್ದಾರಿ ನಡೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ಚರ್ಚೆ ನಡೆಯುತ್ತಿದೆ. ಸಂಸದರ ಈ ಗೈರಿನ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಜಾವ್ಡೇಕರ್ ಹೇಳಿದ್ದಾರೆ.

#ShameOnGautamGambhir ಟ್ರೆಂಡಿಂಗ್..!

ದೆಹಲಿಯ ಸಂಸದ ಗೌತಮ್ ಗಂಭೀರ್​ ಇಂದಿನ ಸಭೆಯಲ್ಲಿ ಗೈರಾಗಿದ್ದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ. ವಿಶೇಷವಾಗಿ ಟ್ವಿಟರ್​​ನಲ್ಲಿ ಈ ವಿಚಾರ ಭಾರಿ ಚರ್ಚೆಗೂ ಒಳಗಾಗಿದೆ. ಪ್ರಸ್ತುತ ಇಂದೋರ್​ನಲ್ಲಿ ನಡೆಯುತ್ತಿರುವ ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಟೆಸ್ಟ್ ಪಂದ್ಯದ ವೀಕ್ಷಕ ವಿವರಣೆಗಾರರಾಗಿ ಗಂಭೀರ್​ ಕಾರ್ಯನಿರ್ವಹಿಸುತ್ತಿದ್ದಾರೆ.

ಗಂಭೀರ್​​ ಅವರ ಬೇಜವಾಬ್ದಾರಿ ನಡೆಯನ್ನು ಆಮ್​ ಆದ್ಮಿ ಪಾರ್ಟಿ ಟೀಕೆ ಮಾಡಿದೆ. ಟ್ವಿಟರ್ ಮೂಲಕ ಗಂಭೀರ್​ ಇಂದೋರ್​​ನಲ್ಲಿ ಖುಷಿಯಾಗಿ ಕಾಲ ಕಳೆಯುತ್ತಿರುವ ಫೋಟೋವನ್ನು ಪೋಸ್ಟ್ ಮಾಡಿ, ತಾಕತ್ತಿದ್ದರೆ ಗೌತಿ ಸಭೆಯಲ್ಲಿ ಭಾಗಿಯಾಗಲಿ ಎಂದು ಸವಾಲೆಸೆದಿದೆ.

Intro:Body:

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಿತಿಮೀರುತ್ತಿರುವ ಮಾಯುಮಾಲಿನ್ಯದ ಬಗ್ಗೆ ಕರೆಯಲಾಗಿದ್ದ ಸಂಸದರ ಸಭೆಗೆ ಇಪ್ಪತ್ತಕ್ಕೂ ಅಧಿಕ ಸಂಸದರು ಗೈರಾಗಿದ್ದಾರೆ.

ದೆಹಲಿ ವಾಯುಮಾಲಿನ್ಯ ನಿಯಂತ್ರಣದ ಬಗ್ಗೆ ಚರ್ಚಿಸಲು ಸಂಸದರ ಉನ್ನತ ಮಟ್ಟದ ಸಭೆಯನ್ನು ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್​​​ ಕರೆದಿದ್ದರು. ಪಟ್ಟಿಯಲ್ಲಿದ್ದ 29 ಸಂಸದರ ಪೈಕಿ ಕೇವಲ ನಾಲ್ವರು ಸಂಸದರು ಮಾತ್ರವೇ ಸಭೆಯಲ್ಲಿ ಹಾಜರಿದ್ದರು.

ಎಂಪಿಗಳು ಗೈರಾಗಿರುವ ಬಗ್ಗೆ ಸಭೆಯಲ್ಲಿ ಆಕ್ರೋಶ ವ್ಯಕ್ತವಾಗಿದೆ. ದೇಶದ ರಾಜಧಾನಿಯ ವಿಚಾರದಲ್ಲಿ ಚುನಾಯಿತ ಪ್ರತಿನಿಧಿಗಳ ಬೇಜವ್ದಾರಿ ನಡೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ಚರ್ಚೆ ನಡೆಯುತ್ತಿದೆ. ಸಂಸದರ ಈ ಗೈರಿನ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಜಾವ್ಡೇಕರ್ ಹೇಳಿದ್ದಾರೆ. 

#ShameOnGautamGambhir ಟ್ರೆಂಡಿಂಗ್..!

ದೆಹಲಿಯ ಸಂಸದ ಗೌತಮ್ ಗಂಭೀರ್​ ಇಂದಿನ ಸಭೆಯಲ್ಲಿ ಗೈರಾಗಿದ್ದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ. ವಿಶೇಷವಾಗಿ ಟ್ವಿಟರ್​​ನಲ್ಲಿ ಈ ವಿಚಾರ ಭಾರಿ ಚರ್ಚೆಗೂ ಒಳಗಾಗಿದೆ. ಪ್ರಸ್ತುತ ಇಂದೋರ್​ನಲ್ಲಿ ನಡೆಯುತ್ತಿರುವ ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಟೆಸ್ಟ್ ಪಂದ್ಯದ ವೀಕ್ಷಕ ವಿವರಣೆಗಾರರಾಗಿ ಗಂಭೀರ್​ ಕಾರ್ಯನಿರ್ವಹಿಸುತ್ತಿದ್ದಾರೆ.

ಗಂಭೀರ್​​ ಅವರ ಬೇಜವ್ದಾರಿ ನಡೆಯನ್ನು ಆಮ್​ ಆದ್ಮಿ ಪಾರ್ಟಿ ಟೀಕೆ ಮಾಡಿದೆ. ಟ್ವಿಟರ್ ಮೂಲಕ ಗಂಭೀರ್​ ಇಂದೋರ್​​ನಲ್ಲಿ ಖುಷಿಯಾಗಿ ಕಾಲ ಕಳೆಯುತ್ತಿರುವ ಫೋಟೋವನ್ನು ಪೋಸ್ಟ್ ಮಾಡಿ, ತಾಕತ್ತಿದ್ದರೆ ಗೌತಿ ಸಭೆಯಲ್ಲಿ ಭಾಗಿಯಾಗಲಿ ಎಂದು ಸವಾಲೆಸೆದಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.