ರಾಂಚಿ(ಜಾರ್ಖಂಡ್): ಇಲ್ಲಿನ ಖತಂಗಾದಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮಹಿಳಾ ವಿಮಾ ಏಜೆಂಟ್ ಒಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದು, ಅತ್ಯಾಚಾರವೆಸಗಿದ ಐವರಲ್ಲಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ರಾಂಚಿಯ ವಿಮಾ ಕಚೇರಿವೊಂದರಲ್ಲಿ ಈ ಮಹಿಳೆ ಕೆಲಸ ನಿರ್ವಹಿಸುತ್ತಿದ್ದು, ಯುವಕನೊಬ್ಬ ತನ್ನ ಕಾರಿನ ವಿಮೆ ಮಾಡಿಸಿಕೊಡುವಂತೆ ಮಾತುಕತೆ ನಡೆಸಿದ್ದಾನೆ. ಇದಾದ ಬಳಿಕ ಅದಕ್ಕೆ ಪೂರಕವಾದ ದಾಖಲೆಗಳು ಮನೆಯಲ್ಲಿ ಇರುವ ಕಾರಣ ಮನೆಗೆ ಬಂದು ದಾಖಲೆ ಪಡೆದುಕೊಳ್ಳುವಂತೆ ಮಹಿಳೆಗೆ ವಿನಂತಿಸಿದ್ದಾನೆ.
ಕಾರಿನ ದಾಖಲೆ ಪಡೆದುಕೊಳ್ಳುವ ಸಲುವಾಗಿ ಮಹಿಳೆ ಆತನ ಫ್ಲಾಟ್ಗೆ ತೆರಳಿದ್ದು, ಈ ವೇಳೆ ಆತನ ಜೊತೆ ಇದ್ದ ನಾಲ್ವರು ಸ್ನೇಹಿತರೊಂದಿಗೆ ಮನೆಯೊಳಗೆ ಹೊತ್ತೊಯ್ದು ಅತ್ಯಾಚಾರವೆಸಗಿದ್ದಾರೆ.
ಇನ್ನು ಅತ್ಯಾಚಾರವೆಸಗಿದ ನಂತರ ಮಹಿಳೆಗೆ ಈ ವಿಷಯ ಎಲ್ಲಿಯೂ ಹೇಳದಂತೆ ಪ್ರಾಣ ಬೆದರಿಕೆ ಹಾಕಿದ್ದಾನೆ. ಇದರಿಂದ ಭೀತಿಗೊಂಡ ಯುವತಿಯು ತನ್ನ ಸ್ನೇಹಿತರೊಂದಿಗೆ ಈ ವಿಷಯ ಪ್ರಸ್ತಾಪಿಸಿದ್ದು, ವಾರದ ನಂತರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.
ಇನ್ನು ಈ ಬಗ್ಗೆ ಕೂಡಲೇ ದೂರು ದಾಖಲಿಸಿಕೊಂಡ ಖೇಲ್ಗಾಂವ್ ಪೊಲೀಸರು, ತನಿಖೆ ನಡೆಸಿ ಸಾಮೂಹಿಕ ಅತ್ಯಾಚಾರವೆಸಗಿದ ಐವರಲ್ಲಿ ಮೂರು ಆರೋಪಿಗಳಾದ ಕೋಕರ್‌ನ ಸಂತೋಷ್, ಬೂಟಿ ಮೊರ್‌ನ ಧರ್ಮೇಂದ್ರ ರೈ ಮತ್ತು ಖೇಲ್‌ಗಾಂವ್‌ನ ರಮೇಶ್ರನ್ನು ಈಗಾಗಲೇ ಬಂಧಿಸಿದ್ದು, ಉಳಿದ ಇಬ್ಬರು ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.