ETV Bharat / bharat

ಗಾಂಧೀಜಿಯಿಂದ ಸಂವಹನ ಮಾದರಿಯ ಮರು ವ್ಯಾಖ್ಯಾನ.. - independence

ಗಾಂಧೀಜಿ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರಣೆಯಾಗುವುದರ ಜೊತೆಗೆ, ಸಂವಹನದ ಮಾದರಿಯನ್ನೂ ಮರುವ್ಯಾಖ್ಯಾನಿಸಿದ್ದಾರೆ. ಗಾಂಧಿ ಓರ್ವ ಪ್ರಾಮಾಣಿಕ ವಾಗ್ಮಿ ಹಾಗೂ ಅಪ್ಪಟ ಬರಹಗಾರರಾಗಿದ್ದರು. ಗಾಂಧಿ ತಮ್ಮ ತತ್ವಗಳನ್ನು ಬೋಧಿಸುವ ಅಗತ್ಯತೆಯೇ ಇರಲಿಲ್ಲ. ಯಾಕೆಂದರೆ, ಅವರ ಕಾರ್ಯಗಳ ಮೂಲಕವೇ ಜನ ಪ್ರೇರೇಪಿತರಾಗುತ್ತಿದ್ದರು. ಹಿಂಸಾಚಾರದ ನಡುವೆ ಭರವಸೆಯ ಬೆಳಕು ಆರುವ ಸಂದರ್ಭದಲ್ಲಿ ಮಹಾತ್ಮಾ ಗಾಂಧೀಜಿಯ ಅಹಿಂಸಾ ತತ್ವಗಳು ಹಿಂಸೆಯ ಜ್ವಾಲೆಯನ್ನು ಮೆಟ್ಟಿ ನಿಂತವು.

gandhi
author img

By

Published : Sep 2, 2019, 5:13 AM IST

ದ್ವೇಷ ಹಾಗೂ ಹಿಂಸೆಯ ಭಾಷೆ ಜನರನ್ನು ದೂರಗೊಳಿಸುತ್ತದೆ. ಜನರಲ್ಲಿ ಭಯ ಸೃಷ್ಟಿಯಾಗಿ, ಸಮಾಜದಲ್ಲೇ ಭಯ ಆವರಿಸಿಕೊಳ್ಳುತ್ತದೆ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಹಿಂಸಾತ್ಮಕ ಭಾಷೆಯನ್ನು ಜನ ನೆಚ್ಚಿಕೊಂಡಿದ್ದರೂ, ಗಾಂಧೀಜಿಯ ವಾಕ್​ಚಾತುರ್ಯದಿಂದ ಅವರ ಅಹಿಂಸಾತ್ಮಕ ತತ್ವಗಳೆಡೆಗೆ ಆಕರ್ಷಿತರಾಗುತ್ತಿದ್ದರು. ಸಂಘರ್ಷವು ಯಾವತ್ತೂ ಆರಂಭದಲ್ಲಿ ಗೆಲುವು ಪಡೆಯಬಹುದು. ಆದರೆ, ಶಾಂತಿಯು ಅಂತ್ಯದಲ್ಲಿ ಜಯ ಸಾಧಿಸುತ್ತದೆ.

ಹಾಗಾಗಿ ಸಮಾಜದಲ್ಲಿ ಮಾನವೀಯತೆ ಸಾಧಿಸಲು ಗಾಂಧಿ ಮಾದರಿಯ ಸಂವಹನ ಪ್ರಸ್ತುತವಾಗಿದೆ. ಗಾಂಧೀಜಿ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರಣೆಯಾಗುವುದರ ಜೊತೆಗೆ, ಸಂವಹನದ ಮಾದರಿಯನ್ನೂ ಮರುವ್ಯಾಖ್ಯಾನಿಸಿದ್ದಾರೆ. ಅವರು ಜನರಿಗೆ ಪ್ರೇರಣೆ ನೀಡುವ ಹಾಗೂ ಅವರ ಮನವೊಲಿಸುವ ಸಂವಹನ ಮಾದರಿಯನ್ನು ಅಳವಡಿಸಿಕೊಂಡಿದ್ದರು.

gandhi
ಗಾಂಧಿ ಓರ್ವ ಪ್ರಾಮಾಣಿಕ ವಾಗ್ಮಿ ಹಾಗೂ ಅಪ್ಪಟ ಬರಹಗಾರ

ಗಾಂಧಿ ಓರ್ವ ಪ್ರಾಮಾಣಿಕ ವಾಗ್ಮಿ ಹಾಗೂ ಅಪ್ಪಟ ಬರಹಗಾರರಾಗಿದ್ದರು. ಅವರ ಸರಳತೆ ಹಾಗೂ ಶಬ್ದ ಭಂಡಾರ ಜನರ ದೃಷ್ಟಿಯಲ್ಲಿ ಅವರನ್ನು ಎತ್ತರಕ್ಕೇರಿಸಿತು. ತಮ್ಮ ಬರವಣಿಗೆ ಹಾಗೂ ಭಾಷಣದ ಮೂಲಕ ಅವರು ಜನರನ್ನು ಸ್ವಾತಂತ್ರ್ಯದೆಡೆಗೆ ಸೆಳೆಯುತ್ತಿದ್ದರು.

ಹಿಂಸೆಯನ್ನು ಬಿಂಬಿಸುವ ಕತ್ತಿಯಿಂದ ಅಹಿಂಸೆಯನ್ನು ಬಿಂಬಿಸುವ ತನ್ನ ಲೇಖನಿಯೇ ಶ್ರೇಷ್ಠ ಎಂದು ಸ್ವಾತಂತ್ರ್ಯ ಹೋರಾಟದಲ್ಲಿ ಬಾಪೂ ಸಾಬೀತುಪಡಿಸಿದರು. ಸತ್ಯಾಗ್ರಹ ಹಾಗೂ ಸ್ವರಾಜ್​ನ ಕುರಿತಾದ ತಮ್ಮ ಅಹಿಂಸಾತ್ಮಕ ತತ್ವಗಳಿಂದ ಗಾಂಧೀಜಿ ಸಮಾಜದಲ್ಲಿ ಪ್ರಭಾವ ಬೀರಿದರು. ತಮ್ಮ ಸಂವಹನದ ಮೂಲಕವೇ ಅನುಯಾಯಿಗಳಲ್ಲಿ ಶಾಂತಿಯ ಪ್ರಜ್ಞೆಯನ್ನು ಮೂಡಿಸಿದರು.

gandhi
ಗಾಂಧಿ ಕಾರ್ಯಗಳಿಂದ ಪ್ರೇರೇಪಿತರಾಗುತ್ತಿದ್ದ ಜನ

ಉಪ್ಪಿನ ಸತ್ಯಾಗ್ರಹ, ಖಾದಿ ಬಟ್ಟೆ ಧರಿಸುವುದು ಹಾಗೂ ಚರಕ ನೇಯುವ ಮೂಲಕ ತಮ್ಮ ತತ್ವಗಳನ್ನು ಗಾಂಧೀಜಿ ಸರಳವಾಗಿ ಸಂವಹನ ನಡೆಸುತ್ತಿದ್ದರು. ಗಾಂಧಿ ತಮ್ಮ ತತ್ವಗಳನ್ನು ಬೋಧಿಸುವ ಅಗತ್ಯತೆಯೇ ಇರಲಿಲ್ಲ. ಯಾಕೆಂದರೆ, ಅವರ ಕಾರ್ಯಗಳ ಮೂಲಕವೇ ಜನ ಪ್ರೇರೇಪಿತರಾಗುತ್ತಿದ್ದರು. ಸತ್ಯ ಹಾಗೂ ಅಹಿಂಸೆಯೇ ಮಹಾತ್ಮಾ ಗಾಂಧೀಜಿಯ ಅಸ್ತ್ರವಾಗಿದ್ದವು. ಅವುಗಳ ಮೂಲಕವೇ ಅವರು ಸ್ವಾತಂತ್ರ್ಯಕ್ಕಾಗಿ ಹೋರಾಡಿದರು.

ಹಿಂಸಾಚಾರದ ನಡುವೆ ಭರವಸೆಯ ಬೆಳಕು ಆರುವ ಸಂದರ್ಭದಲ್ಲಿ ಮಹಾತ್ಮಾ ಗಾಂಧೀಜಿಯ ಅಹಿಂಸಾ ತತ್ವಗಳು ಹಿಂಸೆಯ ಜ್ವಾಲೆಯನ್ನು ಮೆಟ್ಟಿ ನಿಂತವು.

gandhi
ಹಿಂಸೆಯ ಜ್ವಾಲೆಯನ್ನು ಮೆಟ್ಟಿ ನಿಂತ ಗಾಂಧೀಜಿಯ ಅಹಿಂಸಾ ತತ್ವಗಳು

"ನಿಮ್ಮ ಆಲೋಚನೆಗಳನ್ನು ಸಕಾರಾತ್ಮಕವಾಗಿರಿಸಿ. ಯಾಕೆಂದರೆ, ಆಲೋಚನೆಗಳೇ ನಿಮ್ಮ ಪದಗಳಾಗಿರುತ್ತವೆ. ನಿಮ್ಮ ಪದಗಳನ್ನು ಸಕಾರಾತ್ಮಕವಾಗಿರಿಸಿ. ಯಾಕೆಂದರೆ, ಪದಗಳೇ ನಿಮ್ಮ ನಡಾವಳಿಕೆಯಾಗಿರುತ್ತವೆ. ನಿಮ್ಮ ನಡಾವಳಿಕೆಯನ್ನು ಸಕಾರಾತ್ಮಕವಾಗಿರಿಸಿ. ಯಾಕೆಂದರೆ, ನಡಾವಳಿಕೆಯೇ ನಿಮ್ಮ ಅಭ್ಯಾಸವಾಗಿರುತ್ತವೆ. ನಿಮ್ಮ ಅಭ್ಯಾಸವನ್ನು ಸಕಾರಾತ್ಮಕವಾಗಿರಿಸಿ. ಯಾಕೆಂದರೆ, ಅಭ್ಯಾಸವೇ ನಿಮ್ಮ ಮೌಲ್ಯಗಳಾಗಿರುತ್ತವೆ. ನಿಮ್ಮ ಮೌಲ್ಯಗಳನ್ನು ಸಕಾರಾತ್ಮಕವಾಗಿರಿಸಿ. ಯಾಕೆಂದರೆ, ಮೌಲ್ಯಗಳೇ ನಿಮ್ಮ ನಿರ್ದಿಷ್ಟ ಸ್ಥಾನವಾಗಿರುತ್ತವೆ" ಎಂದು ಗಾಂಧೀಜಿ ಹೇಳುತ್ತಿದ್ದರು.

Intro:Body:

medha

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.