ಮನ್ಸಾ (ಪಂಜಾಬ್): ಕೊರೊನಾ ವೈರಸ್ನಿಂದಾಗಿ ಲಾಕ್ ಡೌನ್ ಇದ್ದರೂ ಭಾರತ ಸರ್ಕಾರ ಉಜ್ವಲ ಯೋಜನೆ ಫಲಾನುಭವಿಗಳಿಗೆ ಉಚಿತ ಅಡುಗೆ ಅನಿಲ ಒದಗಿಸುತ್ತಿದೆ.
ಉಜ್ವಲ ಯೋಜನೆಯಡಿ ಬಡ ಜನರ ಮನೆಗೆ ಸಿಲಿಂಡರ್ ಸರಬರಾಜು ಮಾಡಲಾಗುತ್ತಿದೆ. ಪಂಜಾಬ್‌ನ ಮಾನ್ಸಾ ಜಿಲ್ಲೆಯ ಹಳ್ಳಿಗಳಲ್ಲಿ ಮನೆ ಮನೆಗೆ ಗ್ಯಾಸ್ ವಿತರಣೆ ಮುಂದುವರಿಸಲಾಗಿದೆ.
ಈ ಟಿವಿ ಭಾರತ, ಮಾನಸಾ ಜಿಲ್ಲೆಯ ಗ್ರಾಮಸ್ಥರೊಂದಿಗೆ ಮಾತನಾಡಿದಾಗ, ಕೇಂದ್ರ ಸರ್ಕಾರವು ತಮ್ಮ ಖಾತೆಗಳಿಗೆ ಹಣ ವರ್ಗಾಯಿಸಿದೆ ಎಂದು ಅವರು ಹೇಳಿದರು. ಇದಲ್ಲದೇ ಸರ್ಕಾರವು ಸಿಲಿಂಡರ್‌ಗಳನ್ನು 3 ತಿಂಗಳವರೆಗೆ ಉಚಿತವಾಗಿ ನೀಡುತ್ತಿದೆ ಎಂದು ಅವರು ಹೇಳಿದರು.
"ನಾನು ಆ ಎಲ್ಲ ಕುಟುಂಬಗಳ ಗ್ರಾಮವಾರು ಪಟ್ಟಿಯನ್ನು ಹೊಂದಿದ್ದೇನೆ. ಫಾರ್ಮ್ ಭರ್ತಿ ಮಾಡಿದ ನಂತರ, ಫಾರ್ಮ್ನಲ್ಲಿರುವ ಹೆಸರಿನವರ ಮನೆಗಳಿಗೆ ಸಿಲಿಂಡರ್ ವಿತರಣೆ ಮಾಡುತ್ತೇವೆ" ಎಂದು ಗ್ಯಾಸ್ ಏಜೆನ್ಸಿಯ ಮಾಲೀಕ ಅರುಣ್ ಕುಮಾರ್ ಹೇಳಿದ್ದಾರೆ.
"ಉಜ್ವಲ ಫಲಾನುಭವಿ ಕುಟುಂಬಗಳಿಗೆ ಮೂರು ತಿಂಗಳವರೆಗೆ ಉಚಿತ ಅಡುಗೆ ಅನಿಲ ನೀಡಲಾಗುವುದು. ಎಲ್ಲಾ ಫಾರ್ಮ್‌ಗಳು ಗ್ಯಾಸ್ ಏಜೆನ್ಸಿ ಮಾಲೀಕರ ಬಳಿಯಿದೆ. ಅದರ ಮೂಲಕ ಅವರ ಮನೆಗೆ ಸಿಲಿಂಡರ್ ವಿತರಣೆ ಮಾಡಲಾಗುತ್ತಿದೆ" ಎಂದು ಜಿಲ್ಲಾ ಆಹಾರ ಸರಬರಾಜು ಅಧಿಕಾರಿ ಮಧು ಹೇಳಿದರು.