ETV Bharat / bharat

ಕಾರ್ಮಿಕರಿಗೆ ಭರ್ಜರಿ ಗಿಫ್ಟ್​... 2 ತಿಂಗಳ ಉಚಿತ ಪಡಿತರ ನೀಡಲು ನಿರ್ಧಾರ - ವಿಶೇಷ ಪ್ಯಾಕೇಜ್​ ಘೋಷಣೆ

ಇಂದಿನ ಸುದ್ದಿಗೋಷ್ಠಿಯಲ್ಲಿ 9 ಪ್ರಮುಖ ನಿರ್ಧಾರಗಳನ್ನ ನಿರ್ಮಲಾ ಸೀತಾರಾಮನ್​ ಘೋಷಿಸಿದರು. ಅದರಲ್ಲಿ ಪ್ರಮುಖವಾಗಿ ವಲಸೆ ಕಾರ್ಮಿಕರಿಗೆ, ರಸ್ತೆ ಬದಿಯ ವ್ಯಾಪಾರಿಗಳಿಗೆ, ಸಣ್ಣ ರೈತರಿಗೆ ವಿಶೇಷ ಪ್ಯಾಕೇಜ್​ ಘೋಷಣೆ ಮಾಡಿದರು.

FM Nirmala Sitharaman
FM Nirmala Sitharaman
author img

By

Published : May 14, 2020, 5:07 PM IST

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ನಡೆಸುತ್ತಿರುವ ಸುದ್ದಿಗೋಷ್ಠಿಯಲ್ಲಿ ವಲಸೆ ಕಾರ್ಮಿಕರಿಗೆ ಭರ್ಜರಿ ಗಿಫ್ಟ್​ ನೀಡಿದ್ದು, ಬರೋಬ್ಬರಿ 8 ಕೋಟಿ ವಲಸೆ ಕಾರ್ಮಿಕರಿಗೆ ಮುಂದಿನ ಎರಡು ತಿಂಗಳ ಉಚಿತ ಊಟ ನೀಡಲು ತೀರ್ಮಾನ ಮಾಡಲಾಗಿದೆ.

ಪ್ರತಿ ವಲಸೆ ಕಾರ್ಮಿಕರಿಗೆ 5 ಕೆ.ಜಿ ಅಕ್ಕಿ, 5 ಕೆಜಿ ಗೋಧಿ ಹಾಗೂ 1 ಕೆ.ಜಿ ಬೇಳೆ ವಿತರಣೆ ಮಾಡಲು ನಿರ್ಧರಿಸಲಾಗಿದ್ದು, ಕಾರ್ಡ್​ ಇಲ್ಲದವರಿಗೆ 5 ಕೆಜಿ ಅಕ್ಕಿ, ಗೋಧಿ ಹಾಗೂ 1 ಕೆ.ಜಿ ಬೇಳೆ ನೀಡುತ್ತೇವೆ ಎಂದಿದ್ದಾರೆ. ಅವರು ದೇಶದ ಯಾವುದೇ ಮೂಲೆಯಲ್ಲೂ ಪಡಿತರ ಪಡೆಯಬಹುದು ಎಂದಿದ್ದಾರೆ. ಇದಕ್ಕಾಗಿ 3.500 ಕೋಟಿ ರೂ ಖರ್ಚು ಮಾಡುತ್ತೇವೆ ಎಂದು ಘೋಷಿಸಿದ್ದಾರೆ. ಒನ್​ ನೇಷನ್​ ಒನ್​​ ರೇಷನ್​ ಕಾರ್ಡ್​​ ಜಾರಿಯಲ್ಲಿದೆ ಎಂದಿದ್ದಾರೆ.

ಕಾರ್ಮಿಕರಿಗೆ ಭರ್ಜರಿ ಗಿಫ್ಟ್​ ನೀಡಿದ ಕೇಂದ್ರ

ಉಳಿದಂತೆ 14.62 ಲಕ್ಷ ಮಾನವ ಕೆಲಸ ಸೃಷ್ಟಿ ಮಾಡಲಾಗಿದ್ದು, ನರೇಗಾದಲ್ಲಿ 14.62 ಲಕ್ಷ ಮಾನವ ಕೆಲಸದ ದಿನಗಳನ್ನು ಸೃಷ್ಟಿಸಿದ್ದೇವೆ. 2.33 ಲಕ್ಷ ಮಂದಿ ಕೆಲಸಗಾರರಿಗೆ ಮನ್ರೇಗಾದಲ್ಲಿ ಕೆಲಸ ನೀಡಲಾಗುವುದು ಎಂದು ತಿಳಿಸಿದ್ದು, 1.87 ಗ್ರಾಮ ಪಂಚಾಯಿತಿಗಳಲ್ಲಿ ಮನರೇಗಾ ಕೆಲಸ ನೀಡಲು ನಿರ್ಧರಿಸಲಾಗಿದ್ದು, ಕೂಲಿಯನ್ನು 182 ರೂ.ರಿಂದ 202 ರೂ.ಗೆ ಹೆಚ್ಚಿಸಿದ್ದೇವೆ. ಮನರೇಗಾಗೆ 10 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಲು ಕೇಂದ್ರ ನಿರ್ಧಾರ ಕೈಗೊಂಡಿದೆ ಎಂದು ಘೋಷಿಸಿದರು.

ವಸತಿಹೀನರಿಗೆ ಮೂರು ಹೊತ್ತಿನ ಊಟ ನೀಡಲು ನಿರ್ಧರಿಸಲಾಗಿದ್ದು, ಇದು ಪೂರ್ಣವಾಗಿ ಕೇಂದ್ರ ಸರ್ಕಾರ ವೆಚ್ಚದಲ್ಲಿ ನೀಡಲಾಗುತ್ತಿದೆ ಎಂದರು.

ವಲಸೆ ಕಾರ್ಮಿಕರು ನರೇಗಾ ಯೋಜನೆಯಡಿ ಹೆಸರು ನೋಂದಾಯಿಸಿಕೊಳ್ಳಲು ಅವಕಾಶ ನೀಡಲಾಗಿದ್ದು, ಮನರೇಗಾದ ದಿನಗೂಲಿ ಮೊತ್ತವನ್ನ 182 ರಿಂದ 202 ರೂಪಾಯಿಗೆ ಏರಿಸಲಾಗಿದೆ. ಉದ್ಯೋಗ ಖಾತ್ರಿ ಯೋಜನೆಗಾಗಿ 10 ಸಾವಿರ ಕೋಟಿ ರೂ. ಖರ್ಚಾಗಿದೆ. ನರೇಗಾ ಕಾಮಗಾರಿ ನಡೆಸೋ ವೇಳೆ ಕಾರ್ಮಿಕರ ಆರೋಗ್ಯ ತಪಾಸಣೆ ಕಡ್ಡಾಯ. ಎಲ್ಲ ಕಾರ್ಮಿಕರಿಗೂ ಕನಿಷ್ಠ ವೇತನ ಸಿಗುವಂತೆ ಯೋಜನೆ ರೂಪಿಸಿದ್ದೇವೆ. 1.87 ಲಕ್ಷ ಗ್ರಾಮ ಪಂಚಾಯತ್‌ಗಳ ಮೂಲಕ ಕನಿಷ್ಠ ವೇತನ ಹಂಚಿಕೆ ಮಾಡಲಾಗಿದೆ. ಅಂತಾರಾಜ್ಯ ವಲಸಿಗರಿಗೆ ಕನಿಷ್ಠ ವೇತನಕ್ಕಾಗಿ 'ಒಂದು ಭಾರತ, ಏಕ ವೇತನ' ಕಾನೂನು ಜಾರಿಗೆ ಬಂದಿದೆ ಎಂದು ಇದೇ ವೇಳೆ ಘೋಷಣೆ ಮಾಡಿದರು.

ಇದೇ ವೇಳೆ ಮೇ 31ರವರೆಗೂ ಸಣ್ಣ ರೈತರ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಲಾಗಿದ್ದು, ಸಣ್ಣ ರೈತರಿಗೆ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಿ ರಿಲೀಫ್‌ ನೀಡಲಾಗಿದೆ ಎಂದರು. ನಬಾರ್ಡ್​ನಿಂದ ಸಹಕಾರ ಬ್ಯಾಂಕ್ ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್​ಗಳಿಗೆ 2020ರ ಮಾರ್ಚ್​ನಲ್ಲಿ 29,500 ಕೋಟಿ ಹಣ ಒದಗಿಸಲಾಗಿದೆ ಎಂದು ನಿರ್ಮಲಾ ಸೀತಾರಾಮನ್​ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.