ETV Bharat / bharat

ಉಗ್ರ ಕಮಾಂಡೋ ಸೇರಿ ನಾಲ್ವರು ಉಗ್ರರ ಹೊಡೆದುರುಳಿಸಿದ್ದೇವೆ: ಖಚಿತಪಡಿಸಿದ ಕರ್ನಲ್

ಗಡಿಯಲ್ಲಿ ಮೇಲಿಂದ ಮೇಲೆ ಕಾಲುಕೆದರಿ ಗುಂಡಿನ ದಾಳಿ ನಡೆಸುತ್ತಿದ್ದ ಉಗ್ರರಿಗೆ ಭಾರತೀಯ ಯೋಧರು ಇಂದು ಸರಿಯಾದ ಪಾಠ ಕಲಿಸಿದ್ದಾರೆ.

four terrorists killed
four terrorists killed
author img

By

Published : May 6, 2020, 5:22 PM IST

ಶ್ರೀನಗರ: ಕಳೆದ ಕೆಲ ದಿನಗಳಿಂದ ಗಡಿಯಲ್ಲಿ ಭಾರತೀಯ ಸೇನೆಗೆ ನಿರಂತರವಾಗಿ ಉಪಟಳ ನೀಡ್ತಿದ್ದ ಉಗ್ರರಿಗೆ ಇಂದು ತಿರುಗೇಟು ನೀಡಿದ್ದು, ಮೋಸ್ಟ್​​ ವಾಂಟೆಡ್​ ಉಗ್ರ ರಿಯಾಜ್​ ನೈಕೂ ಸೇರಿದಂತೆ ನಾಲ್ವರು ಉಗ್ರರ ಹೊಡೆದುರುಳಿಸಿದ್ದಾರೆ.

ಕಳೆದ ಮೂರು ದಿನಗಳ ಹಿಂದೆ ಜಮ್ಮು-ಕಾಶ್ಮೀರದ ಹಂದ್ವಾರನಲ್ಲಿ ಭಾರತೀಯ ಯೋಧರ ಮೇಲೆ ದಾಳಿ ನಡೆಸಿದ್ದ ಉಗ್ರರು ಕರ್ನಲ್​ ಆಶುತೋಷ್​ ಶರ್ಮಾ, ಮೇಜರ್​ ಸೇರಿದಂತೆ ಐವರು ಮೇಲೆ ಗುಂಡಿನ ದಾಳಿ ನಡೆಸಿದ್ದರು. ಇದರ ಬೆನ್ನಲ್ಲೇ ನಿನ್ನೆ ಮತ್ತೊಮ್ಮೆ ದಾಳಿ ಮಾಡಿದ್ದ ಉಗ್ರರು ಮೂವರು ಯೋಧರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಭಾರತೀಯ ಸೇನೆ ಇಂದು ಸರಿಯಾಗಿ ಪ್ರತಿಕಾರ ತೀರಿಸಿಕೊಂಡಿದೆ.

ಸೇಡು ತೀರಿಸಿಕೊಂಡ ಭಾರತೀಯ ಸೇನೆ... ಹಿಜ್ಬುಲ್​ ಕಮಾಂಡೋ ಸೇರಿ ನಾಲ್ವರು ಉಗ್ರರು ಮಟಾಶ್​!

ಪುಲ್ವಾಮಾದ ಎರಡು ಪ್ರದೇಶಗಳಲ್ಲಿ ಬೆಳ್ಳಂಬೆಳಗ್ಗೆ ಕಾರ್ಯಾಚರಣೆ ನಡೆಸಿದ ಭಾರತೀಯ ಯೋಧರು, ಹಿಜ್ಬುಲ್​ ಮುಜಾಹಿದ್ದೀನ್​ ಕಮಾಂಡರ್​ ರಿಯಾಜ್​ ನೈಕೂ ಸೇರಿದಂತೆ ನಾಲ್ವರ ಉಗ್ರರ ಹೊಡೆದುರುಳಿಸಿದೆ. ಇದೇ ವಿಷಯವಾಗಿ ಮಾತನಾಡಿ ಭಾರತೀಯ ಸೇನೆಯ ಕರ್ನಲ್​, ಸೇನಾ ವಕ್ತಾರ ಅಮನ್​ ಆನಂದ್​ ಮಾಹಿತಿ ನೀಡಿದ್ದಾರೆ.

ಎರಡು ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಕಳೆದ 24 ಗಂಟೆಯಲ್ಲಿ ನಾಲ್ವರು ಉಗ್ರರ ಹೊಡೆದುರುಳಿಸಿದ್ದೇವೆ. ಉಗ್ರರ ಹೆಸರು ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದಿರುವ ಅವರು, ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.