ದಿಂಡಿಗಲ್(ತಮಿಳುನಾಡು): ರೈಲಿಗೆ ತಲೆ ಕೊಟ್ಟು ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ದಿಂಡಿಗಲ್ ಜಿಲ್ಲೆಯ ಕೊಡೈಕನಾಲ್ ರೋಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ನಾಲ್ವರನ್ನು ಉತ್ತಿರಭಾರತಿ(50), ಸಂಗೀತ(43), ಅಭಿನಯಶ್ರೀ(15) ಹಾಗೂ ಆಕಾಶ್(11) ಎಂದು ಗುರುತಿಸಲಾಗಿದೆ. ಅಭಿನಯಶ್ರೀ ಹತ್ತನೇ ಹಾಗೂ ಅಕಾಶ್ ಏಳನೇ ತರಗತಿಯಲ್ಲಿ ಓದುತ್ತಿದ್ದರು ಎನ್ನಲಾಗಿದೆ.
ಆತ್ಮಹತ್ಯೆ ಮಾಡಿಕೊಂಡ ಕುಟುಂಬದವರು ತಿರುಚ್ಚಿ ಜಿಲ್ಲೆಗೆ ಸೇರಿದವರು ಎನ್ನಲಾಗಿದ್ದು, ಉತ್ತಿರಭಾರತಿ ಉದ್ಯಮಿಯಾಗಿದ್ದು, ಅತಿಯಾದ ಸಾಲದಿಂದ ಆತ್ಮಹತ್ಯೆ ದಾರಿ ಹಿಡಿದಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆತ್ಮಹತ್ಯೆ ತಡರಾತ್ರಿ 1ರಿಂದ 3 ಗಂಟೆ ನಡುವೆ ನಡೆದಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ. ಆತ್ಮಹತ್ಯೆಗೂ ಮುನ್ನ ಇವರು ಕೊಡೈಕೆನಾಲ್ಗೆ ತೆರಳಿದ್ದರು ಎಂದು ಅವರ ಬಳಿಯಿದ್ದ ಬಸ್ ಟಿಕೆಟ್ನಿಂದ ಗೊತ್ತಾಗಿದೆ.