ETV Bharat / bharat

ಇವರು ಆಧುನಿಕ ಯುಗದ ಶ್ರವಣಕುಮಾರರು! - ಆಧುನಿಕ ಯುಗದ ಶ್ರವಣಕುಮಾರ

ಹರಿಯಾಣ ಮೂಲದ ನಾಲ್ವರು ಸಹೋದರರು ತಮ್ಮ ತಂದೆ-ತಾಯಿಯನ್ನು ಹೊತ್ತೊಯ್ಯುವ ಮೂಲಕ  'ಕನ್ವರ್ ಯಾತ್ರೆಯಲ್ಲಿ' ಪಾಲ್ಗೊಂಡಿದ್ದಾರೆ.

ಆಧುನಿಕ ಯುಗದ ಶ್ರವಣಕುಮಾರರ ಅಪರೂಪದ ಕಥೆ
author img

By

Published : Jul 28, 2019, 4:55 PM IST

ಶಾಮ್ಲಿ: ರಾಮಾಯಣದಲ್ಲಿ ಬರುವ ಶ್ರವಣ ಕುಮಾರನ ಕಥೆ ಬಹುತೇಕ ಎಲ್ಲರಿಗೂ ಪರಿಚಿತ. ಕುರುಡರಾಗಿದ್ದ ತನ್ನ ತಂದೆ-ತಾಯಿಯ ಆಸೆ ತೀರಿಸಲು ಅವರನ್ನು ಬುಟ್ಟಿಯಲ್ಲಿ ಕೂರಿಸಿಕೊಂಡು ಹೆಗಲಲ್ಲಿ ಹೊತ್ತೊಯ್ದು ತೀರ್ಥಯಾತ್ರೆ ಮಾಡಿಸುವ ಮೂಲಕ ಆದರ್ಶ ಪುತ್ರ ಎನಿಸಿಕೊಂಡವ ಶ್ರವಣಕುಮಾರ. ಅಂತೆಯೇ ಆಧುನಿಕ ಕಾಲದಲ್ಲೂ ಶ್ರವಣಕುಮಾರನಂತೆ ಸಹೋದರು ತಮ್ಮ ತಂದೆ-ತಾಯಿಯನ್ನು ಯಾತ್ರೆಗೆ ಕರೆದೊಯ್ದಿರುವ ಅಪರೂಪದ ಘಟನೆ ಹರಿಯಾಣದಲ್ಲಿ ನಡೆದಿದೆ.

ಈ ನಾಲ್ವರು ಸಹೋದರರು ಹರಿಯಾಣದ ಪಾಣಿಪತ್​ನವರಾಗಿದ್ದು, ಉತ್ತರಾಖಂಡ್​​ನ ಹರಿದ್ವಾರದಿಂದ ಹೊರಟಿರುವ ಇವರು, ಎರಡು ಬುಟ್ಟಿಯ ಮೂಲಕ ತಮ್ಮ ತಂದೆ-ತಾಯಿಯನ್ನು ಹೊತ್ತೊಯ್ಯುವ ಮೂಲಕ 'ಕನ್ವರ್ ಯಾತ್ರೆಯಲ್ಲಿ' ಪಾಲ್ಗೊಂಡು ಶಾಮ್ಲಿಯನ್ನು ತಲುಪಿದ್ದಾರೆ.

ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಸಹೋದರರು, ಈ ಮೊದಲು ಕೂಡ ನಾವು ಇಬ್ಬರು ಸಹೋದರರು ತಮ್ಮ ತಂದೆ-ತಾಯಿಯನ್ನು ಯಾತ್ರೆಗೆ ಹೊತ್ತೊಯ್ದಿದ್ದೆವು. ಈ ಬಾರಿ ನಾಲ್ವರು ಸಹೋದರರು ಸೇರಿ ಕರೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದಾರೆ.

ಕಲಿಯುಗದಲ್ಲೂ ಈ ರೀತಿ ತಂದೆ-ತಾಯಿಯ ಆಸೆಗಳಿಗೆ ಗೌರವಿಸುವ ಮಕ್ಕಳಿರುವುದು ಇತರರಿಗೆ ಮಾದರಿಯೇ ಸರಿ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.