ETV Bharat / bharat

ಬಾಲಾಕೋಟ್​​ ಏರ್​ಸ್ಟ್ರೈಕ್​ನಲ್ಲಿ 300 ಉಗ್ರರ ಸಾವು: ಪಾಕ್​ನ ಮಾಜಿ ಅಧಿಕಾರಿ - 2019ರಲ್ಲಿ ನಡೆದಿದ್ದ ಬಾಲಾಕೋಟ್ ಏರ್​ಸ್ಟ್ರೈಕ್​

Balakot airstrike by India
Balakot airstrike by India
author img

By

Published : Jan 9, 2021, 6:28 PM IST

Updated : Jan 9, 2021, 6:52 PM IST

18:26 January 09

2019ರಲ್ಲಿ ನಡೆದಿದ್ದ ಬಾಲಾಕೋಟ್ ಏರ್​ಸ್ಟ್ರೈಕ್​

ನವದೆಹಲಿ: ಪುಲ್ವಾಮಾ ದಾಳಿಗೆ ಪ್ರತ್ಯುತ್ತರವಾಗಿ 2019ರಲ್ಲಿ ಭಾರತದಿಂದ ನಡೆದಿದ್ದ ಬಾಲಾಕೋಟ್​ ಏರ್​​ಸ್ಟ್ರೈಕ್​ನಲ್ಲಿ ಪಾಕಿಸ್ತಾನದ 300 ಉಗ್ರರು ಸಾವನ್ನಪ್ಪಿದ್ದರು ಎಂದು ಪಾಕ್​ನ ಮಾಜಿ ಅಧಿಕಾರಿ ಶಾಕಿಂಗ್ ಹೇಳಿಕೆ ಹೊರಹಾಕಿದ್ದಾರೆ.  

ಪುಲ್ವಾಮಾ ದಾಳಿಯಲ್ಲಿ 40 ಸಿಆರ್‌ಪಿಎಫ್‌ ಯೋಧರ ಸಾವಿಗೆ ಪ್ರತಿಯಾಗಿ ಭಾರತೀಯ ವಾಯುಪಡೆ ಪಾಕಿಸ್ತಾನದ ಬಾಲಾಕೋಟ್‌ ಮೇಲೆ ಏರ್‌ಸ್ಟ್ರೈಕ್‌ ನಡೆಸಿತ್ತು. ಭಾರತೀಯ ವಾಯುಸೇನೆ ಗಡಿ ರೇಖೆ ದಾಟಿ ಪಾಕಿಸ್ತಾನದ ಒಳಗಡೆ ನುಗ್ಗಿ ಅನೇಕ ಉಗ್ರರ ಸದೆಬಡೆದಿತ್ತು.  

ಟಿವಿ ಸಂದರ್ಶನವೊಂದರಲ್ಲಿ ಭಾಗಿಯಾಗಿ ಮಾತನಾಡ್ತಿದ್ದ ವೇಳೆ ಪಾಕ್​ ಮಾಜಿ ಅಧಿಕಾರಿ ಜಾಫರ್ ಹಲಾಲಿ ಈ ಹೇಳಿಕೆ ನೀಡಿದ್ದಾರೆ. ಫೆಬ್ರವರಿ 26ರ 2019ರಲ್ಲಿ ಭಾರತೀಯ ವಾಯುಪಡೆಯಿಂದ ಬಾಲಾಕೋಟ್​ನಲ್ಲಿ ಜೈಶ್​-ಇ-ಮೊಹಮ್ಮದ್​​ ಉಗ್ರರ ಕ್ಯಾಂಪ್​ಗಳ ಮೇಲೆ ದಾಳಿ ನಡೆಸಲಾಗಿತ್ತು. ಈ ದಾಳಿಯಲ್ಲಿ ಪಾಕಿಸ್ತಾನದ ಯಾವುದೇ ವ್ಯಕ್ತಿ ಸಾವನ್ನಪ್ಪಿಲ್ಲ ಎಂದು ಪಾಕ್​ ಸರ್ಕಾರ ಹೇಳಿಕೊಂಡಿತ್ತು.

ಕಳೆದ ವರ್ಷ ಫೆಬ್ರವರಿ 14ರಂದು ಜಮ್ಮು ಕಾಶಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಗೆ 40 ಸಿಆರ್‌ಪಿಎಫ್‌ ಯೋಧರು ಹುತಾತ್ಮರಾಗಿದ್ದರು. ಈ ದಾಳಿಗೆ ಪ್ರತೀಕಾರವಾಗಿ ಬಾಲಾಕೋಟ್​ ದಾಳಿ ನಡೆಸಲಾಗಿತ್ತು.

Last Updated : Jan 9, 2021, 6:52 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.