ETV Bharat / bharat

ಮಧ್ಯಪ್ರದೇಶದಲ್ಲಿ ಶಿವಸೇನೆ ಮಾಜಿ ಮುಖಂಡನ ಗುಂಡಿಕ್ಕಿ ಹತ್ಯೆ - ಮಧ್ಯಪ್ರದೇಶ ಶಿವಸೇನೆ ಮಾಜಿ ಮುಖಂಡ

ಅಪರಿಚಿತ ದುಷ್ಕರ್ಮಿಗಳು ಮಧ್ಯರಾತ್ರಿ ಶಿವಸೇನೆ ಮಾಜಿ ಮುಖಂಡನ ಹತ್ಯೆ ಮಾಡಿದ್ದು, ಇದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ.

Ramesh Sahu
Ramesh Sahu
author img

By

Published : Sep 2, 2020, 4:23 PM IST

ಇಂದೋರ್​​(ಮಧ್ಯಪ್ರದೇಶ): ಮಧ್ಯಪ್ರದೇಶ ಶಿವಸೇನೆಯ ಮಾಜಿ ಮುಖಂಡನ ಗುಂಡಿಕ್ಕಿ ಹತ್ಯೆಗೈಯಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಆರೋಪಿಗಳಿಗಾಗಿ ಶೋಧಕಾರ್ಯ ಮುಂದುವರಿಸಿದ್ದಾರೆ.

70 ವರ್ಷದ ರಮೇಶ್​ ಸಾಹು ಮೇಲೆ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ದಾಳಿ ನಡೆಸಿದ್ದು, ಕ್ಷಣಾರ್ಧದಲ್ಲಿ ಅಲ್ಲಿಂದ ಪರಾರಿಯಾಗಿದ್ದಾರೆ. ಇಂದೋರ್​​ನ ಉಮ್ಡಿಖೇಡಾ ಗ್ರಾಮದ ರಸ್ತೆ ಬದಿ ರಮೇಶ್​​ ವ್ಯಾಪಾರ ನಡೆಸುತ್ತಿದ್ದರು. ಕೆಲ ಅಪರಿಚಿತ ವ್ಯಕ್ತಿಗಳು ಮಂಗಳವಾರ ತಡರಾತ್ರಿ ಇವರ ಉಪಹಾರ ಗೃಹಕ್ಕೆ ತೆರಳಿ ಏಕಾಏಕಿ ಎದೆಗೆ ಗುಂಡಿಕ್ಕಿ ಪರಾರಿಯಾಗಿದ್ದಾರೆ ಎಂದು ತೇಜಾಜಿ ನಗರ ಪೊಲೀಸ್​ ಠಾಣೆ ಉಸ್ತುವಾರಿ ಆರ್​​.ಎನ್​​​ ಭದೋರಿಯಾ ತಿಳಿಸಿದ್ದಾರೆ.

ರಮೇಶ್​ ಸಾಹು ಮೃತದೇಹ ರಸ್ತೆಯ ಮೇಲೆ ಬಿದ್ದಿರುವುದನ್ನ ನೋಡಿರುವ ಕೆಲವರು ಹತ್ತಿರದ ಪೊಲೀಸ್​ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕೊಲೆಯ ಹಿಂದಿನ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ವೈಯಕ್ತಿಕ ಕಾರಣಗಳಿಂದಾಗಿ ಈ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. 1990ರಲ್ಲಿ ರಾಜ್ಯ ಶಿವಸೇನೆ ಘಟಕದ ಮುಖ್ಯಸ್ಥರಾಗಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.