ETV Bharat / bharat

ವಿದೇಶಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಕರ್ನಾಟಕವೇ ಅತ್ಯುತ್ತಮ..! - ವಿದೇಶದಿಂದ ಉನ್ನತ ವಿದ್ಯಾಭ್ಯಾಸಕ್ಕೆಂದು ಭಾರತಕ್ಕೆ ಆಗಮನ

ವಿದ್ಯಾಭ್ಯಾಸಕ್ಕಾಗಿ ಭಾರತಕ್ಕೆ ಆಗಮಿಸುವ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ. ಅದ್ರಲ್ಲೂ ನೇಪಾಳ ಹಾಗೂ ಅಫ್ಘಾನಿಸ್ತಾನದ ವಿದ್ಯಾರ್ಥಿಗಳ ಸಂಖ್ಯೆಯೇ ಹೆಚ್ಚು ಎಂದು ವರದಿ ಹೇಳಿದೆ.

ವಿದೇಶಿ ವಿದ್ಯಾರ್ಥಿಗಳಿಗೆ ಕರ್ನಾಟಕವೇ ವಿದ್ಯಾಕಾಶಿ
author img

By

Published : Sep 25, 2019, 2:05 PM IST

ನವದೆಹಲಿ/ಬೆಂಗಳೂರು: ವಿದೇಶದಿಂದ ಉನ್ನತ ವಿದ್ಯಾಭ್ಯಾಸಕ್ಕೆಂದು ಭಾರತಕ್ಕೆ ಆಗಮಿಸುವ ಯುವ ಜನತೆಗೆ ಕರ್ನಾಟಕ ಅತ್ಯುತ್ತಮ ವಿದ್ಯಾಕಾಶಿ ಎಂದು ಮಾನವ ಸಂಪನ್ಮೂಲ ಇಲಾಖೆಯ ವರದಿ ಹೇಳಿದೆ.

2018-19ರಲ್ಲಿ ವಿದ್ಯಾಭ್ಯಾಸಕ್ಕೆ ಭಾರತಕ್ಕಾಗಮಿಸಿದ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆ 47,427 ಆಗಿದ್ದರೆ, 10,023 ವಿದ್ಯಾರ್ಥಿಗಳು ಕರ್ನಾಟಕವನ್ನೇ ಆರಿಸಿಕೊಂಡಿದ್ದಾರೆ ಎಂದು ಅಖಿಲ ಭಾರತ ಉನ್ನತ ಶಿಕ್ಷಣ ಸಮೀಕ್ಷೆ ತಿಳಿಸಿದೆ. ಈ ಮೂಲಕ ವಿದೇಶಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಕರ್ನಾಟಕವನ್ನೇ ತಮ್ಮ ಮೊದಲ ಆದ್ಯತೆಯಾಗಿ ಪರಿಗಣಿಸಿದ್ದಾರೆ ಎಂದು ತಿಳಿದು ಬಂದಿದೆ.

ಒಟ್ಟಾರೆ ಭಾರತಕ್ಕೆ ಆಗಮಿಸುವ ವಿದೇಶಿ ವಿದ್ಯಾರ್ಥಿಗಳ ಸರಾಸರಿ ಪ್ರಮಾಣದಲ್ಲಿ ಕರ್ನಾಟಕದ ಪಾಲು ಶೇ.20ರಿಂದ ಶೇ.35ರ ನಡುವೆ ಇರುತ್ತದೆ ಎಂದು ಮಾನವ ಸಂಪನ್ಮೂಲ ಇಲಾಖೆ ಹೇಳಿದೆ.

ಸಮೀಕ್ಷೆ ನಡೆಸಿದ್ದು ಹೇಗೆ...?

ಸದ್ಯ ನಡೆಸಲಾದ ಸಮೀಕ್ಷೆಗೆ ಇಲಾಖೆ ಮೂರು ವಿಭಾಗಗಳಾಗಿ ವಿಂಗಡಿಸಿ ಸರ್ವೆ ಮಾಡಿದೆ. ಅವುಗಳ ಪ್ರಕಾರ ವಿಶ್ವವಿದ್ಯಾನಿಲಯ, ಕಾಲೇಜು ಹಾಗೂ ಸ್ವಾಯತ್ತ ಕಾಲೇಜು(ಅಟೊನೊಮಸ್)ಗಳಾಗಿ ವಿಂಗಡಣೆ ಮಾಡಿ ಸರ್ವೆ ಮಾಡಲಾಗಿದೆ.

962 ವಿವಿ, 38,179 ಕಾಲೇಜು ಹಾಗೂ 9,190 ಸ್ವಾಯತ್ತ ಕಾಲೇಜುಗಳನ್ನು ಒಳಪಡಿಸಲಾಗಿತ್ತು. ಸುಮಾರು 164 ವಿವಿಧ ದೇಶಗಳಿಂದ ಭಾರತಕ್ಕೆ ಶಿಕ್ಷಣ ಅರಸಿ ವಿದ್ಯಾರ್ಥಿಗಳು ಆಗಮಿಸುತ್ತಿದ್ದಾರೆ.

ನೇಪಾಳ(ಶೇ.26.9)ದಿಂದ ಆಗಮಿಸುವ ವಿದ್ಯಾರ್ಥಿಗಳ ಸಂಖ್ಯೆಯೇ ಹೆಚ್ಚಿನ ಪ್ರಮಾಣದಲ್ಲಿದೆ. ನಂತರದ ಸ್ಥಾನದಲ್ಲಿ ಅಫ್ಘಾನಿಸ್ತಾನ(ಶೇ.9.8), ಬಾಂಗ್ಲಾದೇಶ(ಶೇ.4.4), ಸುಡಾನ್(ಶೇ.4), ಭೂತಾನ್(ಶೇ.3.8) ಹಾಗೂ ನೈಜೀರಿಯಾ(ಶೇ.3.4) ದೇಶಗಳಿವೆ.

Intro:Body:

ವಿದೇಶಿ ವಿದ್ಯಾರ್ಥಿಗಳಿಗೆ ಕರ್ನಾಟಕವೇ ವಿದ್ಯಾಕಾಶಿ: ವರದಿ

ನವದೆಹಲಿ/ಬೆಂಗಳೂರು: ವಿದೇಶದಿಂದ ಉನ್ನತ ವಿದ್ಯಾಭ್ಯಾಸಕ್ಕೆಂದು ಭಾರತಕ್ಕೆ ಆಗಮಿಸುವ ಯುವ ಜನತೆಗೆ ಕರ್ನಾಟಕ ಅತ್ಯುತ್ತಮ ವಿದ್ಯಾಕಾಶಿ ಎಂದು ಮಾನವ ಸಂಪನ್ಮೂಲ ಇಲಾಖೆಯ ವರದಿ ಹೇಳಿದೆ.

ಭಾರತಕ್ಕೆ ವಿದ್ಯಾಭ್ಯಾಸಕ್ಕೆ ಆಗಮಿಸುವ ಸಂಖ್ಯೆಯ ಹೆಚ್ಚಳವಾಗುತ್ತಿದ್ದು, ನೇಪಾಳ ಹಾಗೂ ಅಫ್ಘಾನಿಸ್ತಾನದ ವಿದ್ಯಾರ್ಥಿಗಳ ಸಂಖ್ಯೆಯೇ ಹೆಚ್ಚು ಎಂದು ವರದಿಯಲ್ಲಿ ಉಲ್ಲೇಖವಾಗಿದೆ.

2018-19ರಲ್ಲಿ ವಿದ್ಯಾಭ್ಯಾಸಕ್ಕೆ ಭಾರತಕ್ಕೆ ಆಗಮಿಸಿದ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆ 47,427 ಆಗಿದ್ದರೆ, 10,023 ವಿದ್ಯಾರ್ಥಿಗಳು ಕರ್ನಾಟಕವನ್ನೇ ಆರಿಸಿಕೊಂಡಿದ್ದಾರೆ ಎಂದು ಅಖಿಲ ಭಾರತ ಉನ್ನತ ಶಿಕ್ಷಣ ಸಮೀಕ್ಷೆ ತಿಳಿಸಿದೆ. ಈ ಮೂಲಕ ವಿದೇಶಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಕರ್ನಾಟಕವನ್ನೇ ಮೊದಲ ಆದ್ಯತೆಯಾಗಿ ಪರಿಗಣಿಸಿದ್ದಾರೆ ಎಂದು ತಿಳಿದು ಬಂದಿದೆ.

ಒಟ್ಟಾರೆ ಭಾರತಕ್ಕೆ ಆಗಮಿಸುವ ವಿದೇಶಿ ವಿದ್ಯಾರ್ಥಿಗಳ ಸರಾಸರಿ ಪ್ರಮಾಣದಲ್ಲಿ ಕರ್ನಾಟಕದ ಪಾಲು ಶೇ.20ರಿಂದ ಶೇ.35ರ ನಡುವೆ ಇರುತ್ತದೆ ಎಂದು ಮಾನವ ಸಂಪನ್ಮೂಲ ಇಲಾಖೆ ಹೇಳಿದೆ.

ಸಮೀಕ್ಷೆ ನಡೆಸಿದ್ದು ಹೇಗೆ...?

ಸದ್ಯ ನಡೆಸಲಾದ ಸಮೀಕ್ಷೆಗೆ ಇಲಾಖೆ ಮೂರು ವಿಭಾಗಗಳಾಗಿ ವಿಂಗಡಿಸಿ ಸರ್ವೆ ಮಾಡಿದೆ. ಅವುಗಳ ಪ್ರಕಾರ ವಿಶ್ವವಿದ್ಯಾನಿಲಯ, ಕಾಲೇಜು ಹಾಗೂ ಸ್ವಾಯತ್ತ ಕಾಲೇಜು(ಅಟೊನೊಮಸ್)ಗಳಾಗಿ ವಿಂಗಡಣೆ ಮಾಡಿ ಸರ್ವೆ ಮಾಡಲಾಗಿದೆ.

962 ವಿವಿ, 38,179 ಕಾಲೇಜು ಹಾಗೂ 9,190 ಸ್ವಾಯತ್ತ ಕಾಲೇಜುಗಳನ್ನು ಒಳಪಡಿಸಲಾಗಿತ್ತು. ಸುಮಾರು 164 ವಿವಿಧ ದೇಶಗಳಿಂದ ಭಾರತಕ್ಕೆ ಶಿಕ್ಷಣ ಅರಸಿ ವಿದ್ಯಾರ್ಥಿಗಳು ಆಗಮಿಸುತ್ತಿದ್ದಾರೆ.

ನೇಪಾಳ(ಶೇ.26.9)ದಿಂದ ಆಗಮಿಸುವ ವಿದ್ಯಾರ್ಥಿಗಳ ಸಂಖ್ಯೆಯೇ ಹೆಚ್ಚಿನ ಪ್ರಮಾಣದಲ್ಲಿದೆ. ನಂತರದ ಸ್ಥಾನದಲ್ಲಿ ಅಫ್ಘಾನಿಸ್ತಾನ(ಶೇ.9.8), ಬಾಂಗ್ಲಾದೇಶ(ಶೇ.4.4), ಸುಡಾನ್(ಶೇ.4), ಭೂತಾನ್(ಶೇ.3.8) ಹಾಗೂ ನೈಜೀರಿಯಾ(ಶೇ.3.4) ದೇಶಗಳಿವೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.