ಮೊರಾದಾಬಾದ್, (ಉತ್ತರಪ್ರದೇಶ): ದಿನ ಬೆಳಗಾದರೆ ವಿಶ್ವದ ನಾನಾ ಕಡೆ ಇರುವ ಯುವಕರು ಒಂದಲ್ಲಾ ಒಂದು ರೀತಿಯ ಹೊಸ ಹೊಸ ಆವಿಷ್ಕಾರಗಳನ್ನು ಮಾಡಿ ಸಮಾಜಕ್ಕೆ ಕೊಡುಗೆ ನೀಡುತ್ತಿದ್ದಾರೆ.
ಇತ್ತೀಚಿಗೆ ಮಹಿಳೆಯರ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯವು ಮನು ಕುಲವನ್ನೇ ಬೆಚ್ಚಿ ಬೀಳಿಸುತ್ತಿದೆ. ಚಿಕ್ಕ ಹಸುಳೆಗಳನ್ನು ಬಿಡದೆ ಅತ್ಯಾಚಾರ ಮಾಡುವ ಕ್ರೂರ ಮೃಗಗಳು ನಮ್ಮ ಸುತ್ತಮುತ್ತ ಇವೆ. ಆದರೆ, ಇಂತಹ ದೌರ್ಜನ್ಯಗಳಿಗೆ ಬ್ರೇಕ್ ಹಾಕುವ ಒಂದು ಪ್ರಯತ್ನ ಇಲ್ಲಿ ನಡೆದಿದೆ. ಆದೇ ಫ್ಲೈಯಿಂಗ್ ಕಾಪ್ ಅಂಡ್ ವುಮೆನ್ಸ್ ಡಿಫೆನ್ಸ್ ಸಿಸ್ಟಂ.
ಉತ್ತರ ಪ್ರದೇಶದ ಮೊರಾದಬಾದ್ನ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಈ ತಂತ್ರಜ್ಞಾನ ಆವಿಷ್ಕರಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ದಿವಾಕರ್ ಶರ್ಮಾ ಎಂಬ ವಿದ್ಯಾರ್ಥಿ, ಈ ತಂತ್ರಜ್ಞಾನವು ಮಹಿಳೆಯರ ಮೇಲೆ ದೌರ್ಜನ್ಯ ತಡೆಯುವ ಉದ್ದೇಶದಿಂತ ಮಾಡಲಾಗಿದೆ. ಯಂತ್ರವನ್ನು ಮಹಿಳೆಯರ ಚಪ್ಪಲಿಗಳಿಗೆ ಅಳವಡಿಕೆ ಮಾಡಲಾಗಿರುತ್ತದೆ. ಮಹಿಳೆಯ ಮೇಲೆ ದೌರ್ಜನ್ಯ ಎದುರಾದ ಸಮಯದಲ್ಲಿ ಈ ಮೆಷಿನ್ನ ಬಟನ್ ಪ್ರೆಸ್ ಮಾಡಿದಾಗ ಆ ಮಹಿಳೆಗೆ ಅವಳು ಧರಿಸಿರುವ ಚಪ್ಪಲಿಯಿಂದಲೇ ಸಹಾಯವಾಗುತ್ತದೆ.
ಆ ಒಂದು ಬಟನ್ ಅತ್ಯಾಚಾರಿಗಳನ್ನ ಮಟ್ಟ ಹಾಕುತ್ತೆ :
ಈ ಫ್ಲೈಯಿಂಗ್ ಕಾಪ್ ಅಂಡ್ ವುಮೆನ್ಸ್ ಡಿಫೆನ್ಸ್ ಸಿಸ್ಟಂ ಮೆಷಿನ್(ಚಪ್ಪಲಿ)ನಲ್ಲಿ ಒಂದು ಪ್ಯಾನಿಕ್ ಬಟನ್ ಇದ್ದು, ಮಹಿಳೆಯ ಮೇಲೆ ದೌರ್ಜನ್ಯ ನಡೆಯುವ ಸಮಯದಲ್ಲಿ ಆ ಬಟನ್ ಪ್ರೆಸ್ ಮಾಡಿ, ಆ ಚಪ್ಪಲಿಯಿಂದ ವ್ಯಕ್ತಿಯನ್ನು ಹೊಡೆದಾಗ ಶಾಕ್ ಜನರೇಟ್ ಆಗಿ ವ್ಯಕ್ತಿಯನ್ನು ಮಣಿಸುವಲ್ಲಿ ಸಹಾಯಕವಾಗುತ್ತೆ.
ನಂತರ ಆ ಮೆಷಿನ್ನಿಂದ ಜಿಪಿಎಸ್ ಸಿಗ್ನಲ್ ಪಾಸ್ ಆಗಿ, ಸಮೀಪ ಇರುವ ಡ್ರೋನ್ ಸ್ಥಳಕ್ಕೆ ಆಗಮಿಸುತ್ತದೆ. ನಂತರ ಆ ಡ್ರೋನ್ನಿಂದ ಅಲಾರಾಂ ಸೌಂಡ್ ಹೊರ ಬಂದು ಆ ಪ್ರದೇಶದ ಜನರು ಸ್ಥಳಕ್ಕೆ ಆಗಮಿಸಲು ಅನುವು ಮಾಡಿಕೊಡುತ್ತದೆ. ನಂತರ ಮಹಿಳೆ ಇರುವ ಲೊಕೇಶನ್‌ನ ಸಮೀಪದ ಪೊಲೀಸ್ ಸ್ಟೇಷನ್ ಹಾಗೂ ಮಹಿಳೆಯ ಕುಟುಂಬದವರಿಗೂಗೆ ರವಾನಿಸುತ್ತದೆ.