ಭುವನೇಶ್ವರ: ಒಡಿಶಾದ ಪ್ರವಾಹ ಪರಿಸ್ಥಿತಿ ಮುಂದುವರೆದಿದ್ದು, ರಾಜ್ಯದಾದ್ಯಂತ ಪ್ರಮುಖ ನದಿಗಳು ತುಂಬಿಹರಿಯುತ್ತಿವೆ. ಮಹಾನದಿ ನದಿಯ ಪ್ರವಾಹವು ರಾಜ್ಯದ ಹಲವಾರು ಭಾಗಗಳನ್ನು ಈಗಾಗಲೇ ಮುಳುಗಿಸಿದೆ ಮತ್ತು ಹಿರಾಕುಡ್ ಅಣೆಕಟ್ಟಿನ 46 ಕ್ರೆಸ್ಟ್ ಗೇಟ್‌ಗಳ ಮೂಲಕ ಹೆಚ್ಚುವರಿ ಪ್ರವಾಹದ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ.
ಹಿರಾಕುಡ್, ಬೌಧ್‌ನ ಹರ್ಭಂಗಾ, ಸುಬರ್ಣಾಪುರದ ಉಲುಂಡಾ, ಬಾರ್‌ಗರ್ ಅಂಬಾಭೋನಾ ಮತ್ತು ಝಾರ್ಸುಗುಡಾದ ಲಖನ್‌ಪುರದಿಂದ ಪ್ರವಾಹದ ನೀರು ಹರಿದು ಬಂದು ಮಹಾನದಿ ನದಿಯನ್ನು ಸೇರುತ್ತದೆ.
ಸಂಬಲ್‌ಪುರ, ಜಗತ್ಸಿಂಗ್‌ಪುರ ಮತ್ತು ಖೋರ್ಧಾದಲ್ಲಿ ಕೂಡ ಪರಿಸ್ಥಿತಿ ಭಿನ್ನವಾಗಿಲ್ಲ. ದಯಾ ಮತ್ತು ರಾಜುವಾ ನದಿಗಳ ನೀರಿನ ಮಟ್ಟ ಏರಿಕೆಯಿಂದಾಗಿ ಖೋರ್ಧಾ ಜಿಲ್ಲೆಯ ಒರಬರಸಿಂಗ್ ಮತ್ತು ನಾರಂಗಡ ಪಂಚಾಯಿತಿಗಳ ಅಡಿಯಲ್ಲಿ ಬರುವ ಸುಮಾರು 20 ಗ್ರಾಮಗಳು ಮುಳುಗಿವೆ ಎಂದು ವರದಿಯಾಗಿದೆ.