ಮುಂಬೈ: ಸೆಪ್ಟೆಂಬರ್ 29ರಿಂದ ಅಕ್ಟೋಬರ್ 4ರವರೆಗೆ ನಡೆಯಲಿರುವ ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇ ಸೇಲ್ನಲ್ಲಿ ಕೆಲವೊಂದು ಸ್ಮಾರ್ಟ್ ಪೋನ್ಗಳು ಅತಿ ಕಡಿಮೆ ದರದಲ್ಲಿ ಗ್ರಾಹಕರ ಕೈ ಸೇರಿಕೊಳ್ಳಲಿವೆ.
ಈಗಾಗಲೇ ಲಭ್ಯವಾಗಿರುವ ಮಾಹಿತಿ ಪ್ರಕಾರ ಕೆಲವೊಂದು ಮೊಬೈಲ್ ಫೋನ್ಗಳ ಮೇಲೆ ಶೇ 25ರಷ್ಟು ರಿಯಾಯಿತಿ ಲಭ್ಯವಾಗಲಿದೆ. ಮುಖ್ಯವಾಗಿ 13,999 ರೂಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ Motorola One Action ಮೊಬೈಲ್ 11,999 ರೂಗೆ ಲಭ್ಯವಾಗಲಿದ್ದು, Motorola One Vision ಮೊಬೈಲ್ 5 ಸಾವಿರ ರೂ ರಿಯಾಯಿತಿಯೊಂದಿಗೆ 14,999 ರೂಗೆ ಲಭ್ಯವಾಗಲಿದೆ.
Moto G7 ಮೊಬೈಲ್ ಮೇಲೆ 7,500 ರೂ ಕಡಿತದೊಂದಿಗೆ 16,999 ರೂಗೆ,Lenovo Z6 Pro ಮೇಲೆ 3 ಸಾವಿರ ಕಡಿತದೊಂದಿಗೆ 31,999ರೂಗೆ,Lenovo A6 Note ಮೇಲೆ 1 ಸಾವಿರ ರೂ ಕಡಿತಗೊಂಡು 6 ಸಾವಿರಕ್ಕೆ ಲಭ್ಯವಾಗಲಿದೆ. ಉಳಿದಂತೆ Lenovo K10 Note ಮೇಲೆ 2 ಸಾವಿರ ಕಡಿತ,Lenovo K9 ಮೊಬೈಲ್ ಬೆಲೆಯಲ್ಲಿ 500ರೂ ಕಡಿತ ಮಾಡಲಾಗಿದೆ. ಇದರ ಜತೆಗೆ ರಿಯಲ್ಮಿ, ಶಿಯೋಮಿ ಸ್ಮಾರ್ಟ್ಫೋನ್ಗಳ ಮೇಲೆ ಭರ್ಜರಿ ಡಿಸ್ಕೌಂಟ್ ನೀಡುತ್ತಿದೆ.