ETV Bharat / bharat

ಮಹಾರಾಷ್ಟ್ರದ ಗಡ್‌ಚಿರೋಲಿಯಲ್ಲಿ ಐವರು ನಕ್ಸಲರ ಹತ್ಯೆ - ಗಡಚಿರೋಲಿ ಜಿಲ್ಲಾ ಸುದ್ದಿ

ಇಂದು ನಡೆದ ಗುಂಡಿನ ಕಾಳಗದಲ್ಲಿ ಐವರು ನಕ್ಸಲರನ್ನು ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

naxals killed
ನಕ್ಸಲರ ಹತ್ಯೆ
author img

By

Published : Oct 18, 2020, 7:36 PM IST

ಗಡಚಿರೋಲಿ(ಮಹಾರಾಷ್ಟ್ರ) : ಮಾವೋವಾದಿಗಳು ಹಾಗೂ ಪೊಲೀಸರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಐವರು ನಕ್ಸಲರನ್ನು ಹತ್ಯೆ ಮಾಡಲಾಗಿದೆ. ಗಡ್‌ಚಿರೋಲಿ ಜಿಲ್ಲೆಯ ಗ್ಯಾರಪಟ್ಟಿ ಪ್ರದೇಶದಲ್ಲಿ ಘಟನೆ ಸಂಭವಿಸಿದೆ.

ಗಡ್‌ಚಿರೋಲಿಯ ಸಿ-60 ಪೊಲೀಸರ ತಂಡ, ನಕ್ಸಲರಿರುವ ಪ್ರದೇಶವಾದ ಕೊಸಾಮಿ-ಕಿಸ್ನೇಲಿ ಅರಣ್ಯ ಪ್ರದೇಶದಲ್ಲಿ ಭಾನುವಾರ ಸಂಜೆ 5 ಗಂಟೆ ವೇಳೆ ವಿಶೇಷ ಕಾರ್ಯಾಚರಣೆ ನಡೆಸಿದೆ. ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಮಹಿಳಾ ನಕ್ಸಲರು ಸೇರಿದಂತೆ ಐವರನ್ನು ಪೊಲೀಸರು ಹೊಡೆದುರುಳಿಸಿದ್ದಾರೆ.

ಪೊಲೀಸ್ ವರಿಷ್ಠಾಧಿಕಾರಿ ಅಂಕಿತ್ ಗೋಯಲ್ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಮನೀಶ್ ಕಲ್ವಾನಿಯಾ ಮತ್ತು ಉಪ ಪೊಲೀಸ್ ವರಿಷ್ಠಾಧಿಕಾರಿ ಭೌಸಾಹೇಬ್ ಧೋಲ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.