ETV Bharat / bharat

ಸುರಕ್ಷಿತ ಮತದಾನಕ್ಕೆ ಚುನಾವಣಾ ಆಯೋಗ ಒತ್ತು: 71 ಕ್ಷೇತ್ರಗಳಲ್ಲಿ ಹೀಗಿದೆ ವಾತಾವರಣ.. - ಬಿಹಾರದ ಮತದಾರರು ಮತ್ತು ಅಭ್ಯರ್ಥಿಗಳು

ಬಿಹಾರ ಚುನಾವಣೆಯ ಮೊದಲ ಹಂತದ ಮತದಾನ ಬುಧವಾರ ನಡೆಯಲಿದ್ದು, ಚುನಾವಣಾ ಆಯೋಗ ಕೆಲವು ಮಾರ್ಗಸೂಚಿಗಳನ್ನು ಹೊರಡಿಸಿದೆ.

bihar election
ಬಿಹಾರ ಚುನಾವಣೆ
author img

By

Published : Oct 27, 2020, 3:29 PM IST

ಪಾಟ್ನಾ (ಬಿಹಾರ): ಕೊರೊನಾ ಸೋಂಕಿನ ಮಧ್ಯೆ ಮತದಾನವನ್ನು ಸುರಕ್ಷಿತವಾಗಿ ನಡೆಸಲು ಚುನಾವಣಾ ಆಯೋಗ ಮಾರ್ಗಸೂಚಿಗಳನ್ನು ಹೊರಡಿಸಿದೆ.

ಒಂದು ಮತದಾನ ಕೇಂದ್ರಕ್ಕೆ ಗರಿಷ್ಠ ಸಂಖ್ಯೆಯ ಮತದಾರರ ಸಂಖ್ಯೆಯನ್ನು 1,600ರಿಂದ 1,000ಕ್ಕೆ ಇಳಿಸುವುದು. ಮತದಾನದ ಸಮಯದಲ್ಲಿ ಬದಲಾವಣೆ ಮಾಡುವುದು. 80 ವರ್ಷಕ್ಕಿಂತ ಮೇಲ್ಪಟ್ಟ ವಯೋವೃದ್ಧರಿಗೆ ಅಂಚೆ ಮತಪತ್ರ ಸೌಲಭ್ಯ ಒದಗಿಸುವ ನಿರ್ಧಾರ ಕೈಗೊಂಡಿದೆ.

ಇಷ್ಟು ಮಾತ್ರವಲ್ಲದೇ ಎಲೆಕ್ಟ್ರಾನಿಕ್ ಮತದಾನ ಯಂತ್ರಗಳ ನೈರ್ಮಲ್ಯೀಕರಣ, ಚುನಾವಣಾ ಸಿಬ್ಬಂದಿಗೆ ಮಾಸ್ಕ್​, ಥರ್ಮಲ್ ಸ್ಕ್ಯಾನರ್, ಸ್ಯಾನಿಟೈಸರ್, ಕೈತೊಳೆಯಲು ಸೋಪು ಮುಂತಾದ ರಕ್ಷಣಾ ಸಾಮಗ್ರಿಗಳನ್ನು ಒದಗಿಸಲು ಚುನಾವಣಾ ಅಯೋಗ ವ್ಯವಸ್ಥೆ ಮಾಡಿದೆ.

ಮತದಾರರು ಮತ್ತು ಅಭ್ಯರ್ಥಿಗಳು..

ಮೊದಲ ಹಂತದ ಚುನಾವಣೆಯಲ್ಲಿ ಎರಡು ಕೋಟಿಗೂ ಹೆಚ್ಚು ಮಂದಿ ಮತದಾರರರು ಸುಮಾರು 1066 ಅಭ್ಯರ್ಥಿಗಳ ಭವಿಷ್ಯ ಬರೆಯಲಿದ್ದು, ಸುಮಾರು 71 ವಿಧಾನ ಕ್ಷೇತ್ರಗಳಲ್ಲಿ ಚುನಾವಣೆ ಜರುಗಲಿದೆ.

ಒಟ್ಟು ಮತದಾರರು 2.14 ಕೋಟಿ ಇದ್ದು, ಇದರಲ್ಲಿ 1.01 ಕೋಟಿ ಮಹಿಳಾ ಮತದಾರರಿದ್ದಾರೆ. 599 ಮಂದಿ ತೃತೀಯ ಲಿಂಗಿ ಮತದಾರರಿದ್ದಾರೆ ಎಂದು ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಹೇಳಲಾಗಿದೆ.

ಮೊದಲ ಹಂತದ ಚುನಾವಣೆಯಲ್ಲಿ 962 ಮಂದಿ ಪುರುಷ ಅಭ್ಯರ್ಥಿಗಳು, 114 ಮಂದಿ ಮಹಿಳಾ ಅಭ್ಯರ್ಥಿಗಳಿದ್ದು, ಗಯಾ ಪಟ್ಟಣದಲ್ಲಿ 27 ಮಂದಿ ಸ್ಪರ್ಧಿಸಿದ್ದು, ಬಂಕಾ ಜಿಲ್ಲೆಯ ಕೊಟಾರಿಯಾದಲ್ಲಿ 5 ಮಂದಿ ಕಣಕ್ಕೆ ಇಳಿದಿದ್ದಾರೆ.

ಮೊದಲ ಹಂತದ ಚುನಾವಣೆಯಲ್ಲಿ ಪಕ್ಷಗಳ ಸ್ಪರ್ಧೆ

ಪ್ರಮುಖ ರಾಜಕೀಯ ಪಕ್ಷಗಳಿಗೆ ಸಂಬಂಧಿಸಿದಂತೆ ಸಿಎಂ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಮೊದಲ ಹಂತದ ಚುನಾವಣೆಯ 71 ವಿಧಾನಸಭಾ ಕ್ಷೇತ್ರಗಳಲ್ಲಿ 35ರಲ್ಲಿ ಸ್ಪರ್ಧೆಗೆ ಒಡ್ಡಿಕೊಂಡಿದೆ. ಬಿಜೆಪಿ 29 ಕ್ಷೇತ್ರಗಳಲ್ಲಿ, ಆರ್​ಜೆಡಿ 42 ಕ್ಷೇತ್ರಗಳಲ್ಲಿ, ಕಾಂಗ್ರೆಸ್ 20 ಕ್ಷೇತ್ರಗಳಲ್ಲಿ ಭವಿಷ್ಯ ಪರೀಕ್ಷೆಗೆ ಮುಂದಾಗಿದೆ.

ಇಷ್ಟು ಮಾತ್ರವಲ್ಲದೇ ಚಿರಾಗ್ ಪಾಸ್ವನ್ ನೇತೃತ್ವದ ಲೋಕ ಜನಶಕ್ತಿ ಪಕ್ಷ (ಎಲ್​ಜೆಪಿ) 41 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದು, ಜೆಡಿಯು ಕಣಕ್ಕೆ ಇಳಿದಿರುವ ಎಲ್ಲಾ 35 ಕ್ಷೇತ್ರಗಳಲ್ಲಿ ನಿಂತು ಸವಾಲೊಡ್ಡಿದೆ.

ಕಾಮನ್​ವೆಲ್ತ್​ ಚಿನ್ನದ ಪದಕ ವಿಜೇತೆ ಕಣದಲ್ಲಿ..!

ಕಾಮನ್​ವೆಲ್ತ್​​ ಗೇಮ್ಸ್​ನಲ್ಲಿ ಶೂಟಿಂಗ್​​ನಲ್ಲಿ ಚಿನ್ನದ ಪದಕ ಗೆದ್ದ 27 ವರ್ಷದ ಶ್ರೇಯಸಿ ಸಿಂಗ್ ಈ ಬಾರಿ ಜುಮೈ ವಿಧಾನಸಭಾ ಕ್ಷೇತ್ರದಿಂದ ಭಾರತೀಯ ಜನತಾ ಪಾರ್ಟಿಯ ಪರವಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕೇಂದ್ರ ಸರ್ಕಾರದ ಮಾಜಿ ಸಚಿವ ಜಯಪ್ರಕಾಶ್ ನಾರಾಯಣ ಯಾದವ್ ಅವರ ಪುತ್ರಿ 28 ವರ್ಷದ ದಿವ್ಯ ಪ್ರಕಾಶ್ ಕೂಡಾ ತಾರಾಪುರ ವಿಧಾನಸಭಾ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದಾರೆ.

ಮೊದಲ ಹಂತದ ಚುನಾವಣೆಯಲ್ಲಿ ಹಾಲಿ ಸಚಿವರು

ಸದ್ಯಕ್ಕೆ ನಿತೀಶ್ ಕುಮಾರ್ ಸರ್ಕಾರದಲ್ಲಿ ಕ್ಯಾಬಿನೆಟ್​ ದರ್ಜೆಯ ಸಚಿವರಾಗಿರುವ ಪ್ರೇಮ್ ಕುಮಾರ್ (ಗಯಾ ಪಟ್ಟಣ), ವಿಜಯ್ ಕುಮಾರ್ ಸಿನ್ಹಾ (ಲಖಿಸರೈ), ರಾಮ್ ನಾರಾಯಣ್ ಮಂಡಲ್ (ಬಂಕಾ), ಕೃಷ್ಣಾನಂದನ್ ಪ್ರಸಾದ್ ವರ್ಮಾ (ಜೆಹಾನಾಬಾದ್), ಜೈಕುಮಾರ್ ಸಿಂಗ್ (ದಿನಾರಾ) ಮತ್ತು ಸಂತೋಷ್ ಕುಮಾರ್ ನಿರಾಲಾ (ರಾಜ್ಪುರ) ಮೊದಲ ಹಂತದ ಚುನಾವಣೆಯಲ್ಲಿಯೇ ತಮ್ಮ ಭವಿಷ್ಯದ ನಿರ್ಧರಿಸಿಕೊಳ್ಳಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.