ಥಾಣೆ: ಒಳಚರಂಡಿ ನೀರಿನಲ್ಲಿ ತರಕಾರಿಗಳನ್ನು ತೊಳೆದು ಮಾರಾಟಕ್ಕಿಟ್ಟುಕೊಂಡಿದ್ದ ವ್ಯಾಪಾರಿ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಮಹಾರಾಷ್ಟ್ರದ ಠಾಣೆಯ ಗಾಯತ್ರಿ ನಗರ ಪ್ರದೇಶದಲ್ಲಿ ಹಶೀಮ್ ಅನ್ಸಾರಿ ಎಂಬ ತರಕಾರಿ ವ್ಯಾಪಾರಿಯ ಗಾಡಿಯಲ್ಲಿದ್ದ ತರಕಾರಿಗಳು ಒಳಚರಂಡಿ ನೀರಿನಲ್ಲಿ ಬಿದ್ದಿವೆ. ಆ ತರಕಾರಿಗಳನ್ನ ಅದೇ ಕೊಳಚೆ ನೀರಿನಿಂದ ತೊಳೆದು ತನ್ನ ತರಕಾರಿ ಗಾಡಿಯಲ್ಲಿದ್ದ ಇತರ ತರಕಾರಿಗಳ ಜೊತೆ ಇಡುವ ದೃಶ್ಯವನ್ನು ಅಲ್ಲೇ ಇದ್ದ ಸ್ಥಳೀಯರು ಚಿತ್ರೀಕರಿಸಿ, ವ್ಯಾಪಾರಿಯನ್ನ ತರಾಟೆಗೆ ತೆಗೆದುಕೊಂಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು.
ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಠಾಣೆಯ ಭಿವಾಂಡಿ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.