ನವದೆಹಲಿ: ಮೋದಿ 2.0 ಸರ್ಕಾರದ ಮಹತ್ವದ ಬಜೆಟ್ ಮಂಡಿಸುತ್ತಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕ್ರಾಂತಿಕಾರಿ ಬಸವಣ್ಣನನ್ನು ಸ್ಮರಿಸಿದರು.
ಸಂಸತ್ತಿನಲ್ಲಿ ಬಸವಣ್ಣನವರ ಕಾಯಕವೇ ಕೈಲಾಸ ಎಂಬ ಮಾತನ್ನು ಸ್ಮರಿಸಿ, ಬಸವೇಶ್ವರರ ಕಾಯಕ ಹಾಗೂ ದಾಸೋಹ ತತ್ವದಡಿ ಎಲ್ಲರಿಗೂ ಸಮಾನ ಹಂಚಿಕೆ ನೀತಿ ಅನ್ವಯ ಉಜ್ವಲ ಯೋಜನೆ ಹಾಗೂ ಇನ್ನಿತರ ಪಿಂಚಣಿ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಒಂದು ಕೋಟಿ ಯುವಕರಿಗೆ ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ್ ಯೋಜನೆಯಡಿ ಬಸವೇಶ್ವರರ ತತ್ವವನ್ನು ಪ್ರತಿಪಾದಿಸಿದ್ದೇವೆ ಎಂದು ತಿಳಿಸಿದರು.