ETV Bharat / bharat

’ದಂಗಲ್’ ಗೆದ್ದಾಕೆ ಆಗಲಿದ್ದಾಳೆ ’ಮರಾಠಿ ಮಹಿಳೆ’! - ಫಾತಿಮಾ ಮತ್ತು ಸುಪ್ರಿಯಾ ಪಿಲ್ಗಾಂವ್ಕರ್

ದಂಗಲ್​ ಚಿತ್ರದ ಮೂಲಕ ಜನಪ್ರಿಯರಾದ ನಟಿ ಫಾತಿಮಾ ಸನಾ ಶೇಖ್ ಶೀಘ್ರದಲ್ಲೇ ಮುಂಬರುವ 'ಸೂರಜ್ ಪೆ ಮಂಗಲ್ ಭಾರಿ ' ಚಿತ್ರದಲ್ಲಿ ಮರಾಠಿ ಮಹಿಳೆಯಾಗಿ ಕಾಣಿಸಿಕೊಳ್ಳಲಿದ್ದಾರೆ.

Fatima Sana Shaikh nails
ದಂಗಲ್​​ನ ನಟಿ
author img

By

Published : Feb 14, 2020, 12:31 PM IST

ಮುಂಬೈ: ದಂಗಲ್​​ ಚಿತ್ರದಲ್ಲಿ ಹರಿಯಾಣದಿಂದ ಕುಸ್ತಿಪಟುವಾಗಿ ನಟಿಸಿದ ನಂತರ ಜನಪ್ರಿಯರಾದ ನಟಿ ಫಾತಿಮಾ ಸನಾ ಶೇಖ್ ಶೀಘ್ರದಲ್ಲೇ ಮುಂಬರುವ 'ಸೂರಜ್ ಪೆ ಮಂಗಲ್ ಭಾರಿ ' ಚಿತ್ರದಲ್ಲಿ ಮರಾಠಿ ಮಹಿಳೆಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಫಾತಿಮಾ ಮತ್ತು ಸುಪ್ರಿಯಾ ಪಿಲ್ಗಾಂವ್ಕರ್ ಇಬ್ಬರು ಇರುವ ಫೋಟೋವನ್ನು ಸಹನಟ ಮನೋಜ್ ಬಾಜಪೇಯಿ ಇಂದು ಇನ್​​​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದಾರೆ. 'ರೈಲಿನಲ್ಲಿ ಸೂರಜ್ ಪೆ ಮಂಗಲ್ ಭಾರಿ’ ಮಹಿಳೆಯರೊಂದಿಗೆ ಎಂದು ಫೋಟೋಗೆ ಶೀರ್ಷಿಕೆ ನೀಡಿದ್ದಾರೆ.

ಈ ಚಿತ್ರದಲ್ಲಿ ನಟಿ ಫಾತಿಮಾ ಅವರು ಅಭಿಷೇಕ್​​ ಶರ್ಮಾ ಅವರೊಂದಿಗೆ ನಟಿಸಿದ್ದಾರೆ. ಈ ಸಿನಿಮಾಕ್ಕಾಗಿ ಅವರು ಸಂಪೂರ್ಣವಾಗಿ ರೂಪಾಂತರಗೊಂಡಿದ್ದು, ತಮ್ಮ ಬಾಡಿ ಲಾಗ್ವೇಜ್​​ನಿಂದಲೇ ಪ್ರೇಕ್ಷಕರ ಮನ ಮುಟ್ಟಿದ್ದಾರೆ ಎಂದು ಮೂಲಗಳು ಹೇಳುತ್ತಿವೆ.

ಅವರ ಪಾತ್ರವು ದ್ವಂದ್ವ ವ್ಯಕ್ತಿತ್ವವನ್ನು ಹೊಂದಿದೆ. ಫಾತಿಮಾ ಅತ್ಯುತ್ತಮ ಪ್ರತಿಭೆಯಾಗಿದ್ದು, ಈ ಎಲ್ಲ ಭಾವನೆಗಳನ್ನು ಇಚ್ಛೆಯಂತೆ ಪ್ರವೇಶಿಸುವ ಗುಣವನ್ನು ಹೊಂದಿದ್ದಾರೆ. ಅವರು ಅತ್ಯಂತ ಸಮಯಪ್ರಜ್ಞೆಯುಳ್ಳ ಮಹಿಳೆ. ಹಾಗಾಗಿ ಈ ಪಾತ್ರಕ್ಕೆ ಫಾತಿಮಾ ಅವರನ್ನು ಆರಿಸಿಕೊಳ್ಳಲಾಯಿತು ಎಂದು ಶರ್ಮಾ ಹೇಳುತ್ತಾರೆ. ಸೂರಜ್ ಪೆ ಮಂಗಲ್ ಭಾರಿ, ಫ್ಯಾಮಿಲಿ ಹಾಸ್ಯ ಚಿತ್ರವಾಗಿದ್ದು, ದಿಲ್ಜಿತ್ ದೋಸಾಂಜ್ ಕೂಡ ಈ ಚಿತ್ರದಲ್ಲಿ ನಟಿಸಿರೋದು ವಿಶೇಷ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.