ಮುಂಬೈ: ವೆಸ್ಟ್ ಇಂಡೀಸ್ ವಿರುದ್ಧ ನಡೆದ ಎರಡನೇ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಕಾಣುವ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 1-1 ಅಂತರದ ಸಮಬಲ ಸಾಧಿಸಿದ್ದು, ವಾಂಖೆಡೆ ಮೈದಾನದಲ್ಲಿಂದು ನಡೆಯುವ ಪಂದ್ಯ ನಿರ್ಣಾಯಕವಾಗಲಿದೆ.
ಇದರ ಮಧ್ಯೆ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲಿಗೆ ಸಂಬಂಧಿಸಿದಂತೆ ಟೀಂ ಇಂಡಿಯಾ ಮಾಜಿ ಆಟಗಾರ, ವೀಕ್ಷಕ ವಿವರಣೆಗಾರ ಸಂಜಯ್ ಮಂಜ್ರೇಕರ್ ಟ್ವೀಟ್ ಮಾಡಿದ್ದರು. ಇದೀಗ ಅವರ ಟ್ವೀಟ್ಗೆ ನೆಟಿಜನ್ಸ್ ತರಾಟೆ ತೆಗೆದುಕೊಂಡಿದ್ದಾರೆ.
-
India must play WI more. It will only make India a better T20 team. #WIvIND
— Sanjay Manjrekar (@sanjaymanjrekar) December 8, 2019 " class="align-text-top noRightClick twitterSection" data="
">India must play WI more. It will only make India a better T20 team. #WIvIND
— Sanjay Manjrekar (@sanjaymanjrekar) December 8, 2019India must play WI more. It will only make India a better T20 team. #WIvIND
— Sanjay Manjrekar (@sanjaymanjrekar) December 8, 2019
ಮಂಜ್ರೇಕರ್ ಟ್ವೀಟ್ ಮಾಡಿದ್ದೇನು!? ಟೀಂ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ಧ ಅತಿ ಹೆಚ್ಚು ಟಿ-20 ಪಂದ್ಯ ಆಡಿದ್ರೆ ಮಾತ್ರ ಚುಟುಕು ಕ್ರಿಕೆಟ್ನಲ್ಲಿ ಉತ್ತಮ ತಂಡವಾಗಿ ಹೊರಹೊಮ್ಮಲು ಸಾಧ್ಯ ಎಂದು ಬರೆದುಕೊಂಡಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ನೆಟಿಜನ್ಸ್ ವೆಸ್ಟ್ ಇಂಡೀಸ್ ಕ್ರಿಕೆಟ್ ಶಿಶು ಆಫ್ಘಾನಿಸ್ತಾನದ ವಿರುದ್ಧ ಸೋಲು ಕಂಡಿದೆ. ನೀವೂ ವೀಕ್ಷಕ ವಿವರಣೆ ಹೇಗೆ ಮಾಡಬೇಕು ಎಂಬುದನ್ನ ಹರ್ಷಾ ಭೋಗ್ಲೆ ಅವರನ್ನ ನೋಡಿ ಕಲಿತುಕೊಳ್ಳಿ ಎಂದು ಟ್ವೀಟ್ ಮಾಡಿದ್ದಾರೆ.
-
You should do more commentary stints with Harsha Bhogle. It will only make...........
— Rohit Yadav (@cricrohit) December 8, 2019 " class="align-text-top noRightClick twitterSection" data="
">You should do more commentary stints with Harsha Bhogle. It will only make...........
— Rohit Yadav (@cricrohit) December 8, 2019You should do more commentary stints with Harsha Bhogle. It will only make...........
— Rohit Yadav (@cricrohit) December 8, 2019
ಕಳೆದ ಕೆಲ ದಿನಗಳ ಹಿಂದೆ ರವೀಂದ್ರ ಜಡೇಜಾ ಹಾಗೂ ಹಾರ್ದಿಕ್ ಪಾಂಡ್ಯ ವಿಚಾರದಲ್ಲಿ ಟ್ವೀಟ್ ಮಾಡಿ ಮಂಜ್ರೇಕರ್ ಟ್ರೋಲ್ಗೆ ಒಳಗಾಗಿದ್ದರು.