ಇಂದೋರ್ (ಮ.ಪ್ರ): ಕಾವ್ಯ ಜಗತ್ತಿನಲ್ಲಿ ವಿಭಿನ್ನ ಸ್ಥಾನ ಗಳಿಸಿದ್ದ ರಾಹತ್ ಇಂದೋರಿ ಕೊರೊನಾ ಸೋಂಕಿನಿಂದಾಗಿ ಮೃತಪಟ್ಟಿದ್ದು, ನಿನ್ನೆ ತಡರಾತ್ರಿ ಅವರ ಅಂತ್ಯಕ್ರಿಯೆ ಮಾಡಲಾಯಿತು.
ಕೊರೊನಾ ಸೋಂಕಿಗೆ ಒಳಗಾದ ನಂತರ ಅವರನ್ನು ಅರ್ವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ.
ರಾಹತ್ ಇಂದೋರಿ ಅವರು ತಮ್ಮ ವಿಭಿನ್ನ ಶೈಲಿಯ ಅತ್ಯುತ್ತಮ ಕಾವ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ಹಲವಾರು ಪುಸ್ತಕಗಳನ್ನು ಬರೆದಿರುವ ಅವರಿಗೆ ಬಾಲ್ಯದಿಂದಲೂ ಸಾಹಿತ್ಯದ ಕುರಿತು ಅಭಿರುಚಿ ಇತ್ತು.
ಅವರು ತಮ್ಮ ಕಾವ್ಯಗಳನ್ನು ಪ್ರಸ್ತುತಪಡಿಸುತ್ತಿದ್ದ ರೀತಿ ವಿಭಿನ್ನವಾಗಿತ್ತು. ಇದು ಜನರನ್ನು ಆಕರ್ಷಿಸುತ್ತಿತ್ತು.