ETV Bharat / bharat

ಸಲಿಂಗ ಸಂಬಂಧಕ್ಕೆ ಮನೆಯವರ ವಿರೋಧ: ಇಬ್ಬರು ಮಹಿಳೆಯರು ಆತ್ಮಹತ್ಯೆ - ತಮಿಳುನಾಡಿನಲ್ಲಿ ಸಲಿಂಗಿಗಳ ಆತ್ಮಹತ್ಯೆ

ಸಲಿಂಗ ಸಂಬಧಕ್ಕೆ ತಮ್ಮ ಕುಟುಂಬದವರು ವಿರೋಧಿಸಿದ್ದಕ್ಕೆ ಬೇಸರಗೊಂಡ ಮಹಿಳೆಯರಿಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

same-sex couple commit suicide
ಇಬ್ಬರು ಮಹಿಳೆಯರು ಆತ್ಮಹತ್ಯೆ
author img

By

Published : May 18, 2020, 12:57 PM IST

ನಮಕ್ಕಲ್ (ತಮಿಳುನಾಡು): ಸಲಿಂಗ ಸಂಬಂಧಕ್ಕೆ ಕೌಟುಂಬಿಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಇಬ್ಬರು ಮಹಿಳೆಯರು ತಮಿಳುನಾಡಿನ ನಮಕ್ಕಲ್ ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇಬ್ಬರೂ ಕೂಡ ನೂಲು ಹೆಣೆಯುವ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಒಬ್ಬ ಮಹಿಳೆಗೆ ವಿವಾಹವಾಗಿದ್ದು, ಮೂರು ವರ್ಷದ ಮಗು ಕೂಡ ಇದೆ. ಆದರೆ ಇಬ್ಬರು ಮಹಿಳೆಯರು ಸ್ನೇಹ ಬೆಳೆಸಿಕೊಂಡು ಕ್ರಮೇಣ ಸಂಬಂಧ ಬೆಳೆಸಿದ್ದಾರೆ. ಈ ಬಗ್ಗೆ ತಿಳಿದ ಅವರ ಕುಟುಂಬಸ್ಥರು ಮಹಿಳೆಯರಿಗೆ ಎಚ್ಚರಿಕೆ ನೀಡಿದ್ದಾರೆ.

ಮತ್ತೊಬ್ಬ ಅವಿವಾಹಿತೆಗೆ ಮದುವೆ ನಿಶ್ಚಿತಾರ್ಥ ನಿಶ್ಚಯಿಸಿದ್ದ ಒಂದು ದಿನ ಮೊದಲು, ಇಬ್ಬರೂ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇಬ್ಬರೂ ಒಂದೇ ಸೀರೆಯಿಂದ ನೇಣು ಹಾಕಿಕೊಂಡಿರುವುದು ಕಂಡು ಬಂದಿದೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ ತನಿಖೆ ಮುಂದುವರೆಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.