ETV Bharat / bharat

ರಾಮ ಜನ್ಮಭೂಮಿಗಾಗಿ ಹೋರಾಡಿದ ಪ್ರಮುಖರು ಇವರು..! - ಆರ್​ಎಸ್​ಎಸ್​

ಅಶೋಕ್ ಸಿಂಘಾಲ್, ಎಲ್.ಕೆ.ಅಡ್ವಾಣಿ, ಮುರುಳಿ ಮನೋಹರ್ ಜೋಶಿ, ರಾಮ್ ಚಂದ್ರ ದಾಸ್ ಅವರಂತಹ ಹಲವು ಪ್ರಮುಖ ನಾಯಕರು ರಾಮ ಮಂದಿರದ ಧ್ಯೇಯ ಸಾಧಿಸಲು ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ.

dsdd
ರಾಮ ಜನ್ಮಭೂಮಿಗಾಗಿ ಹೋರಾಡಿದ ಪ್ರಮುಖರು ಇವರು..!
author img

By

Published : Aug 4, 2020, 11:23 AM IST

ಅಯೋಧ್ಯಾ: ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 5ರಂದು ರಾಮ ಮಂದಿರದ ಭೂಮಿ ಪೂಜೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅಯೋಧ್ಯೆಯಲ್ಲಿ ಮಂದಿರದ ಶತಮಾನಗಳ ವಿವಾದವನ್ನು ನವೆಂಬರ್ 9, 2019 ರಂದು ಸುಪ್ರೀಂ ಕೋರ್ಟ್​ ಇತ್ಯರ್ಥಪಡಿಸಿತ್ತು. ರಾಮ ಮಂದಿರ ನಿರ್ಮಾಣಕ್ಕಾಗಿ ಬಾಬರಿ ಮಸೀದಿ ನಾಶವಾದ ಈ ಸ್ಥಳದಲ್ಲಿ ದೇವಾಲಯದ ನಿರ್ಮಾಣಕ್ಕಾಗಿ ಒಂದು ಆಂದೋಲನವನ್ನು ಮುನ್ನಡೆಸುವಲ್ಲಿ ಹಲವರು ಪ್ರಮುಖ ಪಾತ್ರ ವಹಿಸಿದ್ದಾರೆ.

ರಾಮ ಜನ್ಮಭೂಮಿಗಾಗಿ ಹೋರಾಡಿದ ಪ್ರಮುಖರು ಇವರು..!

ರಾಮ ಮಂದಿರಕ್ಕೆ ಸಂಬಂಧಿಸಿದ ಘಟನೆಗಳು 1950 ರ ಹಿಂದಿನವು, ಗೋಪಾಲ್ ಸಿಂಗ್ ವಿಶಾರದ್ ‘ಅಸ್ತಾನ್ ಜನ್ಮಭೂಮಿ’ ಯಲ್ಲಿ ಸ್ಥಾಪಿಸಲಾದ ವಿಗ್ರಹಗಳನ್ನು ಪೂಜಿಸುವ ಹಕ್ಕನ್ನು ಕೋರಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು, ಆದರೆ, 1986 ರಲ್ಲಿ ವಿಶಾರದ್​ ನಿಧನರಾಗಿದ್ದರಿಂದ ನಂತರದ ಕಾನೂನು ಹೋರಾಟವನ್ನು ಅವರ ಪುತ್ರ ರಾಜೇಂದ್ರ ಸಿಂಗ್ ವಹಿಸಿಕೊಂಡರು.

ತರುವಾಯ, 1959 ರಲ್ಲಿ, ನಿರ್ಮೋಹಿ ಅಖಾರದಿಂದ ಕಣಕ್ಕೆ ಇಳಿದು ಮೂರನೇ ಮೊಕದ್ದಮೆ ದಾಖಲಿಸಲಾಯಿತು. ಭಗವಾನ್​ ಶ್ರೀರಾಮ ಜನಿಸಿದನೆಂದು ನಂಬಲಾದ ಸ್ಥಳ , ನಿರ್ಮೋಹಿ ಅಖಾರಕ್ಕೆ ಸೇರಿದ್ದು ಎಂದು ಹೇಳಿ ಮಹಂತ್ ಭಾಸ್ಕರ್ ದಾಸ್ ಭೂಮಿಯ ಹಕ್ಕಿಗಾಗಿ ಹೋರಾಟ ಆರಂಭಿಸಿದ್ದರು.

1984ರಲ್ಲಿ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಅಯೋಧ್ಯೆಯಲ್ಲಿ ದೇವಾಲಯದ ನಿರ್ಮಾಣಕ್ಕಾಗಿ ಅದರ ಆಗಿನ ಅಧ್ಯಕ್ಷರಾಗಿದ್ದ ಅಶೋಕ್ ಸಿಂಘಾಲ್ ನೇತೃತ್ವದಲ್ಲಿ ದೇಶದಲ್ಲಿ ಅಭಿಯಾನ ಆರಂಭಿಸಿದ್ದರು. ರಾಮ ಮಂದಿರ ನಿರ್ಮಾಣದ ಹೋರಾಟದಲ್ಲಿ ಆಂದೋಲನ ಆರಂಭಿಸಿದವರಲ್ಲಿ ಅಶೋಕ್ ಸಿಂಘಾಲ್ ಹೆಸರು ಮೊದಲ ಸಾಲಿನಲ್ಲಿ ಬರುತ್ತದೆ.

ಮಹಂತ್ ಅವಿದ್ಯಾನಾಥ್ ಭಗವಾನ್ ರಾಮ ಜನ್ಮ ಭೂಮಿ ಚಳವಳಿಯ ನಾಯಕರಾಗಿದ್ದು, ಅವರ ಪಾತ್ರವೂ ಬಹುಮುಖ್ಯವಾಗಿದೆ. ಅವಿದ್ಯಾನಾಥ್ ರಾಮನ ಜನ್ಮಸ್ಥಳವನ್ನು ಮುಕ್ತಗೊಳಿಸಲು ಶ್ರೀ ರಾಮಜನ್ಮಭೂಮಿ ಮುಕ್ತ ಯಜ್ಞ ಸಮಿತಿಯನ್ನು ಸ್ಥಾಪಿಸಿದ್ದರು.

ಬಜರಂಗದಳದ ಸಂಸ್ಥಾಪಕ ಅಧ್ಯಕ್ಷ ಮತ್ತು ಹಿರಿಯ ಬಿಜೆಪಿ ನಾಯಕ ವಿನಯ್ ಕಟಿಯಾರ್​ ರಾಮಜನ್ಮಭೂಮಿ ಚಳವಳಿಯನ್ನು ಬೆಂಬಲಿಸಿದ್ದರು. ವಿಎಚ್‌ಪಿ ಮಾಜಿ ಉಪಾಧ್ಯಕ್ಷ ಡಿಯೋಕಿ ನಂದನ್ ಅಗರ್​ವಾಲ್​ ರಾಮನ ಹೆಸರಿನಲ್ಲಿ ಅಲಹಾಬಾದ್ ಹೈಕೋರ್ಟ್‌ನ ಲಖನೌ ಪೀಠದಲ್ಲಿ ರಾಮಜನ್ಮ ಭೂಮಿಗಾಗಿ ಹೊಸ ಮೊಕದ್ದಮೆ ಹೂಡಿದ್ದರು. 1989 ರಲ್ಲಿ ವಿಎಚ್‌ಪಿಯಿಂದ ಅಯೋಧ್ಯೆಯಲ್ಲಿ ಶಿಲನ್ಯಾಸ್ ಸಮಾರಂಭ ನಡೆಸಿ ರಾಮ ಮಂದಿರ ನಿರ್ಮಾಣಕ್ಕಾಗಿ ಮೊದಲ ಕಲ್ಲು ತಂದು ಹಾಕಲಾಯಿತು.

ರಾಮ ಜನ್ಮಭೂಮಿಯಲ್ಲಿ ರಾಮ ಮಂದಿರವನ್ನು ನಿರ್ಮಿಸುವ ನಿರ್ಣಯದೊಂದಿಗೆ ಆಗಿನ ಬಿಜೆಪಿ ಅಧ್ಯಕ್ಷ ಎಲ್​.ಕೆ ಅಡ್ವಾಣಿ ಗುಜರಾತ್‌ನ ಸೋಮನಾಥದಿಂದ ರಥಯಾತ್ರೆ ಪ್ರಾರಂಭಿಸಿದರು. ಈ ರಥಯಾತ್ರೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಲು ಪ್ರಮುಖ ಪಾತ್ರ ವಹಿಸಿದೆ. ಎಲ್.ಕೆ.ಅಡ್ವಾಣಿ ಮತ್ತು ಮುರುಳಿ ಮನೋಹರ್ ಜೋಶಿ ನೇತೃತ್ವದಲ್ಲಿ ರಾಮ ಮಂದಿರ ಹೋರಾಟ ವೇಗ ಪಡೆದುಕೊಂಡಿತು. ದೇಶಾದ್ಯಂತ ರಥಯಾತ್ರೆ ನಡೆಸಿ ರಾಮಮಂದಿರ ನಿರ್ಮಾಣಕ್ಕೆ ಹಿಂದೂಗಳು ಕೈ ಜೋಡಿಸುವಂತೆ ಪ್ರೇರೇಪಿಸಲು ಮುಂದಾಗಿದ್ದರು. 1991ರಲ್ಲಿ ಮುರುಳಿ ಮನೋಹರ್ ಜೋಶಿ ಬಿಜೆಪಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಾಗ ರಾಮ ಜನ್ಮಸ್ಥಳವನ್ನು ಪುನಃ ಪಡೆದುಕೊಳ್ಳಲು ಪ್ರಮುಖ ಪಾತ್ರ ವಹಿಸಿದ್ದರು.

ಬಿಜೆಪಿ ಮುಖಂಡರು ಮತ್ತು ಹಿಂದೂ ರಾಷ್ಟ್ರೀಯವಾದಿಗಳ ಅಂಗಸಂಸ್ಥೆಗಳು ಆಯೋಜಿಸಿದ್ದ ರಥಯಾತ್ರೆ ವಿಎಚ್‌ಪಿ ಮತ್ತು ಸಂಘ ಪರಿವಾರದ ನೆರವಿನಿಂದ ವಿವಾದಿತ ಭೂಮಿಯಲ್ಲಿದ್ದ ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಲಾಗಿತ್ತು.

ಉತ್ತರ ಪ್ರದೇಶ ಸರ್ಕಾರದ ಮೊದಲ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಸರ್ಕಾರ ವಿವಾದಿತ ಸ್ಥಳದ ಸುತ್ತ 2.77 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತ್ತು. ಸಿಂಗ್ ವಿವಾದವನ್ನು ಶಾಂತಿಯುತವಾಗಿ ನಿವಾರಿಸಲು ಪ್ರಯತ್ನಿಸಿದ್ದರು. ಶಿವಸೇನೆ ಸಂಸ್ಥಾಪಕ ಬಾಳಾ​​ ಠಾಕ್ರೆ ರಾಮ ಮಂದಿರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ಬಿಜೆಪಿಯ ಹಿರಿಯ ನಾಯಕಿ ಉಮಾ ಭಾರತಿ ಇತರ ಬಿಜೆಪಿ ನಾಯಕರೊಂದಿಗೆ ರಾಮ್ ಜನಮಭೂಮಿ ಹೋರಾಟದಲ್ಲಿ ಪ್ರಮುಖರಾಗಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.