ETV Bharat / bharat

ಇಂದು ಶ್ರೀಲಂಕಾಕ್ಕೆ ತೆರಳಲಿರುವ ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ - ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್

ಉಭಯ ದೇಶಗಳ ನಿಕಟ ಮತ್ತು ಸೌಹಾರ್ದಯುತ ಸಂಬಂಧ ಬಲಪಡಿಸಲು ಈ ಭೇಟಿ ಮಹತ್ವಪೂರ್ಣ ಎಂದು ಎಂಇಎ ತಿಳಿಸಿದೆ. ಇಂದಿನಿಂದ ಜನವರಿ 7ರವರೆಗೆ ಸಚಿವ ಡಾ.ಎಸ್ ಜೈಶಂಕರ್ ಶ್ರೀಲಂಕಾದಲ್ಲಿರಲಿದ್ದಾರೆ..

jai shankar
jai shankar
author img

By

Published : Jan 5, 2021, 7:33 AM IST

ನವದೆಹಲಿ : ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಅವರು ಶ್ರೀಲಂಕಾಗೆ ಮೂರು ದಿನಗಳ ಅಧಿಕೃತ ಭೇಟಿ ನೀಡಲಿದ್ದಾರೆ. ಭೇಟಿಯ ಸಮಯದಲ್ಲಿ ಅವರು, ದ್ವಿಪಕ್ಷೀಯ ಸಂಬಂಧಗಳ ಕುರಿತು ಶ್ರೀಲಂಕಾ ವಿದೇಶಾಂಗ ಸಚಿವ ದಿನೇಶ್ ಗುಣವರ್ಧನ ಮತ್ತು ಶ್ರೀಲಂಕಾದ ನಾಯಕರೊಂದಿಗೆ ಚರ್ಚಿಸಲಿದ್ದಾರೆ ಎಂದು ವಿದೇಶಾಂಗ ಇಲಾಖೆ (ಎಮ್​ಇಎ) ತಿಳಿಸಿದೆ.

ಇದು 2021ರಲ್ಲಿ ವಿದೇಶಾಂಗ ಸಚಿವರ ಮೊದಲ ವಿದೇಶ ಪ್ರವಾಸವಾಗಿದೆ. ಹೊಸ ವರ್ಷದಲ್ಲಿ ಶ್ರೀಲಂಕಾಕ್ಕೆ ವಿದೇಶಿ ಗಣ್ಯರು ಭೇಟಿ ನೀಡುವ ಮೊದಲ ಪ್ರವಾಸವೂ ಇದಾಗಿದೆ ಎಂದು (ಎಮ್​ಇಎ) ಹೇಳಿದೆ.

"ಉಭಯ ದೇಶಗಳ ನಿಕಟ ಮತ್ತು ಸೌಹಾರ್ದಯುತ ಸಂಬಂಧ ಬಲಪಡಿಸಲು ಈ ಭೇಟಿ ಮಹತ್ವಪೂರ್ಣವಾಗಿದೆ" ಎಂದು ಎಂಇಎ ತಿಳಿಸಿದೆ. ಇಂದಿನಿಂದ ಜನವರಿ 7ರವರೆಗೆ ಸಚಿವ ಡಾ.ಎಸ್ ಜೈಶಂಕರ್ ಶ್ರೀಲಂಕಾದಲ್ಲಿರಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.