ETV Bharat / bharat

ಅಕ್ರಮ ಮದ್ಯ ಅಡ್ಡೆ ಮೇಲೆ ದಾಳಿ: ಅಬಕಾರಿ ಅಧಿಕಾರಿಗಳ ಮೇಲೆಯೇ ಹಲ್ಲೆ! - ಅಕ್ರಮ ಮದ್ಯ

ಅಕ್ರಮ ಮದ್ಯ ತಯಾರಿಸುತ್ತಿರುವವರ ಮೇಲೆ ದಾಳಿ ನಡೆಸಿದಾಗ ಅಬಕಾರಿ ಅಧಿಕಾರಿಗಳು ಹಲ್ಲೆಗೊಳಗಾಗಿದ್ದಾರೆ.

excise
excise
author img

By

Published : May 4, 2020, 10:52 AM IST

ಹೈದರಾಬಾದ್: ಅಕ್ರಮವಾಗಿ ಮದ್ಯ ತಯಾರಿಸುತ್ತಿರುವವರ ಮೇಲೆ ನಡೆಸಿದ ದಾಳಿಯಲ್ಲಿ ಅಬಕಾರಿ ಇನ್ಸ್‌ಪೆಕ್ಟರ್ ಹಾಗೂ ಇಬ್ಬರು ಕಾನ್‌ಸ್ಟೆಬಲ್‌ಗಳು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತೆಲಂಗಾಣದ ಮೆಹಬೂಬ್​ನಗರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. 'ಗುಡುಂಬಾ' ಎಂದೂ ಕರೆಯಲ್ಪಡುವ ಮದ್ಯವನ್ನು ಅಕ್ರಮವಾಗಿ ತಯಾರಿಸುತ್ತಿದ್ದಾರೆ ಎಂಬ ಮಾಹಿತಿ ಪಡೆದ ಅಬಕಾರಿ ಅಧಿಕಾರಿಗಳು ಪರಿಶೀಲನೆಗಾಗಿ ತೆರಳಿದ್ದರು.

ಈ ವೇಳೆ ಮದ್ಯ ತಯಾರಿಸುತ್ತಿದ್ದವರು ಅಧಿಕಾರಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಮೂವರು ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.