ಗಾಂಧಿನಗರ( ಗುಜರಾತ್): ರಾಜ್ಯದಲ್ಲಿ ಶೀತ ವಾತಾವರಣ ಹೆಚ್ಚಾಗಿದ್ದು, ರಕ್ತ ಹೆಪ್ಪುಗಟ್ಟುವ ಚಳಿಯಿಂದಾಗಿ ಜನರು ಪರದಾಡುವಂತಾಗಿದೆ.
ಸಂಕ್ರಾತಿ ಬಳಿಕ ಶೀತ ಗಾಳಿಯ ಪ್ರಭಾವ ಕಡಿಮೆಯಾಗುವುದು ವಾಡಿಕೆ. ಆದ್ರೆ ಈ ಬಾರಿ ವಾಡಿಕೆಗಿಂತ ಚಳಿ ಜಾಸ್ತಿಯಾಗುತ್ತಿದ್ದು, ಜನರು ಬೆಂಕಿ ಕಾಯಿಸಿ ಮೈಕೊರೆಯುವ ಚಳಿಯಿಂದ ರಕ್ಷಣೆ ಪಡೆಯುತ್ತಿದ್ದಾರೆ.
ಶೀತ ಗಾಳಿಯ ಪರಿಣಾಮ ಎಷ್ಟರ ಮಟ್ಟಿಗೆ ಇದೆ ಎಂದರೆ. ಇತ್ತೀಚಿನ ಮದುವೆ ಮತ್ತು ಇನ್ನಿತರ ಕಾರ್ಯಕ್ರಮಗಳಿಗೆ ಆಗಮಿಸುವವರು ಕಾರ್ಯಕ್ರಮದ ಮಧ್ಯೆಯೆ ಬೆಂಕಿ ಹಾಕಿ ಚಳಿ ಕಾಯುತ್ತಿರುವ ದೃಶ್ಯಗಳು ಸಾಮಾನ್ಯವಾಗಿದೆ.