ನವದೆಹಲಿ: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಸ್ಥಿತಿ ಗಂಭೀರವಾಗಿದೆ. ಸದ್ಯ ಅವರು ವೆಂಟಿಲೇಟರ್ ಸಹಾಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸೇನೆಯ ಸಂಶೋಧನಾ ಮತ್ತು ರೆಫರಲ್ ಆಸ್ಪತ್ರೆ ತಿಳಿಸಿದೆ.
ಅವರ ವೈಟಲ್ ಮತ್ತು ಕ್ಲಿನಿಕಲ್ ಪ್ಯಾರಾಮೀಟರ್ಗಳು ಸ್ಥಿರವಾಗಿವೆ. ಆದಾಗ್ಯೂ ಅವರನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ಅವರನ್ನು ಪರೀಕ್ಷಿಸಿದ ವೈದ್ಯರು ಹೇಳಿದ್ದಾರೆ.
ಮುಖರ್ಜಿ ಅವರನ್ನು ಆ. 10 ರಂದು ದೆಹಲಿ ಕಂಟೋನ್ಮೆಂಟ್‌ನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೆದುಳಿನಲ್ಲಿ ಹೆಪ್ಪುಗಟ್ಟಿದ ರಕ್ತವನ್ನು ತೆಗೆದುಹಾಕಲು ಶಸ್ತ್ರಚಿಕಿತ್ಸೆ ಸಹ ಮಾಡಲಾಗಿದೆ. ಆದರೆ, 84 ವರ್ಷದ ಪ್ರಣಬ್ ಸದ್ಯ ಕೋಮಾ ಸ್ಥಿತಿಯಲ್ಲಿದ್ದು, ಅಂದಿನಿಂದಲೂ ಇದೇ ಸ್ಥಿತಿಯಲ್ಲಿ ಮುಂದುವರೆದಿದ್ದಾರೆ. ಅಲ್ಲದೇ ಅವರ ಕೊರೊನಾ ರಿಪೋರ್ಟ್ ಕೂಡಾ ಪಾಸಿಟಿವ್ ಬಂದಿತ್ತು.
ಮುಖರ್ಜಿ ಅವರ ಕುಟುಂಬದ ಪ್ರಕಾರ, ಅವರಿಗೆ ಶಸ್ತ್ರಚಿಕಿತ್ಸೆ ಮಾಡಿದಾಗಿನಿಂದ ಅವರ ಆರೋಗ್ಯದಲ್ಲಿ ಸ್ವಲ್ಪ ಸುಧಾರಣೆಯಾಗಿದೆ ಎಂದು ಹೇಳಿದ್ದಾರೆ.