ಬೆತುಲ್: ಕಾಂಗ್ರೆಸ್ ಮಾಜಿ ಶಾಸಕ ವಿನೋದ್ ದಾಗ ಅವರು ದೇವರ ಪೂಜೆ ಮಾಡುತ್ತಿರುವಾಗಲೇ ಕುಸಿದುಬಿದ್ದು ಸಾವನ್ನಪ್ಪಿರುವ ಘಟನೆ ನಗರದ ಜೈನ ಮಂದಿರದಲ್ಲಿ ನಡೆದಿದೆ.
ನವೆಂಬರ್ 12 ಗುರುವಾರದಂದು ಬೆತುಲ್ ಮಾಜಿ ಶಾಸಕ ವಿನೋದ್ ದಾಗ ದೇವರ ಪೂಜೆಗೆಂದು ಜೈನ ಮಂದಿರಕ್ಕೆ ತೆರಳಿದ್ದಾರೆ. ನಮಸ್ಕರಿಸಿ ದೇವರ ಪೂಜೆ ಮಾಡುತ್ತಿರುವಾಗ ಹೃದಯಘಾತ ಸಂಭವಿಸಿದೆ. ಈ ವೇಳೆ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ವಿನೋದ್ ದಾಗ ಪೂಜೆ ಮಾಡುತ್ತಿರುವಾಗ ಕುಸಿದು ಬಿದ್ದಿರುವ ದೃಶ್ಯ ದೇವಾಲಯದ ಸಿಸಿವಿಯಲ್ಲಿ ಸೆರೆಯಾಗಿದ್ದು, ಈಗ ಈ ವಿಡಿಯೋ ವೈರಲ್ ಆಗ್ತಿದೆ.