ETV Bharat / bharat

ಕೊರೊನಾ ವಿಶೇಷ ಲೇಖನ: ಭಾರತೀಯ ಹಳ್ಳಿಗಳಿಗೆ ಬೇಕಿದೆ ರಕ್ಷಾ ಕವಚ - ಲಾಕ್‌ಡೌನ್ ಮಾನದಂಡಗಳನ್ನು ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ

ಲಾಕ್‌ಡೌನ್ ಮಾನದಂಡಗಳನ್ನು ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರಧಾನಿ ಮೋದಿ ಸಲಹೆ ನೀಡಿದ್ದಾರೆ. ಕೋವಿಡ್‌-19 ಭಾರತದಲ್ಲಿ ತನ್ನ ನೆಲೆ ಕಂಡುಕೊಂಡಂತೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ದೇಶದಲ್ಲಿ ಇದೊಂದು ಸಾಂಕ್ರಾಮಿಕ ರೋಗವಾಗಿ ಹಬ್ಬದಂತೆ ನೋಡಿಕೊಳ್ಳಲು ಶ್ರಮಿಸುತ್ತಿವೆ.

ಕೊರೊನಾ
ಕೊರೊನಾ
author img

By

Published : Mar 28, 2020, 10:13 AM IST

ಕೋವಿಡ್‌-19 ಭಾರತದಲ್ಲಿ ತನ್ನ ನೆಲೆ ಕಂಡುಕೊಂಡಂತೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ದೇಶದಲ್ಲಿ ಇದೊಂದು ಸಾಂಕ್ರಾಮಿಕ ರೋಗವಾಗಿ ಹಬ್ಬದಂತೆ ನೋಡಿಕೊಳ್ಳಲು ಶ್ರಮಿಸುತ್ತಿವೆ.

ದೇಶಾದ್ಯಂತ ಜನತಾ ಕರ್ಫ್ಯೂ ಯಶಸ್ವಿಯಾದ ನಂತರ, ಆಂಧ್ರಪ್ರದೇಶ ಮತ್ತು ತೆಲಂಗಾಣ ಸೇರಿದಂತೆ ಹಲವಾರು ರಾಜ್ಯ ಸರ್ಕಾರಗಳು ಅಂತರರಾಜ್ಯ ಗಡಿಗಳನ್ನು ಲಾಕ್ ಮಾಡಿ, ಸಾರ್ವಜನಿಕ ಸಾರಿಗೆಯನ್ನು ರದ್ದುಗೊಳಿಸಿವೆ ಮತ್ತು ನಾಗರಿಕರು ಮನೆಯಿಂದ ಹೊರಬರದೆ, ಮನೆ ಒಳಗೆ ಉಳಿಯುವಂತೆ ಒತ್ತಾಯಿಸುತ್ತಿವೆ. 82 ಕೊರೊನಾ ಸೋಂಕಿತ ಜಿಲ್ಲೆಗಳಲ್ಲಿ ಸಂಪೂರ್ಣ ಲಾಕ್ ಡೌನ್ ಮಾಡಲು ಕೇಂದ್ರವು ಒತ್ತಾಯಿಸಿದರೂ, ಈ ಬಗ್ಗೆ ಸಾರ್ವಜನಿಕರ ನಿರ್ಲಕ್ಷ್ಯ ವರ್ತನೆಯ ಮಾತ್ರ ಆತಂಕಕಾರಿಯಾಗಿದೆ.

ಲಾಕ್‌ಡೌನ್ ಮಾನದಂಡಗಳನ್ನು ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರಧಾನಿ ಮೋದಿ ಸಲಹೆ ನೀಡಿದ್ದಾರೆ. ಈ ಲಾಕ್‌ಡೌನ್‌ಗಳು ಕೊರೊನಾ ವೈರಸ್ ವಿರುದ್ಧದ ಯುದ್ಧದಲ್ಲಿ ಮ್ಯಾರಥಾನ್‌ನ ಮೊದಲ ಹೆಜ್ಜೆಗಳು ಮಾತ್ರ. ನಾವು ಒಂದು ದೇಶವಾಗಿ ಕೊರೊನಾ ವೈರಸ್ ವಿರುದ್ಧ ದಿಟ್ಟ ಹೆಜ್ಜೆ ಇಡಲೇ ಬೇಕು. ಸ್ವಯಂ ನಿಯಂತ್ರಣಕ್ಕೆ ಗಮನ ಕೊಡದ ಇಟಲಿಯಂತಹ ದೇಶಗಳು ಈಗ ಕೊರೊನಾದ ಗಂಭೀರ ಪರಿಣಾಮದಿಂದ ನಲುಗುತ್ತಿವೆ. ಚೀನಾದ ವುಹಾನ್‌ನಲ್ಲಿ ಹುಟ್ಟಿಕೊಂಡ ಕೊರೊನಾ ವೈರಸ್, ಆರಂಭದಲ್ಲಿಯೇ ತನ್ನ ಅಟ್ಟಹಾಸಕ್ಕೆ ಸಾವಿರಾರು ಜನರನ್ನು ಬಲಿ ತೆಗೆದುಕೊಂಡಿದೆ.

ಭಾರತದಲ್ಲಿ, ವಿದೇಶಿ ಪ್ರಯಾಣಿಕರ ಮೂಲಕ ಮೊದಲು ದೇಶವನ್ನು ಪ್ರವೇಶಿಸಿದ ಈ ವೈರಸ್ ಈಗ ತನ್ನ ಎರಡನೇ ಹಂತವನ್ನು ದಾಟುವತ್ತ ಸಾಗಿದೆ. ಸಮುದಾಯಗಳಿಗೆ ಹಬ್ಬುವ ಹಂತವನ್ನು ತಡೆಗಟ್ಟಲು ಸರ್ಕಾರ ರೂಪಿಸಿರುವ ನಿಯಮಗಳ ಪ್ರಕಾರ ನಾಗರಿಕರು ತಮ್ಮನ್ನು ತಮ್ಮ ಮನೆಗಳಲ್ಲಿಯೇ ಸೀಮಿತಗೊಳಿಸಿಕೊಳ್ಳಬೇಕು. ಭಾರತದಲ್ಲಿ ಸಾರ್ವಜನಿಕ ಆರೋಗ್ಯದ ದುರಂತದ ಯಾವುದೇ ಸುದ್ದಿಯಲ್ಲದ ಕಾರಣ, ಹಳ್ಳಿಗಳಲ್ಲಿ ವೈರಸ್ ಹರಡುವುದನ್ನು ತಡೆಯಲು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುವ ಅವಶ್ಯಕತೆಯಿದೆ. ಹಳ್ಳಿಯ ಗಡಿಗಳನ್ನು ನಿರ್ಬಂಧಿಸುವುದು ಮತ್ತು ಎಲ್ಲಾ ಹಳ್ಳಿಗಳಾದ್ಯಂತ ಕಟ್ಟುನಿಟ್ಟಾದ ಲಾಕ್‌ಡೌನ್‌ಗಳನ್ನು ಹೇರುವುದು ರಾಷ್ಟ್ರದ ಭದ್ರತೆಯ ಹೆಜ್ಜೆಯಾಗಿದೆ. ಭಾರತದ ಜನಸಂಖ್ಯೆಯ ಶೇಕಡಾ 66 ರಷ್ಟು ವಾಸಿಸುವ ಗ್ರಾಮೀಣ ಪ್ರದೇಶಗಳನ್ನು ಈ ವೈರಸ್‌ ಸೋಂಕಿನಿಂದ ರಕ್ಷಿಸುವುದು ನಾಗರಿಕರ ಮತ್ತು ಸರ್ಕಾರದ ಜವಾಬ್ದಾರಿಯಾಗಿದೆ.

ಮಾರಣಾಂತಿಕ ವೈರಸ್‌ ಆರಂಭಿಕ ಹಂತದಲ್ಲಿರುವ ಸಮಯದಲ್ಲಿ, ಪರಸ್ಪರ ಒಬ್ಬರಿಗೊಬ್ಬರು ಭೇಟಿಯಾಗುವುದನ್ನು ತಡೆಗಟ್ಟುವುದು ಶಿಕ್ಷೆಯಲ್ಲ, ಬದಲಿಗೆ ಕೊರೊನಾದಂತ ಸಾಂಕ್ರಾಮಿಕ ವೈಸರ್‌ ತಡೆಗಟ್ಟುವಿಕೆಯಲ್ಲಿ ಅದೊಂದು ರಕ್ಷಣಾತ್ಮಕ ಔಷಧ. ಸಂಪರ್ಕ ತಡೆಯನ್ನು ಉಲ್ಲಂಘಿಸುವ ಜನರು ನೂರು ಇತರರಿಗೆ ಸೋಂಕು ತಗುಲಿಸಬಹುದು. ವಾಸ್ತವವಾಗಿ, ಸೋಂಕಿನ ಶಂಕಿತರು ವೈರಸ್‌ ಹರಡುವಿಕೆಯನ್ನು ತಡೆಗಟ್ಟಲು ಅವರಿಗೆ ಸಂಪರ್ಕ ತಡೆಯನ್ನು ಕಡ್ಡಾಯಗೊಳಿಸಲಾಗಿದೆ. ಚೀನಾದಲ್ಲಿ, ಮೊದಲ 1,000 ಸೋಂಕು ಹಬ್ಬಲು 6 ದಿನಗಳು ಬೇಕಾಯಿತು. ಅಂದಿನಿಂದ 4 ದಿನಗಳಲ್ಲಿ 5,000 ಮಂದಿಗೆ ಸೋಂಕು ತಗುಲಿತ್ತು ಮತ್ತು 10,000 ಸೋಂಕುಗಳಿಗೆ ನಂತರದ 3 ದಿನಗಳು ಹಿಡಿಯಿತು. ಯುಎಸ್ ಮತ್ತು ಸ್ಪೇನ್‌ನಲ್ಲಿ ಮೊದಲ 10,000 ಸೋಂಕು ವ್ಯಾಪಿಸಲು ಕೇವಲ 2 ದಿನಗಳು ಬೇಕಾಯಿತು. ಈ ಅಂಕಿ ಅಂಶಗಳು ಸರ್ಕಾರಗಳು ಮತ್ತು ನಾಗರಿಕರು ಕೊರೊನಾ ವಿಷಯದಲ್ಲಿ ಸಡಿಲವಾಗಿರಲು, ಅಜಾಗರೂಕತೆಯಿಂದ ಇರಲು ಸಾಧ್ಯವಿಲ್ಲ ಎಂಬುದನ್ನು ಸಾಬೀತುಪಡಿಸುತ್ತವೆ. ಜನವರಿ 23 ರಂದು ಹುಬೈ ಪ್ರಾಂತ್ಯವನ್ನು ನಿರ್ಬಂಧಿಸಲು ಚೀನಾ ಮಾಡಿದ ಪ್ರಯತ್ನಗಳು ವುಹಾನ್‌ಗೆ ಮಾತ್ರ ವೈರಸ್ ಹರಡುವುದನ್ನು ಸೀಮಿತಗೊಳಿಸಿದೆ. ಕೊರೊನಾ, ಕೇಂದ್ರ, ಸೆಂಟರ್‌ ವುಹಾನ್‌ನಲ್ಲಿನ ಮರಣ ಪ್ರಮಾಣವು ಶೇಕಡಾ 3.1 ರಷ್ಟಿದ್ದರೆ, ಉಳಿದ ಪ್ರದೇಶಗಳಲ್ಲಿ ಇದು 0.16 ರಷ್ಟಿತ್ತು. ಇದರಿಂದ ಗೃಹಬಂಧನ ತಂತ್ರವು ಅದರ ಪರಿಣಾಮಕಾರಿತ್ವವನ್ನು ಸಾಬೀತುಪಡಿಸುತ್ತದೆ. ಬ್ಯಾರಿಕೇಡ್‌ಗಳನ್ನು ನಿರ್ಮಿಸುವ ಮೂಲಕ ನೆರೆಯ ಪಟ್ಟಣಗಳು ಮತ್ತು ಹಳ್ಳಿಗಳಿಗೆ ಪ್ರವೇಶವನ್ನು ಚೀನಾ ನಿರ್ಬಂಧಿಸಿದ ರೀತಿ ಸ್ಪೂರ್ತಿದಾಯಕವಾಗಿದೆ. ಅಮೆರಿಕದ ರಾಜ್ಯ ಅಲಾಸ್ಕಾದ ಪ್ರದೇಶಗಳು ಇದೇ ತಂತ್ರವನ್ನು ಅನುಸರಿಸುತ್ತಿವೆ. 6,000 ಸಾವಿನ ಸಂಖ್ಯೆಯೊಂದಿಗೆ ಇಟಲಿ ಸಹ ದೇಶೀಯ ಪ್ರಯಾಣಕ್ಕೆ ಕಟ್ಟುನಿಟ್ಟಿನ ನಿರ್ಬಂಧಗಳನ್ನು ವಿಧಿಸಿದೆ. ಬರಲಿರುವ ಈ ಕರೋನಾ ದಾಳಿಯಿಂದ ಭಾರತವನ್ನು ರಕ್ಷಿಸಲು, ಮೊದಲು ಹಳ್ಳಿಗಳನ್ನು ರಕ್ಷಿಸಬೇಕು.

ಕೋವಿಡ್‌-19 ಗೆ ಲಸಿಕೆ ಯಾವಾಗ ಪತ್ತೆಯಾಗುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ. ಪ್ರಸ್ತುತ, ಸೋಂಕಿಗೆ ಯಾವುದೇ ಸೂಕ್ತವಾದ ಚಿಕಿತ್ಸೆಯಿಲ್ಲ. ಈ ಮಧ್ಯೆ, ಇಡೀ ದೇಶದ ಆರೋಗ್ಯ ಹದಗೆಡುವುದನ್ನು ತಡೆಯಲು ಸರ್ಕಾರಗಳು ಲಕ್ಷಾಂತರ ಜನರ ಜೀವವನ್ನು ರಕ್ಷಿಸಬೇಕು. ಹಳ್ಳಿಗಳು ಮತ್ತು ಸಣ್ಣ ಪಟ್ಟಣಗಳು ಸ್ವಯಂ ನಿರ್ಬಂಧ ಕ್ರಮಕ್ಕೆ ಮರೆ ಹೋಗಬೇಕು. ಭಾರತದಲ್ಲಿ ಈ ಹಿಂದೆ ಸಂಭವಿಸಿದ ಮಾರಣಾಂತಿಕ ಕಾಯಿಲೆ ಸ್ಪ್ಯಾನಿಷ್ ಜ್ವರದಿಂದ ಸಾವನ್ನಪ್ಪಿದವರ ಸಂಖ್ಯೆ ಮೊದಲನೆಯ ಮಹಾಯುದ್ಧದಲ್ಲಿ ಸಂಭವಿಸಿದ ಸಾವುಗಳಿಗಿಂತ ಹೆಚ್ಚಾಗಿದೆ. ಸರ್ಕಾರಗಳು ಮತ್ತು ನಾಗರಿಕರು ಒಟ್ಟಾಗಿ ಹೆಜ್ಜೆಯಿಡಬೇಕಾದ, ಉಳಿಯಬೇಕಾದ ಸಮಯ ಇದು. ಉದಾಸೀನತೆಗೆ ಸ್ಥಳವಿಲ್ಲ. ಬೀಗ ಹಾಕಿರುವ ಗ್ರಾಮಗಳು ಮತ್ತು ಪಟ್ಟಣಗಳಿಗೆ ನಿರಂತರವಾಗಿ ಅಗತ್ಯ ಸಾಮಗ್ರಿಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒದಗಿಸುವುದನ್ನು ಖಚಿತಪಡಿಸಿಕೊಳ್ಳಬೇಕು. ಭಾರತದಲ್ಲಿನ 50 ಕೋಟಿ ಕಾರ್ಮಿಕರ ಪೈಕಿ 85 ಪ್ರತಿಶತ ಸಂಘಟಿತ ವಲಯದ ಪಾಲನ್ನು ಹೊಂದಿದೆ. ಗ್ರಾಮಾಂತರ ಪ್ರದೇಶದಲ್ಲಿ ದಿನಗೂಲಿ ನೌಕರರ ಸಂಖ್ಯೆ ಹೆಚ್ಚು. ಸರ್ಕಾರಗಳ ಏಕೈಕ ಗುರಿ ಅವರ ಅಗತ್ಯಗಳನ್ನು ಪೂರೈಸುವುದು ಮತ್ತು ಸರಕುಗಳ ಕೊರತೆಯನ್ನು ತಡೆಯುವುದು. ಕೋವಿಡ್‌-19 ಸಾಂಕ್ರಾಮಿಕದಿಂದ ಭಾರತೀಯ ಗ್ರಾಮಗಳನ್ನು ರಕ್ಷಿಸಲು ಸಾಧ್ಯವಾದರೆ, ಭಾರತವು ಈ ರೋಗ ನಿಯಂತ್ರಣದಲ್ಲಿ ಬಹುತೇಕ ಯಶಸ್ವಿಯಾಗುತ್ತದೆ. ಪ್ರತಿಯೊಬ್ಬ ನಾಗರಿಕನು ಒಗ್ಗಟ್ಟಿನಿಂದ ಚಲಿಸಿದಾಗ ಮಾತ್ರ, ಕೋವಿಡ್‌-19 ವಿರುದ್ಧದ ಸಾಮೂಹಿಕ ಯುದ್ಧದಲ್ಲಿ ದೇಶವು ಜಯಗಳಿಸುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.