ETV Bharat / bharat

ಸಶಸ್ತ್ರ ಪಡೆಗಳೊಂದಿಗೆ ಸನ್ನದ್ಧವಾಗಿರಿ: ಸೇನೆಗೆ ಸಿಂಗ್​ ಕರೆ

ದೇಶಾದ್ಯಂತ ವ್ಯಾಪಿಸಿರುವ ಕೊರೊನಾ ವೈರಸ್​​ನೊಂದಿಗೆ ನಾವು ಈಗಾಗಲೇ ಹೋರಾಟ ನಡೆಸುತ್ತಿದ್ದು, ಯಾವುದೇ ಸಂದರ್ಭದಲ್ಲಿ ಎದುರಾಳಿಗಳನ್ನು ಎದುರುಸಿಲು ಸಶಸ್ತ್ರ ಪಡೆಗಳೊಂದಿಗೆ ಸನ್ನದ್ಧವಾಗಿರಬೇಕು ಎಂದು ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಸೇನೆಗೆ ತಿಳಿಸಿದ್ದಾರೆ.

Rajnath to forces
ಸೇನೆಗೆ ಸಿಂಗ್​ ಕರೆ
author img

By

Published : Apr 24, 2020, 9:24 PM IST

ನವದೆಹಲಿ: ಕೊರೊನಾ ವೈರಸ್​​​​​ನೊಂದಿಗೆ ಹೋರಾಡುತ್ತಿರುವ ಈ ಸಂದರ್ಭದಲ್ಲಿಯೂ ನಾವು ನಮ್ಮ ಸಶಸ್ತ್ರ ಪಡೆಗಳ ಸಿದ್ದತೆ ಹಾಗೂ ತಮ್ಮ ಕಾರ್ಯಾಚರಣೆಯ ಸಿದ್ಧತೆಯೊಂದಿಗೆ ತಯಾರಾಗಿರಬೇಕು, ಯಾವುದೇ ಸಂದರ್ಭದಲ್ಲಿಯೂ ಎದುರಾಳಿಗಳನ್ನು ಎದುರಿಸುವಂತಿರಬೇಕು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ಹೇಳಿದ್ದಾರೆ.

ಭಾರತೀಯ ಸೇನೆಯ ಕಾರ್ಯಾಚರಣೆಯ ಸನ್ನದ್ಧತೆ ಮತ್ತು ಎಲ್ಲ ಕಮಾಂಡರ್‌ಗಳ ಮುಖ್ಯಸ್ಥರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಿಂಗ್ ಮಾತುಕತೆ ನಡೆಸಿದ್ದು, ಕೊರನಾ ವಿರುದ್ದ ಹೋರಾಡಲು ಯಾವೆಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪರಿಶೀಲಿಸಿದರು.

ಸೇನೆ ವತಿಯಿಂದ ಸ್ಥಳೀಯ ನಾಗರಿಕ ಆಡಳಿತಕ್ಕೆ ನೀಡಲಾದ ನೆರವು ಮತ್ತು ಕೋವಿಡ್ -19 ರ ವಿರುದ್ಧ ಹೋರಾಡಲು ಕೈಗೊಂಡ ಪೂರ್ವಸಿದ್ಧತಾ ಕ್ರಮಗಳಿಗಾಗಿ ಸಶಸ್ತ್ರ ಪಡೆಗಳ ಪಾತ್ರವನ್ನು ಸಿಂಗ್ ಇದೇ ವೇಳೆ,ಶ್ಲಾಘಿಸಿದರು.

ಕೋವಿಡ್ -19 ರೊಂದಿಗೆ ಹೋರಾಡುತ್ತಿರುವಾಗ ಪಡೆಗಳು ತಮ್ಮ ಕಾರ್ಯಾಚರಣೆಯ ಸನ್ನದ್ಧತೆಯನ್ನು ಖಚಿತಪಡಿಸಿಕೊಳ್ಳಬೇಕಿದೆ ಎಂದು ರಕ್ಷಣಾ ಸಚಿವರು ನಿರೀಕ್ಷಿಸಿದ್ದು, ಇದರಿಂದಾಗಿ ಎದುರಾಳಿಗಳು ಪ್ರಸ್ತುತ ಪರಿಸ್ಥಿತಿಯನ್ನು ಬಳಸಿಕೊಳ್ಳಲು ಸಾಧ್ಯವಾಗದು ಎಂದು ರಾಜನಾಥ್​​ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕೊರೊನಾ ವೈರಸ್​ ಸಾಂಕ್ರಾಮಿಕ ರೋಗದಿಂದಾಗಿ ಉಂಟಾದ ಆರ್ಥಿಕ ಹೊರೆಗಳನ್ನು ಗಮನದಲ್ಲಿಟ್ಟುಕೊಂಡು, ವ್ಯರ್ಥವಾಗುವ ಅಂಶಗಳನ್ನು ತಪ್ಪಿಸಿ, ಆರ್ಥಿಕ ಸಂಪನ್ಮೂಲಗಳ ಸದ್ಬಳಕೆಗೆ ಕ್ರಮಗಳನ್ನು ರೂಪಿಸುವಂತೆ ಸೇನಾ ಪಡೆಗಳಿಗೆ ನಿರ್ದೇಶನ ನೀಡಿದರು.

ಸಶಸ್ತ್ರ ಪಡೆಗಳ ಜಂಟಿ ಅಗತ್ಯತೆಯ ಬಗ್ಗೆ ಮಾತನಾಡಿದ ಸಿಂಗ್, ಕಮಾಂಡರ್ಸ್ ಇನ್ ಚೀಫ್‌ಗೆ ತ್ವರಿತವಾಗಿ ಸಾಧಿಸಬಹುದಾದ ಕಾರ್ಯಗಳನ್ನು ಗುರುತಿಸಲು ಮತ್ತು ಆದ್ಯತೆ ನೀಡುವಂತೆ ಮತ್ತು ಲಾಕ್‌ಡೌನ್ ನಂತರ ಆರ್ಥಿಕತೆಯ ಪುನರ್​ ರಚನೆಗೆ ಸಹಾಯವಾಗುವಂತಹ ಕಾರ್ಯಗಳ ಬಗ್ಗೆ ಚರ್ಚೆ ನಡೆಸಿದರು.

ಭಾರತೀಯ ಸೇನಾ ಪಡೆಯೊಳಗಡೆ ವೈರಸ್ ಹರಡುವುದನ್ನು ತಡೆಗಟ್ಟಲು ಹಾಗೂ ಸ್ಥಳೀಯ ನಾಗರಿಕ ಆಡಳಿತಕ್ಕೆ ನೀಡಲಾಗಿರುವ ಸಹಾಯವನ್ನು ಇದೇ ವೇಳೆ ಕಮಾಂಡರ್ಸ್ ಇನ್ ಚೀಫ್, ರಕ್ಷಣಾ ಸಚಿವರಿಗೆ ತಿಳಿಸಿದರು.

ಆಸ್ಪತ್ರೆಗಳಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಮೂಲಸೌಕರ್ಯವನ್ನು ಹೆಚ್ಚಿಸಲು ಹಾಗೂ ಅಗತ್ಯವಾದ ವೈದ್ಯಕೀಯ ಸಾಮಗ್ರಿಗಳನ್ನು ಸಮಯೋಚಿತವಾಗಿ ಸಂಗ್ರಹಿಸುವುದನ್ನು ಖಾತರಿಪಡಿಸಿದ ರಕ್ಷಣಾ ಸಚಿವಾಲಯವು, ಇತ್ತೀಚೆಗೆ ತುರ್ತು ಆರ್ಥಿಕ ಅಧಿಕಾರ ಹಂಚಿಕೆ ಮಾಡಿರುವುದು ಸಂತಸದಾಯಕವಾಗಿದೆ ಎಂದು ಕಮಾಂಡರ್‌ಗಳು ಇದೇ ವೇಳೆ, ರಕ್ಷಣಾ ಸಚಿವರಿಗೆ ಧನ್ಯವಾದ ತಿಳಿಸಿದರು.

ಕೇವಲ ಸೇನಾ ಪಡೆಗಳಿಗೆ ಮಾತ್ರವಲ್ಲದೇ, ಸ್ಥಳೀಯ ನಾಗರಿಕ ಆಡಳಿತಕ್ಕೂ ಪ್ರತ್ಯೇಕವಾಗಿ ಸೋಂಕಿತರೊಂದಿಗಿನ ಸಂಪರ್ಕವನ್ನು ತಡೆಯಲಾಗಿದೆ ಎಂದು ಕಮಾಂಡರ್‌ಗಳು ತಿಳಿಸಿದ್ದಾರೆ. ನಾಗರಿಕ ಆಡಳಿತವು ಇಚ್ಚೆಪಟ್ಟರೆ ಸ್ಥಳೀಯವಾಗಿ ಅಗತ್ಯ ಸೇವೆಗಳನ್ನು ನಿರ್ವಹಿಸಲು ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ ಎಂದು ಸೇನೆ ಇದೇ ವೇಳೆ, ತಿಳಿಸಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.