ETV Bharat / bharat

ಕಣಿವೆನಾಡಲ್ಲಿ ಮುಂದುವರೆದ ಗುಂಡಿನ ಮೊರೆತ, ಉಗ್ರರಿಗಾಗಿ ಶೋಧ - ಬುದ್ಗಾಂ ಜಿಲ್ಲೆ

ಜಮ್ಮು ಕಾಶ್ಮೀರದಲ್ಲಿ ಉಗ್ರರು ಮತ್ತು ಭಯೋತ್ಪಾದಕರ ನಡುವಿನ ಗುಂಡಿನ ಕಾಳಗ ಮುಂದುವರೆದಿದ್ದು, ಭಯೋತ್ಪಾದಕರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

budgam encounter
ಬುದ್ಗಾಂ ಎನ್​ಕೌಂಟರ್​
author img

By

Published : Jun 11, 2020, 7:38 AM IST

Updated : Jun 11, 2020, 10:48 AM IST

ಶ್ರೀನಗರ (ಜಮ್ಮು ಕಾಶ್ಮೀರ): ಕಣಿವೆ ನಾಡಿನಲ್ಲಿ ಗುಂಡಿನ ಮೊರೆತ ಕೇಳಿ ಬಂದಿದ್ದು, ಉಗ್ರರು ಹಾಗೂ ಸೇನೆಯ ನಡುವಿನ ಕಾದಾಟ ಮುಂದುವರೆದಿದೆ.

ನಿನ್ನೆಯಷ್ಟೇ ಶೋಪಿಯಾನ್​ನಲ್ಲಿ ಎನ್​ಕೌಂಟರ್ ನಡೆದು ಐವರು ಉಗ್ರರನ್ನು ಸೇನೆ ಹೊಡೆದುರುಳಿಸಿತ್ತು. ಈಗ ಬುದ್ಗಾಂ ಜಿಲ್ಲೆಯಲ್ಲಿ ಭಯೋತ್ಪಾದಕರು ಹಾಗೂ ಸೇನೆ ನಡುವೆ ಗುಂಡಿನ ಚಕಮಕಿ ನಡೆಯುತ್ತಿದೆ.

ಬೆಳ್ಳಂಬೆಳಗ್ಗೆ ಎನ್​ಕೌಂಟರ್​ ಶುರುವಾಗಿದ್ದು, ಭಯೋತ್ಪಾದಕರಿರುವ ನಿಖರ ಮಾಹಿತಿ ಆಧಾರದ ಮೇಲೆ ಪಠಾಣ್​ಪೋರಾ ಪ್ರದೇಶದಲ್ಲಿ ಶೋಧ ಕಾರ್ಯ ಶುರುವಾಗಿದೆ ಎಂದು ಹಿರಿಯ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅವಿತು ಕುಳಿತಿರುವ ಉಗ್ರರು ಹಾಗೂ ಸೇನೆ ನಡುವೆ ಗುಂಡಿನ ಚಕಮಕಿ ಇನ್ನೂ ನಡೆಯುತ್ತಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Last Updated : Jun 11, 2020, 10:48 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.