ETV Bharat / bharat

ಲಾಕ್​ಡೌನ್​ನಲ್ಲಿ ಭಾವನೆಗಳ ಹೊಯ್ದಾಟ ಲಾಕ್ ಮಾಡುವುದು ಹೇಗೆ? ಇಲ್ಲಿದೆ ಸಕಾರಾತ್ಮಕ ಚಿಂತನೆ!! - ಟ್ರಾಂಕ್ವಿಲ್ ಮೈಂಡ್ಸ್

ನಮ್ಮ ಕುಟುಂಬ ಹಾಗೂ ಬಂಧು ಬಾಂಧವರೊಡನೆ ನಿಕಟವಾಗಿ ಬೆರೆಯಲು ಲಾಕ್​ಡೌನ್​ ಅವಧಿ ಸುಸಂದರ್ಭವಾಗಿದೆ. ಆಫೀಸು, ವ್ಯವಹಾರಗಳ ನಿತ್ಯ ಜೀವನದಲ್ಲಿ ನಾವು ಬಯಸಿದರೂ ಮಕ್ಕಳು, ಹೆಂಡತಿ, ತಂದೆ-ತಾಯಿಗಳ ಕಡೆಗೆ ಹೆಚ್ಚು ಗಮನ ನೀಡಲಾಗುವುದಿಲ್ಲ. ಆದರೆ ಈಗ ಅದನ್ನೆಲ್ಲ ಪೂರೈಸುವ ಅವಕಾಶ ಸಿಕ್ಕಿದ್ದು, ಸಮಯವನ್ನು ಸದುಪಯೋಗಪಡಿಸಿಕೊಳ್ಳಿ ಎನ್ನುತ್ತಾರೆ ಮನೋರೋಗ ತಜ್ಞ ಡಾ. ಪ್ರವೀಣ ಕುಮಾರ ಚಿಂತನಪಂತಿ.

Emotional balance During Lockdown
Emotional balance During Lockdown
author img

By

Published : Apr 15, 2020, 6:12 PM IST

ನವದೆಹಲಿ: ಲಾಕ್​ಡೌನ್​ನ ಅವಧಿಯಲ್ಲಿ ವರ್ಕ್​ ಪ್ರಂ ಹೋಂ ಮಾಡುವವರು ಕೆಲ ಮಟ್ಟಿಗೆ ಅದರಲ್ಲಿ ಬ್ಯುಸಿ ಆಗಿದ್ದಾರೆ. ಅದನ್ನು ಹೊರತುಪಡಿಸಿದರೆ ಮನೆಯಿಂದ ಕೆಲಸ ಮಾಡುವವರಾಗಲಿ ಅಥವಾ ಸುಮ್ಮನೇ ಮನೆಯಲ್ಲಿ ಕುಳಿತಿರುವವರಾಗಲಿ ಎಲ್ಲರಿಗೂ ಕೊರೊನಾ ವೈರಸ್​ನದ್ದೇ ಜಪವಾಗಿದೆ. ಸುದ್ದಿ ವಾಹಿನಿಗಳು, ನ್ಯೂಸ್​ ಪೋರ್ಟಲ್​ಗಳು ಹೀಗೆ ಎಲ್ಲೆಡೆ ಕೊರೊನಾ ಆವರಿಸಿಕೊಂಡಿದೆ. ಕೊರೊನಾ ಕರ್ವ್​ ಹೇಗೆ ಮುನ್ನಡೆಯುತ್ತಿದೆ, ಇನ್ನಷ್ಟು ಕೇಸ್​ಗಳಾದಲ್ಲಿ ಲಾಕ್​ಡೌನ್ ಮತ್ತೆ ಮುಂದುವರೆಯುವುದಾ ಬರೀ ಇಂಥವೇ ಪ್ರಶ್ನೆಗಳು ಜನರ ಮನಸ್ಸನ್ನು ಇನ್ನಿಲ್ಲದಂತೆ ಕೊರೆಯುತ್ತಿವೆ.

ವೈಯಕ್ತಿಕ ಹಾಗೂ ಸಾಮಾಜಿಕ ಅನಿಶ್ಚಿತತೆಗಳು ಜನರ ಮನಸ್ಸಿನಲ್ಲಿ ಒತ್ತಡ, ಆತಂಕ ಹಾಗೂ ಭಯದ ವಾತಾವರಣ ಉಂಟು ಮಾಡುತ್ತಿವೆ. ಹಾಗಾದರೆ ಇದರಿಂದ ಪಾರಾಗುವ ದಾರಿ ಯಾವುದಾದರೂ ಇದೆಯಾ? ಕೊರೊನಾ ಬಗ್ಗೆ ಓದುವುದು, ನೋಡುವುದು ಹಾಗೂ ತಿಳಿದುಕೊಳ್ಳುವುದನ್ನು ಸಂಪೂರ್ಣ ಬಿಟ್ಟು ಬಿಡಬೇಕಾ ಅಥವಾ ಎಷ್ಟು ತಿಳಿದುಕೊಳ್ಳಬೇಕೆಂದು ನಿರ್ಧರಿಸಬೇಕಾ ಎಂಬೆಲ್ಲ ವಿಷಯಗಳ ಬಗ್ಗೆ ತಿಳಿಯೋಣ.

"ಕ್ರಿಕೆಟ್​ ಸ್ಕೋರ್​ ನೋಡುವ ಹಾಗೆ ಕೋವಿಡ್​-19 ಸುದ್ದಿಗಳನ್ನು ನಿರಂತರವಾಗಿ ನೋಡುವ ಅವಶ್ಯಕತೆ ಇಲ್ಲ. ದಿನಕ್ಕೊಂದು ಬಾರಿ ಅಥವಾ ಹೆಚ್ಚೆಂದರೆ ಎರಡು ಬಾರಿ ಸುದ್ದಿ ನೋಡಿದರೆ ಸಾಕು. ಮಾಧ್ಯಮಗಳಲ್ಲಿ ಕೊರೊನಾ ಕುರಿತಂತೆ ಸಾಕಷ್ಟು ಸಕಾರಾತ್ಮಕ ಸುದ್ದಿಗಳನ್ನೂ ತೋರಿಸಲಾಗುತ್ತಿದೆ. ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತಿರುವ ಆರೋಗ್ಯ ಸಿಬ್ಬಂದಿಯ ಬಗೆಗೂ ಮಾಧ್ಯಮಗಳು ತೋರಿಸುತ್ತಿವೆ. ಸಮಾಜದಲ್ಲಿ ಒಳ್ಳೆಯ ಘಟನೆಗಳು ನಡೆಯುತ್ತಿವೆ. ಅಂದರೆ ವಿಷಯವೊಂದನ್ನು ನಾವು ಯಾವ ದೃಷ್ಟಿಕೋನದಲ್ಲಿ ಗ್ರಹಿಸುತ್ತೇವೆ ಎಂಬುದು ಮುಖ್ಯವಾಗುತ್ತದೆ." ಎನ್ನುತ್ತಾರೆ ಹೈದರಾಬಾದನಲ್ಲಿರುವ ಟ್ರಾಂಕ್ವಿಲ್ ಮೈಂಡ್ಸ್​ ಸಂಸ್ಥೆಯ ಮನೋರೋಗ ತಜ್ಞ ಡಾ. ಪ್ರವೀಣ ಕುಮಾರ ಚಿಂತನಪಂತಿ.

"ನಮ್ಮ ಕುಟುಂಬ ಹಾಗೂ ಬಂಧು ಬಾಂಧವರೊಡನೆ ನಿಕಟವಾಗಿ ಬೆರೆಯಲು ಲಾಕ್​ಡೌನ್​ ಅವಧಿ ಸುಸಂದರ್ಭವಾಗಿದೆ. ಆಫೀಸು, ವ್ಯವಹಾರಗಳ ನಿತ್ಯ ಜೀವನದಲ್ಲಿ ನಾವು ಬಯಸಿದರೂ ಮಕ್ಕಳು, ಹೆಂಡತಿ, ತಂದೆ-ತಾಯಿಗಳ ಕಡೆಗೆ ಹೆಚ್ಚು ಗಮನ ನೀಡಲಾಗುವುದಿಲ್ಲ. ಆದರೆ, ಈಗ ಅದನ್ನೆಲ್ಲ ಪೂರೈಸುವ ಅವಕಾಶ ಸಿಕ್ಕಿದ್ದು, ಸಮಯವನ್ನು ಸದುಪಯೋಗಪಡಿಸಿಕೊಳ್ಳಿ. ಕುಟುಂಬ ವರ್ಗ ಅಥವಾ ಮಿತ್ರರು ಹತ್ತಿರದಲ್ಲಿರದಿದ್ದರೆ ಫೋನ್ ಕಾಲ್ ಅಥವಾ ವಿಡಿಯೋ ಕಾಲ್ ಮೂಲಕ ಸಂಪರ್ಕ ಮಾಡಿ, ಮನಬಿಚ್ಚಿ ಮಾತನಾಡಿ." ಎಂದು ಡಾ. ಪ್ರವೀಣ ಕುಮಾರ ಸಲಹೆ ನೀಡುತ್ತಾರೆ.

"ಆದಾಗ್ಯೂ ಸಂಕಷ್ಟದ ಸಂದರ್ಭದಲ್ಲಿ ಚಿಕ್ಕ ಸಮಸ್ಯೆಗಳು ದೊಡ್ಡದಾಗಿ ಕಾಡಬಹುದು. ಭಾವನೆಗಳು ತರ್ಕದ ಮೇಲೆ ಸವಾರಿ ನಡೆಸಬಹುದು. ಇಂಥ ಸಮಯದಲ್ಲಿ ತರ್ಕಬದ್ಧ ಹಾಗೂ ಸಂವೇದನಾಶೀಲರಾಗಿ ಆಲೋಚನೆ ಮಾಡಬೇಕು. ಯಾವಾಗಲೂ ವಾಸ್ತವಿಕ ಹಾಗೂ ಸಕಾರಾತ್ಮಕ ಭಾವನೆಯಿಂದಿರಬೇಕು. ಕೆಲವೇ ವಾರ ಕಳೆದರೆ ಮತ್ತೆ ಜೀವನ ಸಾಮಾನ್ಯವಾಗಲಿದೆ ಎಂಬುದರ ಅರಿವು ಹೊಂದಬೇಕು ಹಾಗೂ ಆ ನಿಟ್ಟಿನಲ್ಲಿ ಮುನ್ನಡೆಯಬೇಕು." ಎಂದು ಡಾ. ಪ್ರವೀಣ ಕುಮಾರ ಹೇಳುತ್ತಾರೆ.

ಕತ್ತಲೆಯ ಸಮಯದಲ್ಲಿ ಬೆಳಕನ್ನು ಹುಡುಕುವತ್ತ ಚಿತ್ತ ಹರಿಸಬೇಕು. ಕೊರೊನಾ ವೈರಸ್​ನ ಹೋರಾಟದಲ್ಲಿ ಭಾರತ ಗೆದ್ದೇ ಗೆಲ್ಲುತ್ತದೆ. ಅತಿ ಶೀಘ್ರದಲ್ಲೇ ನಮ್ಮೆಲ್ಲರ ಜೀವನ ಮೊದಲಿನಂತೆ ಸಾಮಾನ್ಯವಾಗಲಿದೆ ಎಂಬ ಸಕಾರಾತ್ಮಕ ದೃಷ್ಟಿಕೋನ ನಿಮ್ಮದಾಗಿರಲಿ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.