ETV Bharat / bharat

ಯುಪಿಎ ಅವಧಿಯಲ್ಲಿ ವಿಮಾನ ಹಗರಣ​: ಪ್ರಫುಲ್ ಪಟೇಲ್​ಗೆ ಸಮನ್ಸ್​

author img

By

Published : Jun 1, 2019, 8:30 PM IST

2005ರಲ್ಲಿ 43 ವಿಮಾನಗಳನ್ನು ಪೂರೈಸಲು ಏರ್​ಬಸ್​ನೊಂದಿಗೆ ಹಾಗೂ ಬೋಯಿಂಗ್​ನೊಂದಿಗೆ 68 ವಿಮಾನಗಳನ್ನು ಪೂರೈಸಲು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆ ಸಂದರ್ಭ ನಡೆದಿದೆ ಎನ್ನಲಾದ ವಿಮಾನ ಹಗರಣ ಸಂಬಂಧ ಅಂದಿನ ನಾಗರಿಕ ವಿಮಾನಯಾನ ಖಾತೆ ಸಚಿವ ಪ್ರಫುಲ್ ಪಟೇಲ್ ಅವರಿಗೆ ಜಾರಿ ನಿರ್ದೇಶನಾಲಯ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್​ ಜಾರಿ ಮಾಡಿದೆ.

ಪ್ರಫುಲ್ ಪಟೇಲ್

ನವದೆಹಲಿ: ಯುಪಿಎ ಅವಧಿಯಲ್ಲಿ ನಡೆದಿದೆ ಎನ್ನಲಾದ ವಿಮಾನ ಹಗರಣ ಸಂಬಂಧ ಕೇಂದ್ರದ ಮಾಜಿ ನಾಗರಿಕ ವಿಮಾನಯಾನ ಸಚಿವ ಪ್ರಫುಲ್ ಪಟೇಲ್ ಅವರಿಗೆ ಜಾರಿ ನಿರ್ದೇಶನಾಲಯ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್​ ಜಾರಿ ಮಾಡಿದೆ.

ಜೂನ್​ 6ರಂದು ನಡೆಯುವ ಹಗರಣದ ಕುರಿತ ವಿಚಾರಣೆಗೆ ಹಾಜರಾಗಬೇಕೆಂದು ಇಡಿ ಇಂದು ಸಮನ್ಸ್ ಜಾರಿಮಾಡಿದೆ. ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಇಡಿ ವಿಚಾರಣೆ ನಡೆಸುತ್ತಿದೆ. ಪ್ರಕರಣ ಸಂಬಂಧ 2017ರಲ್ಲಿ ಸುಪ್ರೀಂಕೋರ್ಟ್​ ನಿರ್ದೇಶನದಂತೆ ಸಿಬಿಐ ಎಫ್​ಐಆರ್​ ದಾಖಲಿಸಿತ್ತು.

ಇದೇ ಪ್ರಕರಣ ಸಂಬಂಧ ಎಷ್ಟು ಬಾರಿ ಸಮನ್ಸ್​ ಜಾರಿ ಮಾಡಿದರೂ ವಿಚಾರಣೆಗೆ ಹಾಜರಾಗದ ಮಾಜಿ ಏರ್​ಬಸ್​ ಇಂಡಿಯಾದ ಮುಖ್ಯಸ್ಥ ಕಿರಣ್ ರಾವ್ ಅವರ ವಿರುದ್ಧ ಜಾಮೀನು ರಹಿತ ವಾರಂಟ್​ ಜಾರಿ ಮಾಡುವಂತೆ ಇಡಿ, ವಿಶೇಷ ನ್ಯಾಯಾಲಯನ್ನು ಕೋರಿದೆ.

ಏನಿದು ಪ್ರಕರಣ?

2005ರಲ್ಲಿ 43 ವಿಮಾನಗಳನ್ನು ಪೂರೈಸಲು ಏರ್​ಬಸ್​ನೊಂದಿಗೆ ಹಾಗೂ ಬೋಯಿಂಗ್​ನೊಂದಿಗೆ 68 ವಿಮಾನಗಳನ್ನು ಪೂರೈಸಲು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಒಟ್ಟು 111 ವಿಮಾನಗಳಿಗಾಗಿ ಗುತ್ತಿಗೆ ನೀಡಲು 70 ಸಾವಿರ ಕೋಟಿ ರೂ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಈ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಲಾಗಿದೆ.

ಪ್ರಕಣದ ತನಿಖೆ ನಡೆಸುತ್ತಿರುವ ಇಡಿ ಈಗಾಗಲೇ ಹಲವು ನಾಗರಿಕ ವಿಮಾನಯಾನ ಇಲಾಖೆಯ ಅಧಿಕಾರಿಗಳ ಹೇಳಿಕೆ ಸಂಗ್ರಹಿಸಿದೆ. ಇತ್ತೀಚೆಗೆ ಚಾರ್ಜ್‌ಶೀಟ್ ಸಲ್ಲಿಸಿರುವ ಇಡಿ, ಪಟೇಲ್​ರ ಹೆಸರನ್ನೂ ಸೇರಿಸಿದೆ.

Intro:Body:

 Praful Patel

Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.