ನವದೆಹಲಿ : ಹಲವು ಪ್ರಮುಖ ಪ್ರಕರಣಗಳ ತನಿಖೆಯನ್ನು ಯಶಸ್ವಿಯಾಗಿ ನಡೆಸುತ್ತಿರುವ ಕೇಂದ್ರ ತನಿಖಾ ದಳ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯ (ಇಡಿ) ವಿದೇಶಕ್ಕೆ ಪರಾರಿಯಾಗಿರುವ ಕಿಂಗ್‌ಫಿಶರ್ ಏರ್‌ಲೈನ್ಸ್ ಸಂಸ್ಥಾಪಕ ವಿಜಯ್ ಮಲ್ಯ ಮತ್ತು ಡೈಮಂಟೈರ್ ವ್ಯಾಪಾರಿ ನೀರವ್ ಮೋದಿಯನ್ನು ಭಾರತಕ್ಕೆ ಕರೆ ತರುವಲ್ಲಿ ಇನ್ನೂ ಕಾನೂನು ಹೋರಾಟವನ್ನು ಮುಂದುವರೆಸಿದೆ.
ಸಿಬಿಐ ಮತ್ತು ಇಡಿ ಐಸಿಐಸಿಐ ಬ್ಯಾಂಕ್ ಮಾಜಿ ವ್ಯವಸ್ಥಾಪಕ ನಿರ್ದೇಶಕ ಚಂದಾ ಕೊಚ್ಚರ್ ಒಳಗೊಂಡ ಐಸಿಐಸಿಐ - ವಿಡಿಯೋಕಾನ್ ಸಾಲ ಪ್ರಕರಣ ಮತ್ತು ಸಂಸ್ಥಾಪಕ ರಾಣಾ ಕಪೂರ್ ಒಳಗೊಂಡ ಯೆಸ್ ಬ್ಯಾಂಕ್ ಹಗರಣ ಸೇರಿದಂತೆ ಹಲವಾರು ಪ್ರಮುಖ ಪ್ರಕರಣಗಳಲ್ಲಿ ಪ್ರಗತಿ ಸಾಧಿಸಿದೆ.
ಓದಿ : ಕೇಂದ್ರ ಸರ್ಕಾರ ಸಂವಿಧಾನವನ್ನು ಅಗೌರವಿಸುತ್ತಿದೆ: ಮೆಹಬೂಬಾ ಮುಫ್ತಿ ಆರೋಪ
3,600 ಕೋಟಿ ರೂ.ಗಳ ವಿವಿಐಪಿ ಅಗಸ್ಟಾ ವೆಸ್ಟ್ಲ್ಯಾಂಡ್ ಕಾಫರ್ ಹಗರಣ ಪ್ರಕರಣದಲ್ಲಿ ಚಾರ್ಜ್‌ಶೀಟ್ ದಾಖಲಿಸಿದೆ. ಅದೇ ರೀತಿ ಕಾಂಗ್ರೆಸ್ ನಾಯಕ ಪವನ್ ಬನ್ಸಾಲ್ ಸೋದರಳಿಯ ವಿಜಯ್ ಸಿಂಗ್ ಒಳಗೊಂಡ 2013ರ ರೈಲ್ವೆ ಲಂಚ ಪ್ರಕರಣದಲ್ಲಿ ಹೊಸ ಚಾರ್ಜ್ ಶೀಟ್ ಸಲ್ಲಿಕೆ ಸೇರಿದಂತೆ ಬಹುತೇಕ ಪ್ರಕರಣಗಳ ತನಿಖೆಯನ್ನು ಸಿಬಿಐ -ಇಡಿ ಮುಗಿಸಿದೆ. ಆದರೆ ವಿಜಯ್ ಮಲ್ಯ ಮತ್ತು ನೀರವ್ ಮೋದಿಯನ್ನು ವಿದೇಶದಿಂದ ಕರೆ ತರುವಲ್ಲಿ ಇನ್ನೂ ಕಾನೂನು ಸಮರ ನಡೆಸುತ್ತಲೇ ಇದೆ.
ಕಳೆದ ಮೇ 14 ರಂದು ತನ್ನ ಹಸ್ತಾಂತರದ ವಿರುದ್ಧ ವಿಜಯ್ ಮಲ್ಯ ಸಲ್ಲಿಸಿದ್ದ ಅರ್ಜಿಯನ್ನು ಯುಕೆ ಕೋರ್ಟ್ ವಜಾಗೊಳಿಸಿತ್ತು. ಕೆಲ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಮಲ್ಯ ಯುಕೆ ಹೈಕೋರ್ಟ್ ಮೆಟ್ಟಿಲೇರಿದ್ದ, ಆದರೆ, ಏಪ್ರಿಲ್ 20 ಮೇಲ್ಮನವಿಯನ್ನೂ ಯುಕೆ ಹೈಕೋರ್ಟ್ ವಜಾಗೊಳಿಸಿದೆ. ಹೀಗಾಗಿ, ಸಿಬಿಐ -ಇಡಿಯ ಹೋರಾಟಕ್ಕೆ ಇನ್ನಷ್ಟು ಬಲ ಬಂದಂತಾಗಿದೆ.