ಹೈದರಾಬಾದ್: ಇಂದು ಬೆಳಗ್ಗೆ 8:04ರಿಂದ 10.56ರವರೆಗೆ ಕಂಕಣ ಸೂರ್ಯಗ್ರಹಣ ಸಂಭವಿಸಲಿದ್ದು, ಈ ವೇಳೆ ಬಹುತೇಕ ದೇವಾಲಯಗಳ ಬಾಗಿಲು ಮುಚ್ಚಲಾಗುತ್ತೆ.
ಖಂಡಗ್ರಾಸ ಸೂರ್ಯಗ್ರಹಣ ರೀತಿಯಲ್ಲಿ ಈ ಗ್ರಹಣ ಸಂಭವಿಸಲಿರುವ ಕಾರಣ ಕೆಲವೊಂದು ರಾಜ್ಯಗಳ ಪ್ರಮುಖವಾಗಿ ಮುಂಬೈ, ಬೆಂಗಳೂರು, ದೆಹಲಿ, ಚೆನ್ನೈ, ಮೈಸೂರು ಹಾಗೂ ಕನ್ಯಾಕುಮಾರಿಯಲ್ಲಿ ಇದು ಕಾಣಿಸಿಕೊಳ್ಳಲಿದೆ. ಇದರ ಜತೆಗೆ ಆಫ್ರಿಕಾ, ಆಸ್ಟ್ರೇಲಿಯಾದಲ್ಲೂ ಇದು ಕಾಣಲಿದೆ. ಇದು ಮುಗಿಯುತ್ತಿದ್ದಂತೆ 2020ರ ಜೂನ್ 21ರಂದು ಮುಂದಿನ ಸೂರ್ಯಗ್ರಹಣ ಕಾಣಿಸಿಕೊಳ್ಳಲಿದೆ.
559 ವರ್ಷದ ಬಳಿಕ ಈ ರೀತಿಯ ವಿಸ್ಮಯ!
ಇಂದು ನಡೆಯಲಿರುವ ಸೂರ್ಯಗ್ರಹಣ ಅನೇಕ ಕಾಕತಾಳೀಯಗಳಿಗೆ ಕಾರಣವಾಗಲಿದ್ದು, ಗ್ರಹಣ ಮುಕ್ತಾಯಗೊಳ್ಳುತ್ತಿದ್ದಂತೆ ಒಂದೇ ರಾಶಿಚಕ್ರದಲ್ಲಿ 6 ಗ್ರಹ ಹೊಂದಿರುವ ಸೂರ್ಯ ಕಾಣಿಸಿಕೊಳ್ಳಲಿದ್ದಾನೆ. ಇದಾದ ಬಳಿಕ ಈ ರೀತಿ ಕಾಣಿಸಿಕೊಳ್ಳುವುದು ಬಹಳ ಅಪರೂಪ. ಹತ್ತು ವರ್ಷಗಳ ಹಿಂದೆ ಜನವರಿ 15, 2010ರಲ್ಲಿ ಸಹ ಕಂಕಣ ಸೂರ್ಯಗ್ರಹಣ ಸಂಭವಿಸಿ 11 ನಿಮಿಷ 8 ಸೆಕೆಂಡುಗಳ ಕಾಲವಿತ್ತು.
ರಾಜ್ಯದಲ್ಲಿ ಹೆಚ್ಚು ಮೋಡ ಇರುವ ಕಾರಣ ಕೆಲವೆಡೆ ಕಂಕಣ ಸೂರ್ಯಗ್ರಹಣ ಗೋಚರವಾಗುವ ಸಾಧ್ಯತೆ ಕಡಿಮೆ ಇದೆ. ಆದರೆ ಕೇರಳ ಮತ್ತು ತಮಿಳುನಾಡಿನ ಕೆಲವೊಂದು ಪ್ರದೇಶಗಳಲ್ಲಿ ಶೇ. 90ರಷ್ಟು ಸೂರ್ಯಗ್ರಹಣ ಗೋಚರವಾಗುತ್ತದೆ.
ಇಂದು ಬೆಳಗ್ಗೆ ಸಂಭವಿಸುವ ಸೂರ್ಯಗ್ರಹಣವನ್ನು ಬರಿಗಣ್ಣಿನಿಂದ ನೋಡಲೇಬಾರದು ಎಂದು ಅನೇಕರು ಸಲಹೆ ನೀಡಿದ್ದಾರೆ. ಸುರಕ್ಷತಾ ವಿಧಾನವಾದ ಸೋಲಾರ್ ಗಾಗಲ್ಸ್, ವೆಲ್ಡರ್ಸ್ ಗ್ಲಾಸ್, ಅಲ್ಟ್ರಾ ವೈಲೆಟ್ ರೇಸ್ ಮೂಲಕ ಗ್ರಹಣ ವೀಕ್ಷಿಸಬಹುದು.