ಕೋಲ್ಕತ್ತಾ: ಬಾಂಗ್ಲಾದೇಶದ ವಿರುದ್ಧ ನಡೆಯುತ್ತಿರುವ ಪಿಂಕ್ ಬಾಲ್ನ ಹಗಲು-ರಾತ್ರಿ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಉತ್ತಮ ಸ್ಥಿತಿಯಲ್ಲಿದ್ದು,2ನೇ ಟೆಸ್ಟ್ ಪಂದ್ಯದಲ್ಲೂ ಗೆಲುವು ಸಾಧಿಸುವುದು ಬಹುತೇಕ ಖಚಿತವಾಗಿದೆ.
ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 106ರನ್ಗಳಿಗೆ ಆಲೌಟ್ ಆಗಿರುವ ಬಾಂಗ್ಲಾ ತಂಡಕ್ಕೆ ಪ್ರತ್ಯುತ್ತರವಾಗಿ ಟೀಂ ಇಂಡಿಯಾ 347ರನ್ಗಳಿಕೆ ಮಾಡಿ ಡಿಕ್ಲೇರ್ ಮಾಡಿಕೊಂಡಿದೆ. ಈ ವೇಳೆ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. 194 ಎಸೆತಗಳಲ್ಲಿ 18 ಬೌಂಡರಿ ಸೇರಿ 136ರನ್ಗಳಿಕೆ ಮಾಡಿದ್ದ ವೇಳೆ ವಿರಾಟ್ ಕೊಹ್ಲಿ ಬೌಂಡರಿ ಗೆರೆಯತ್ತ ಅಟ್ಟಲು ಮುಂದಾದಾಗ ಬಾಂಗ್ಲಾ ಪ್ಲೇಯರ್ ತೈಜುಲ್ ಇಸ್ಲಾಮ್ ಅದ್ಭುತವಾಗಿ ಕ್ಯಾಚ್ ಪಡೆದುಕೊಳ್ಳುತ್ತಾರೆ.
-
The catch that stunned Kohli from Cricketism on Vimeo.
" class="align-text-top noRightClick twitterSection" data="The catch that stunned Kohli from Cricketism on Vimeo.
">The catch that stunned Kohli from Cricketism on Vimeo.
ಈ ವೇಳೆ ನಗುಮುಖದಿಂದಲೇ ವಿರಾಟ್ ಕೊಹ್ಲಿ ಪೆವಿಲಿಯನ್ ಕಡೆ ತೆರಳುತ್ತಿದ್ದಾಗ ಬಾಂಗ್ಲಾ ಬೌಲರ್ ಇಬಾದತ್ ಹುಸೈನ್ ಸೆಲ್ಯೂಟ್ ಹೊಡೆದಿದ್ದಾರೆ. ಇದೀಗ ಈ ವಿಡಿಯೋ ಎಲ್ಲಡೆ ವೈರಲ್ ಆಗಿದೆ. ಎರಡನೇ ಇನ್ನಿಂಗ್ಸ್ನಲ್ಲೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿರುವ ಬಾಂಗ್ಲಾ 6ವಿಕೆಟ್ನಷ್ಟಕ್ಕೆ 152ರನ್ಗಳಿಕೆ ಮಾಡಿದ್ದು, ಸೋಲಿನ ಸುಳಿಯಲ್ಲಿ ಸಿಲುಕಿಕೊಂಡಿದೆ.