ಪಟಿಯಾಲಾ: ಇಂಡಿಯನ್ ಗ್ರ್ಯಾಂಡ್ ಪ್ರಿಕ್ಸ್ನಲ್ಲಿ ದ್ಯುತಿ ಚಂದ್ ಮತ್ತೊಂದು ಚಿನ್ನದ ಪದ ಮುಡಿಗೇರಿಸಿಕೊಂಡಿದ್ದಾರೆ. ಇಲ್ಲಿನ ನೇತಾಜಿ ಸುಭಾಷ್ ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಸ್ಪೋಟ್ಸ್ನಲ್ಲಿ ನಡೆದ 100 ಮೀಟರ್ ಓಟದ ಸ್ಪರ್ಧೆಯಲ್ಲಿ ದ್ಯುತಿ 11. 42 ಸೆಕೆಂಡ್ನಲ್ಲಿ ಗುರಿ ತಲುಪುವ ಮೂಲಕ ಚಿನ್ನಕ್ಕೆ ಮುತ್ತಿಕ್ಕಿದರು.
ತಮಿಳುನಾಡಿನ ಅರ್ಚನಾ ಸುಶೀಂತ್ರನ್ 11.53 ಸೆಕೆಂಡ್ನಲ್ಲಿ ಗುರಿ ತಲುಪುವ ಮೂಲಕ ದ್ಯುತಿಗೆ ತೀವ್ರ ಪೈಪೋಟಿ ನೀಡಿ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರು. ಹಾಗೆಯೇ ಮನ್ವೀರ್ ಕೌರ್ ಎಂಬುವರು 12.28 ಸೆಕೆಂಡ್ನಲ್ಲಿ ಗುರಿ ಕ್ರಮಿಸಿ ಕಂಚಿನ ಪದಕಕ್ಕೆ ತೃಪ್ತಿ ಪಟ್ಟುಕೊಂಡರು.